Breaking News

ಮೇ ಸಾಹಿತ್ಯ ಮೇಳದ ಸಂಘಟನಾ ಸಭೆಯ ನಡಾವಳಿಗಳು

Proceedings of the organizing meeting of May Sahitya Mela..

ಜಾಹೀರಾತು
Screenshot 2024 02 05 20 22 19 15 6012fa4d4ddec268fc5c7112cbb265e7 297x300

Proceedings of the organizing meeting of May Sahitya Mela..

ನಿನ್ನೆ ಫೆ 4 ರಂದು ಕೊಪ್ಪಳದಲ್ಲಿ ಮೇ ಸಾಹಿತ್ಯ ಮೇಳದ 10 ನೇ ಆವೃತ್ತಿಯನ್ನು ಕೊಪ್ಪಳದಲ್ಲಿ ಸಂಘಟಿಸುವ ಕುರಿತು ಸಂಘಟನಾ ಸಭೆ ನಡೆಯಿತು

ಸಭೆಯಲ್ಲಿ ಡಾ. ವಿ ಬಿ ರಡ್ಡೇರ, ರವಿತೇಜ ಅಬ್ಬಿಗೇರಿ, ಮಹಾಂತೇಶ ಮಲ್ಲನಗೌಡರ, ಈಶ್ವರ ಹತ್ತಿ, ಅಶೋಕ ಬರಗುಂಡಿ, ಡಾ ಬಸವರಾಜ ಪೂಜಾರ, ಡಾ ಸಿದ್ಲಿಂಗಪ್ಪ ಕೊಟ್ನಿಕಲ್, ಅಂದಪ್ಪ ಬೆಣಕಲ್ಲ, ಡಿ. ಎಂ. ಬಡಿಗೇರ, ಬಿ. ಶ್ರೀನಿವಾಸ, ಮಹೇಶ ಬಳ್ಳಾರಿ, ಅನಿಲ ಹೊಸಮನಿ, ಡಾ. ಮಹೇಶ ಪೊಲೀಸ ಪಾಟೀಲ, ವಿಮಲಾ ಇನಾಮದಾರ, ಡಾ. ಸಂಗಮೇಶ ತಮ್ಮನಗೌಡರ, ವೀರಣ್ಣ ಹುರಕಡ್ಲಿ, ಕುರುವತ್ತಿಗೌಡ ಪೊಲೀಸ ಪಾಟೀಲ, ವಿದ್ಯಾ ನಲವಾರ, ಮೆಹಬೂಬ ಮಕಾನದಾರ, ಚನ್ನಪ್ಪ ಸಂಗಮೇಶ್ವರ, ಶಂಕರ ಸರಳ, ಶೀಲಾ ಹಲಕುರ್ಕಿ, ಮೆಹಬೂಬ ಮಠದ, ಗವಿಸಿದ್ಧಪ್ಪ ಬಾರಕೇರ, ಶಿವಾನಂದ ಎಸ್ ಹೊಸಮನಿ, ಸಂಜಯದಾಸ ಕೌಜಗೇರಿ, ಎಸ್ ಎ ಮುಗದ, ಭುಜಂಗಸ್ವಾಮಿ, ಪುಷ್ಪಲತಾ ಏಳುಭಾವಿ, ಡಿ. ಎಚ್. ಪೂಜಾರ, ರುದ್ರಪ್ಪ ಭಂಡಾರಿ, ಅರುಣಾ ನರೇಂದ್ರ, ಶಂಕರ ಶೆಟ್ಟರ, ಹನುಮಂತ ಕಡದಳ, ಬಾಳಪ್ಪ ಎಸ್. ವೀರಾಪುರ, ಅಜಮೀರ ನಂದಾಪುರ, ರಮೇಶ ಕೋಳೂರ, ಮುತ್ತು ಬಿಳಿಯಲಿ, ಮುತ್ತು ಹಾಲಕೇರಿ, ಅಶೋಕ ಟಿ ಕಟ್ಟಿಮನಿ, ಮೈಲಾರಪ್ಪ ಉಂಕಿ, ರಾಮಲಿಂಗಯ್ಯ ವಿ. ಎಸ್, ಶಿರಾಜ್ ಬಿಸರಳ್ಳಿ, ಎಚ್. ವಿ. ರಾಜಾಭಕ್ಷಿ, ಕಾಶಪ್ಪ ಟಿ. ಸಿ., ಸಲೀಂ ಮಂಡಲಗೇರಿ, ಎಂ. ಬೆಲ್ಲದ, ಉಮೇಶ ಕಾತರಕಿ, ಅನ್ನಪೂರ್ಣ ಪದ್ಮಶಾಲಿ, ಅಶೋಕ ಓಜನಹಳ್ಳಿ, ಪ್ರದೀಪ ಟಿ, ಸಂಗಮೇಶ ಕಲ್ಮಂಗಿ, ಸೂಶಿ ಕೌಲಧಾರ, ನಿಂಗಜ್ಜ ಚೌದ್ರಿ ಶಹಾಪುರ, ಎಸ್. ಎ. ಗಫಾರ, ರಾಮಜ್ಜ, ಬಸವರಾಜ ನರೇಗಲ್, ಭೀಮಪ್ಪ ಹವಳಿ, ಕಳಕೇಶ ಗುಡ್ಲಾನೂರ, ಸೇರಿದಂತೆ 60 ಕ್ಕೂ ಹೆಚ್ಚು ಜನ ಸಾಹಿತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸಂಘಟಿಕರು, ಪಾಲ್ಗೊಂಡಿದ್ದರು.

ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು..

ಸಭೆಯಲ್ಲಿ ಮಾತಾಡಿದ 40ಕ್ಕೂ ಹೆಚ್ಚು ಜನ ಕೊಪ್ಪಳದಲ್ಲಿ 10 ನೇ ಮೇ ಸಾಹಿತ್ಯ ಮೇಳ ನಡೆಯಬೇಕು. ಅಗತ್ಯವಿರುವ ಸಹಕಾರ ಕೊಟ್ಟು ವಹಿಸುವ ಜವಾಬ್ದಾರಿ ಯನ್ನು ನಿರ್ವಹಿಸುವದಾಗಿ ಹೇಳಿದರು..

ಅಜಮೀರ ನಂದಾಪುರ ಅವರು ಮಾತ್ರ ಮೇ ಸಾಹಿತ್ಯ ಮೇಳವು ಜನರಲ್ಲಿ ಜಾಗೃತಿ ಮೂಡಿಸುವ , ಬಂಧುತ್ವ ಬೆಸೆಯುವ ಮತ್ತು ಜನ, ನಾಡಿನ ಹಿತರಕ್ಷಿಸಲು ಕೆಲಸ ಮಾಡುತ್ತಿದೆ. ಇಡಿ ಜಿಲ್ಲೆ ಅದರಲ್ಲೂ ವಿಶೇಷವಾಗಿ ಗಂಗಾವತಿ ಭಾಗವನ್ನು ಅಂಜನಾದ್ರಿ ಬೆಟ್ಟದ ನೆಪದಲ್ಲಿ ಕೋಮುವಾದಿಕರಣ ಮಾಡುವ ಕಾರ್ಯವನ್ನು ವಿಭಜಿಸುವ ಶಕ್ತಿಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಹೀಗಾಗಿ ಇಂಥ ವಿಭಜನಾ ಶಕ್ತಿಗಳಿಗೆ ಸರಿಯಾದ ಉತ್ತರ ಕೊಡುವ ಕೆಲಸವನ್ನು ಮೇ ಸಾಹಿತ್ಯ ಮೇಳ ಸಮರ್ಥವಾಗಿ ಮಾಡುತ್ತದೆ. ಆದ್ದರಿಂದ 10 ನೇ ಮೇ ಸಾಹಿತ್ಯ ಮೇಳ ಗಂಗಾವತಿಯಲ್ಲಾದರೆ ಉತ್ತಮ. ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುವ ಜವಾಬ್ದಾರಿ ನಮಗಿರಲಿ ಎಂದರು.

