Breaking News

ಇತ್ತೀಚೆಗೆಕಲಬುರ್ಗಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ಪ್ರತಿಮಗೆಅಪಮಾನವೆಸಗಿದ್ದನ್ನುಖಂಡಿಸಿಪ್ರತಿಭಟನೆಮೂಲಕ ಮನವಿ ಪತ್ರ ಸಲ್ಲಿಸಿದರು.

Recently in Kalaburgi Babasaheb submitted a letter of protest condemning the desecration of the statue of Dr. BR Ambedkar.

ಜಾಹೀರಾತು
Screenshot 2024 01 31 19 06 15 71 E307a3f9df9f380ebaf106e1dc980bb6 300x226

ಕನಕಗಿರಿ: ಜನೇವರಿ-೨೨ ರಂದು ರಾತ್ರಿ ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಕೋಟನೂರು (ಡಿ) ಎಂಬ ಗ್ರಾಮದಲ್ಲಿ ಲುಂಬಿಣಿ ಉದ್ಯಾನವನದಲ್ಲಿರುವ ಭಾರತ ರತ್ನ, ವಿಶ್ವಜ್ಞಾನಿ, ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮನುವಾದಿಗಳ ಗುಲಾಮಗಿರಿ ಮನಸ್ಥಿತಿಯುಳ್ಳ ದುಷ್ಕರ್ಮಿಗಳು, ಸಮಾಜ ಘಾತುಕರು. ದೇಶ ದ್ರೋಹಿಗಳು ಚಪ್ಪಲಿ ಹಾರ ಹಾಕುವುದರ ಮುಖಾಂತರ ಅವಮಾನ ಮಾಡಿದ್ದು, ಈ ಕೃತ್ಯದಲ್ಲಿ ಸುಮಾರು ೯ ರಿಂದ ೧೦ ಜನ ದುಷ್ಕರ್ಮಿಗಳು ಭಾಗಿಯಾಗಿದ್ದು, ಕೂಡಲೇ ಇವರನ್ನು ಬಂಧಿಸಿ ಶಿಸ್ತು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ ಬರಗೂರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Screenshot 2024 01 31 19 06 46 68 E307a3f9df9f380ebaf106e1dc980bb62 1024x749


