Disappearing Village Sogadu, Hasty Lifestyle Has Swallowed Most of Healthy Life, Praveena Heroor Call

ಗಂಗಾವತಿ,07 : ನಗರದ ಹಿರೆಜಂತಕಲ್ ಅಂಗನವಾಡಿ ಕೇಂದ್ರದಲ್ಲಿ ಹಳ್ಳಿಯ ಸೊಗಡು ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಳ್ಳಿಯ ಜನ ಜೀವನದ ಮಕ್ಕಳ ಜೀವನ ಮಾತನಾಡಿದ ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರವೀಣ ಹೇರುರೂ ಇವರು ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಸೊಗಡುಮಾಯವಾಗುತ್ತಿದೆ
ಮಣ್ಣಿನ ಒಲೆ, ಮಣ್ಣಿನ ಮಡಿಕೆಗಳು ಇಂದು
ಬಲುಅಪರೂಪ ಖಾರ ರುಬ್ಬವ ಕಲ್ಲು ಗುಂಡು, ಧಾನ್ಯ
ಶೇಖರಿಸುತ್ತಿದ್ದ ಬಂಡಲ್‌ಗಳು ಆಧುನಿಕತೆಯ ಭರದಲ್ಲಿ ಮೂಲೆಗುಂಪಾಗುತ್ತಿವೆ. ಹಳ್ಳಿಯ ಸಂಪೂರ್ಣ ಚಿತ್ರಣವನ್ನು ತೆರೆದಿಡುತ್ತಿದ್ದ ಅಪೂರ್ವ ದೃಶ್ಯಗಳು ಇಲ್ಲಿ ಎಲ್ಲಾ ನಮ್ಮ ಶಿಕ್ಷಕರು ಹಾಗೂ ಸಹಾಯಕರು ಮತ್ತು ಪಾಲಕರು ಸೇರಿಕೊಂಡು ಮಕ್ಕಳಿಗೆ ಹಳ್ಳಿ ಎಂದರೆ ಗೊತ್ತಿರಲ್ಲಾ ಅದನ್ನು ಹಳ್ಳಿಯ ಜೀವನ ಹೇಗೆ ಎಂಬುದನ್ನು ಮಕ್ಕಳಿಗೆ ವೇಷಭೂಷಣ ಧರಿಸಿ ಆಡುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಜೀವನ ಶೈಲಿ ಬದಲಾಗುತ್ತಿದೆ. ಖಾರ ರುಬ್ಬವ ಕಲ್ಲಿನ ಜಾಗವನ್ನು ಮಿಕ್ಸಿ, ಡ್ರೈಂಡರ್ ಆಕ್ರಮಿಸಿಕೊಂಡಿವೆ. ಒನಕೆ, ಒರಳು ಕಲ್ಲು ಮದುವೆ ಮತ್ತಿತರ ಸಮಾರಂಭದ ಶಾಸ್ತ್ರಕ್ಕೆ ಮಾತ್ರ ಸೀಮಿತವಾಗುತ್ತಿವೆ. ಶೇಖರಿಸಿದ ಹಾಲು, ಮೊಸರು, ಮಜ್ಜಿಗೆ ಅಟ್ಟಣಿಗೆ ಸೇರುವ ಬದಲು ರೆಫ್ರಿಜರೇಟ್ ಒಳಗೆ ಭದ್ರ ಪಡಿಸಲಾಗುತ್ತಿದೆ. ನಾಲ್ಕು ದಶಕಗಳ ಹಿಂದೆ ಪ್ರತಿಯೊಂದು ಕುಟುಂಬದಲ್ಲಿ ಹಸುಗಳು, ಎಮ್ಮೆ, ಕುರಿ, ಕೋಳಿ ಸಾಕಾಣಿಕೆ ಇತ್ತು. ಕೃಷಿ ಚುಟವಟಿಕೆಯು ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳು, ತಿನಿಸುಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ಇರುತ್ತಿತ್ತು. ಆದರೆ ಪ್ರಸ್ತುತ ಅಂತಹ ವಾತಾವರಣ ಇಲ್ಲವಾಗಿದೆ. ಅಕ್ಕ ಪಕ್ಕದವರು ಸಹ ಅಪ್ಪಟ ಅಪರಿಚಿತರಂತೆ ಬದುಕುತ್ತಿರುವುದು ಆತಂಕಕಾರಿ ಸಂಗತಿ ಎನ್ನುತ್ತಾರೆ ಅದರಲ್ಲಿ ಮತ್ತೆ ಪ್ರತಿಯೊಂದು ಹಳ್ಳಿಯಲ್ಲಿ ಗೌಡ್ರು ಮತ್ತು ದಳಪತಿ ಮತ್ತು ಮೇಬರ್ ಹೇಗೆ ಇರುತ್ತಾರೆ ಎಂದು ಕೂಡ ಇಲ್ಲಿ ಮಕ್ಕಳಿಗೆ ವೇಷಭೂಷಣ ಹಾಕಿದ್ದಾರೆ,
ಹೆಚ್ಚು ದವಸ ಧಾನ್ಯ ಬೆಳೆದಾಗ ಅದನ್ನು ಮಣ್ಣಿನ ವಾಡೆ, ನೆಲದಲ್ಲಿನ ಹಗೆವು, ಕಣಜದಲ್ಲಿ ದಾಸ್ತಾನು ಮಾಡಲಾಗುತ್ತಿತ್ತು. ತೊಗರಿ, ಅವರೆ, ಅಲಸಂದೆ, ಹೆಸರು ಕಾಳು, ಇತರೆ ಕಡಿಮೆ ಬೆಳೆಯುವ ಧಾನ್ಯಗಳನ್ನು ಒಣಗಿದ ಬಾಳೆಪಟ್ಟೆಯನ್ನು ಬಳಸಿ, ಭತ್ತದ ಹುಲ್ಲಿನ ಬಿಗಿಯಾದ ಹಗ್ಗದಿಂದ ಸುತ್ತು ಹಾಕಿ, ಧಾನ್ಯಗಳು ಕೆಡದಂತೆ, ಹುಳುಗಳಿಂದ ಹಾಳಾಗದಂತೆ ಸಂರಕ್ಷಿಸಲಾಗುತ್ತಿತ್ತು. ಚೌಳು ಮಣ್ಣು, ಬೇವಿನ ಸೊಪ್ಪು ಮಿಶ್ರಣ ಮಾಡಿ ವಾರ್ಷಿಕ ಮುಂಗಾರು ಬಿತ್ತನೆಗೆ ಶೇಖರಿಸಲಾಗುತ್ತಿತ್ತು. ದಿನಬಳಕೆಗೆ ಪ್ರತ್ಯೇಕವಾಗಿ ಇಡಲಾಗುತ್ತಿತ್ತು.
ಈಗ ಪ್ರತಿಯೊಂದು ಧಾನ್ಯಕ್ಕೂ ಗೋಣಿ ಚೀಲ, ಪ್ಲಾಸ್ಟಿಕ್ ಚೀಲ ಬಳಕೆ ಮಾಡಲಾಗುತ್ತಿದೆ. ರಾಸಾಯಿನಿಕ ಗೊಬ್ಬರ ಬಳಸಿ ಬೆಳೆಯುವ ಧಾನ್ಯಗಳಲ್ಲಿ ಶಕ್ತಿಯೇ ಇರುವುದಿಲ್ಲ. ಪರಿಣಾಮವಾಗಿ ಬಿ.ಪಿ, ಸಕ್ಕರೆ ಕಾಯಿಲೆಯಂತಹ ರೋಗಗಳು ಬರುತ್ತಿವೆ ಎನ್ನುತ್ತಾರೆ ಹಳ್ಳಿಯ ಮನೆಗಳಲ್ಲಿ ಮೊಸರು ಕಡೆದು ಮಜ್ಜಿಗೆ ಮಾಡಲಾಗುತ್ತಿತ್ತು. ತುಪ್ಪ ಕಾಯಿಸಿದರೆಅದರ ಪರಿಮಳ ಇಡೀ ಕೇರಿಗೆ ಬೀರುತ್ತಿತ್ತು. ಸಾಂಬಾರ ಪುಡಿಗಳನ್ನು ಮನಸಿದ್ಧ ಪಡಿಸಿಕೊಳ್ಳಲಾಗುತ್ತಿತ್ತು.
ಈಗ ಅವೆಲ್ಲ ಇಲ್ಲ. ಪ್ರತಿಯೊಂದು ರೆಡಿಮೇಡ್ ಆಹಾರ ಎನ್ನುತ್ತಾರೆ ಎಂದರು
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕರಾದ ನಿಂಗಮ್ಮ ಮುದಗಲ್,ಅಂಗನವಾಡಿ ಶಿಕ್ಷಕರಾದ ಸುನಿತಾ ಅರಣುಕುಮಾರ,ಶರಣಮ್ಮ ಕಲ್ಮಠ,ನೀಲಮ್ಮ, ರೇಣುಕಾ ಶೆಟ್ಟರ,ಅಂಗನವಾಡಿ ಸಹಾಯಕಿಯಾರದ ಇಂದ್ರಾಮ್ಮ,ಸಕುಬಾಯಿ,ರೇಷ್ಮ,ಅನಿತಾ ಹಾಗೂ ಪಾಲಕರು ಸೇರಿದಂತೆ ಇತರರು ಇದ್ದರು