10 ನೇ ಮೇ ಸಾಹಿತ್ಯ ಮೇಳವನ್ನು ಮೇ 25 ಮತ್ತು 26 ರಂದು ಸಂಘಟಿಸಲು ನಿರ್ಧಾರ ಮಾಡಲಾಯ್ತು. ಬಿ. ಶ್ರೀನಿವಾಸ 10 ನೇ ಮೇ ಸಾಹಿತ್ಯ ಮೇಳ ಒಂದು ಮೈಲುಗಲ್ಲಾಗುವಂತೆ ಸಂಘಟಿಸಬೇಕಿದೆ ಎಂದರು. ಅನಿಲ ಹೊಸಮನಿ ಅವರು ಇದು ಜನರಿಗಾಗಿ, ಜನರೆ ನಿಂತು ಸಂಘಟಿಸುವ ರಾಜ್ಯದ ಏಕೈಕ ಸಾಹಿತ್ಯ ಮೇಳ ಇದಾಗಿದೆ ಎಂದರು. ರವಿತೇಜ ಅಬ್ಬಿಗೇರಿ, ಮಹಾಂತೇಶ, ಡಾ. ವಿ. ಬಿ. ರಡ್ಡೇರ, ಅಶೋಕ ಬರಗುಂಡಿ ಅವರು ಹೊಣೆಹೊತ್ತು ಕಾರ್ಯ ನಿರ್ವಹಿಸುದಾಗಿ ಹೇಳಿದರು.

ಯುವಜನ, ದುಡಿಯುವ ವರ್ಗ, ಮಹಿಳೆಯರನ್ನು, ದೇಶದಲ್ಲಿ ಸಧ್ಯ ನಡೆಯುವ ವಿದ್ಯಮಾನ ಒಳಗೊಳ್ಳಬೇಕು. ಮೇ ಸಾಹಿತ್ಯ ಮೇಳದ ಸಿದ್ಧಾಂತವಾದ ಸಾಮಾಜಿಕ ನ್ಯಾಯಕ್ಕನುಗುಣವಾಗಿ ಎಲ್ಲವೂ ಇರಬೇಕು. ತಾಲೂಕ ಮಟ್ಟದಲ್ಲಿ ಇಂಥ ಸಭೆಗಳಾಗಬೇಕು

