Bear Conservation Area Announcement: Welcome

ಗಂಗಾವತಿ:ಗಂಗಾವತಿ-ಕನಕಗಿರಿ ವ್ಯಾಪ್ತಿಯಲ್ಲಿ ಕರಡಿ ಸಂರಕ್ಷಣಾ ಪ್ರದೇಶವನ್ನು ಘೋಷಣೆ ಮಾಡಿರುವುದನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಸ್ವಾಗತಿಸಿದೆ.
ಹಿರೇ ಸೂಳಿಕೆರೆ,ಹಾಸಗಲ್,ಚಿಲಕಮುಖಿ,ಅರಸಿನಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 2918 ಎಕರೆ ಪ್ರದೇಶವನ್ನು ಕರಡಿ ಸಂರಕ್ಷಣಾ ಪ್ರದೇಶ ಎಂದು ಘೋಷಣೆ ಮಾಡಿರುವುದನ್ನು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಗತಿಸಿದ್ದಾರೆ.
ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಹಿರೇ ಬೆಣಕಲ್ ವ್ಯಾಪ್ತಿಯಲ್ಲಿ ಕರಡಿ ಧಾಮ ಪ್ರಾರಂಭಿಸಬೇಕೆಂದು ಅಶೋಕಸ್ವಾಮಿ ಹೇರೂರ ಸರಕಾರವನ್ನು ಪದೇ ಪದೇ ಒತ್ತಾಯಿಸುತ್ತಾ ಬಂದಿದ್ದರು.
ಸರಕಾರ ಕರಡಿ ಸಂರಕ್ಷಣಾ ಪ್ರದೇಶ ಘೋಷಣೆ ಮಾಡಿರುವುದಕ್ಕಾಗಿ ,ಈ ಬಗ್ಗೆ ಮುತುವರ್ಜಿ ವಹಿಸಿದ ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿಯವರನ್ನು ಅವರು ಅಭಿನಂದಿಸಿದ್ದಾರೆ.
Kalyanasiri Kannada News Live 24×7 | News Karnataka