ಎಂಬುದೂ ಸಭೆಯ ಒಟ್ಟು ಚರ್ಚೆಯ ಅಭಿಪ್ರಾಯ ಆಗಿತ್ತು

ಈ ಮೊದಲ ಸಭೆಯಲ್ಲಿಯೇ ಸ್ವಯಂ ಆಗಿ ಡಾ. ಸಿದ್ದಲಿಂಗಪ್ಪ ಕೊಟ್ನಿಕಲ್, ಡಾ. ಬಸವರಾಜ ಪೂಜಾರ, ಶೀಲಾ ಹಲಕುರ್ಕಿ, ಡಾ. ವಿ. ಬಿ. ರಡ್ಡೇರ ಅವರು ತಾವು ಕನಿಷ್ಠ 6-8 ಜನಗಳಿಗೆ ವಸತಿ ವ್ಯವಸ್ಥೆ ಮಾಡುವದಾಗಿ ಜತೆಗೆ ನಮ್ಮಲ್ಲಿ ಉಳಿಯುವವರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಮತ್ತು ಮೇಳಕ್ಕಾಗಿ ನೀವು ವಹಿಸುವ ಎಲ್ಲ ತರದ ಜವಾಬ್ದಾರಿಯನ್ನು ವಹಿಸುವದಾಗಿ ಹೇಳಿದರು. ಮಹೇಶ ಬಳ್ಳಾರಿ ಅವರು ನಾನು ಮತ್ತು ರಮೇಶ ಬನ್ನಿಕೊಪ್ಪ ಸೇರಿ 25 ಜನಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುದಾಗಿ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ ಈ ಸಂದಿಗ್ಧ ಸಂದರ್ಭದಲ್ಲಿ ನಾವೆಲ್ಲ ಸೇರಿ ಈ ಮೇ ಸಾಹಿತ್ಯ ಮೇಳವನ್ನು ಸಂಘಟಿಸೋಣ. ಕೋಮುವಾದಿ ರಾಜಕಾರಣ ವ್ಯಾಪಕವಾಗಿ ಬೆಳೆಯುತ್ತಿರುವಾಗ ಸೌಹಾರ್ದ ಬೆಸೆಯುವ ಇಂಥ ಮೇಳವು ಕೊಪ್ಪಳ ಜಿಲ್ಲೆಗೆ ಅಗತ್ಯವಾಗಿದೆ ಎಂದರಲ್ಲದೆ ನಾನು ಮೇ ಸಾಹಿತ್ಯ ಮೇಳಕ್ಕೆ ಒಂದು ಸಾವಿರ ರೊಟ್ಪಿ ಕೊಡುವದಾಗಿ ಹೇಳಿದರು. ಹೀಗೆ ಸ್ವಯಂ ಆಗಿ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸೋಣ ಎಂದರು. ಡಾ. ಬಸವರಾಜ ಪೂಜಾರ ಎರಡು ದಿನದ ಕಾಳುಪಲ್ಲೆಗೆ ಬೇಕಾದ ಕಾಳು ಮಹಾಂತೇಶ ಮಲ್ಲನಗೌಡರ ಎರಡು ದಿನಗಳಿಗೆ ಬೇಕಾದ ಕಾಯಿಪಲ್ಲೆ, ಅಜಮೀರ ನಂದಾಪುರ ಅವರು ಮೇ ಸಾಹಿತ್ಯ ಮೇಳಕ್ಕೆ ಬೇಕಾಗುವಷ್ಟು ಅಕ್ಕಿ, ಅಶೋಕ ಕಟ್ಟಿಮನಿ ಅವರು ಸಿಹಿ ವ್ಯವಸ್ಥೆ, ರತ್ನಾಕರ ಅವರು ನಾನ್ ವೆಜ್ ವ್ಯವಸ್ಥೆಗಾಗಿ ಬೇಕಾದ ಜವಾಬ್ದಾರಿ ವಹಿಸಿಕೊಂಡರು. ಮೇ ಸಾಹಿತ್ಯ ಮೇಳವೇ ಹೀಗೆ ಜನಗಳ ಸಹಭಾಗಿತ್ವದಲ್ಲಿ ನಡೆಯುವಂಥದ್ದು..
ಉಳಿದದ್ದನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತಗೆದುಕೊಳ್ಳಲು ತೀರ್ಮಾನಿಸಿತು.

ಈ ಸಭೆ ನಡೆಯಲು ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಿದ ಶಾಮಣ್ಣ ಅವರಿಗೆ ಸಭೆ ಶರಣು ಹೇಳಿತು

ಮುಂದಿನ ಸಭೆ 25 ರಂದು ನಡೆಸಲು ಸಭೆ ತೀರ್ಮಾನ ಮಾಡಿತು. ಆ ಸಭೆಯಲ್ಲಿ ಸ್ಥಳ ಅಕೈರುಗೊಳಿಸುವುದು, 10 ನೇ ಮೇ ಸಾಹಿತ್ಯ ಮೇಳ ಮೇನ್ ಥೀಮು ಏನಾಗಿರಬೇಕು, ಉದ್ಘಾಟನೆ ಸ್ವರೂಪ, ಮೇನ್ ಸ್ಪೀಕರ್ ಆಗಿ ಯಾರನ್ನು ಕರೆಯಬೇಕು.. ವಸತಿ ವ್ಯವಸ್ಥೆಗಾಗಿ ಏನೇನು ಸಾಧ್ಯತೆಗಳಿವೆ.. ಆ ಎಲ್ಲ ಸಂಗತಿಗಳು ಮುಂದಿನ ಸಭೆಯ ಅಜೆಂಡಾ ಆಗಿರಲಿವೆ..

ಮುಂದಿನ ಸಭೆಗೆ ನಾವು ಇನ್ನಷ್ಟು ವಿಸ್ತೃತವಾಗಿ ಸೇರೋಣ. ಮೇ ಸಾಹಿತ್ಯ ಮೇಳದ ಯಶಸ್ವಿಗಾಗಿ ಇಂದಿನಿಂದಲೇ ಕಾರ್ಯ ನಿರ್ವಹಿಸೋಣ.. ಮೇ ಸಾಹಿತ್ಯ ಮೇಳವನ್ನು ಜನಗಳಿಗೆ ತಲುಪಿಸುವ ಕಾರ್ಯ ಮಾಡೋಣ..

ವರದಿ: ಮುತ್ತು ಬಿಳಿಯಲಿ

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.