ಅವರು ಜನೇವರಿ-೩೦ ರಂದು ಕನಕಗಿರಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈಗಾಗಲೇ ಈ ದುಷ್ಕೃತ್ಯದಲ್ಲಿ ಭಾಗಿಯಾದ ನಾಲ್ಕು ಜನರನ್ನು ಬಂಧಿಸಿದ್ದು, ಇನ್ನೂಳಿದ ಜನರನ್ನು ಬಂಧಿಸಿ ಗುಲ್ಬರ್ಗಾ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಡೆಯದಂತೆ ಸರ್ಕಾರವು ಗಂಭೀರವಾದ ಕಾನೂನುಗಳನ್ನು ಜಾರಿಗೆ ತರಬೇಕು. ದೇಶದಲ್ಲಿರುವ ಎಲ್ಲಾ ಮಹನೀಯರಿಗೆ ಸಂಬAಧಿಸಿದ. ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದ ಎಲ್ಲಾ ಸಮಾಜ ಸುಧಾರಕರ, ಸ್ವತಂತ್ರ ಹೋರಾಟಗಾರರ ಇನ್ನುಳಿದ ಎಲ್ಲಾ ಮಹನೀಯರ ಪುತ್ಥಳಿಗಳಿಗೆ ಈ ದೇಶದಲ್ಲಿನ ಯಾವೊಬ್ಬ ವ್ಯಕ್ತಿಯೇ ಆಗಿರಲಿ ಅವಮಾನ ಮಾಡುವ ಕೃತ್ಯದಲ್ಲಿ ತೊಡಗಿದರೆ ಅಂತವರನ್ನು ನೇರವಾಗಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಅಥವಾ ಶಾಶ್ವತವಾಗಿ ನಮ್ಮ ದೇಶದಿಂದ ಗಡಿಪಾರು ಮಾಡುವಂತಹ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕಿದೆ. ದೇಶದಲ್ಲಿ ಇಂತಹ ಕೃತ್ಯಗಳನ್ನು ಎಸಗುತ್ತಿರುವ ದುಷ್ಕರ್ಮಿಗಳು ಜಾತಿ ಜಾತಿಗಳ ಮದ್ಯ, ಧರ್ಮ-ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಮೂಡಿಸಿ ಕೋಮು ಗಲಭೆ ಎಸಗುವ ಕೃತ್ಯಗಳು ನಡೆಯುತ್ತಿವೆ. ಸಂಬAಧಪಟ್ಟ ಅಧಿಕಾರಿಗಳು ಜಿಲ್ಲೆಗಳಲ್ಲಿ, ತಾಲೂಕುಗಳಲ್ಲ. ಗ್ರಾಮಗಳಲ್ಲಿ, ಜನರ ಬಳಿ ಹೋಗಿ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಮತ್ತು ಸಮಾಜದಲ್ಲಿ ಶಾಂತಿಯನ್ನು ಸೃಷ್ಟಿಸುವಂತೆ ಯಾವುದೇ ತಾರತಮ್ಯವಿಲ್ಲದೇ ಈ ದೇಶದಲ್ಲಿ ಧರ್ಮ, ಜಾತಿ, ಕುಲ, ಮೇಲು, ಕೀಳು, ಬಡವ, ಶ್ರೀಮಂತ, ಅಸ್ಪೃಶ್ಯತೆ ಆಚರಣೆ, ಆ ಜಾತಿ ಈ ಜಾತಿ ಎನ್ನದೇ ನಾನು ನಮ್ಮವರು ಎನ್ನುವ ಮನೋಭಾವನೆಯನ್ನು ಜಾಗೃತಿ ಕಾರ್ಯಕ್ರಮಗಳ ಮೂಲಕ ತಿಂಗಳಿನ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವುದರೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ, ಕಾನೂನು ಬಾಹೀರವಾಗಿ ನಡೆಸುತ್ತಿರುವ, ಮಧ್ಯಪಾನವು ಅತೀ ಹೆಚ್ಚು ದಲಿತ ಸಮುದಾಯಗಳು, ಶೋಷಿತ ಸಮುದಾಯಗಳು, ಕೂಲಿ ಕಾರ್ಮಿಕರು, ಬಡವರು, ದಿನಗೂಲಿ ಕಾರ್ಮಿಕರು, ಹಿಂದುಳಿದ ವರ್ಗದವರು, ಕೇರಿ ಕೇರಿಗಳಲ್ಲಿ, ಓಣಿ ಬೀದಿಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ ಮನೆ ಮನೆಗಳಲ್ಲಿ ಬಿಸ್ಕೆಟ್ ಪಾಕೇಟ್ ತರ ಮಧ್ಯಪಾನವನ್ನು ಮಾರಾಟ ಮಾಡುತ್ತಿದ್ದಾರೆ. ಈ ವಿಷಯಕ್ಕೆ ಸಂಬAಧಿಸಿದAತೆ, ಅಬಕಾರಿ ಇಲಾಖೆಯವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇಂತಹ ಕೃತ್ಯಗಳು ನಿಲ್ಲಬೇಕಾದರೆ. ಜನರು ನೆಮ್ಮದಿ ಜೀವನ ನಡೆಸಬೇಕಾದರೆ ಮಧ್ಯಪಾನ, ಮಟ್ಟ, (ಓ.ಸಿ) ಇಸ್ಪೀಟ್. ನಂತಹ ಕಾನೂನು ಬಾಹೀರ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆದೇಶವನ್ನು ಹೊರಡಿಸಬೇಕು.
ಡಾ. ಬಿ.ಆರ್. ಅಂಬೇಡ್ಕರ್‌ರು ದೇಶದ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಸಮಾನತೆ, ಸಹೋದರತೆ, ಬ್ರಾತೃತ್ವವನ್ನು ಹೊಂದಿದ ಉತ್ಕರ್ಷವಾದ ಭವ್ಯ ಸಂವಿಧಾನವನ್ನು ನೀಡಿ ಇಡಿ ಶೋಷಿತ ಮಾನವ ಕುಲಕೋಟಿಯನ್ನು ಶಾಸನೋತ್ತರವಾಗಿ ಗುಲಾಮಗಿರಿಯ ಸಂಕೋಲೆಯಿAದ ಮುಕ್ತಿಗೊಳಿಸಿದ್ದಾರೆ. ಇಂತಹ ಒಬ್ಬ ವಿಶ್ವಾಖ್ಯಾತಿ ಭಾರತದ ಆಧುನಿಕ ಪಿತಾಮಹ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ದುಷ್ಕರ್ಮಿಗಳು ಕೀಳುಮಟ್ಟದ (ಚಪ್ಪಲಿ ಹಾರ ಹಾಕಿ) ಅವಮಾನ ಎಸಗಿದ್ದು ಪ್ರಜಾಪತ್ರಭುತ್ವ ಸರಕಾರ ಇರುವ ಪ್ರತಿಯೊಬ್ಬ ನಾಗರೀಕರು ತಲೇ ತಗ್ಗಿಸುವಂತಹ ಘಟನೆಯಾಗಿದೆ.
ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಹೃದಯ ಭಾಗದಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ರಾತ್ರಿ ಸಮಯದಲ್ಲಿ ಟೊಮೊಟೋ ಸಾಸ್ ಎರಚಿದ್ದಾರೆ. ಅಂತಹ ನಾಯಕರಿಗೆ ಅವಮಾನ ಎಸಗುತ್ತಿರುವುದು ಇಡೀ ನಮ್ಮ ದೇಶದ ನಾಗರಿಕರಿಗೆ ಆಗಿರುವಂತಹ ದೊಡ್ಡ ಅವಮಾನವಾಗಿರುತ್ತದೆ. ಹಾಗಾಗಿ ಕಳೆದ ೭-೮ ವರ್ಷಗಳಿಂದ ಈ ಕೃತ್ಯಗಳು ದೇಶ ಮತ್ತು ರಾಜ್ಯಗಳಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿರುವುದರಿಂದ ಮುಂದೆ ಒಂದು ದಿನ ಜನರು ಈ ದೇಶದ ಬಹುಸಂಖ್ಯಾತರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದಾವುದಕ್ಕೂ ದಾರಿ ಮಾಡಿಕೊಡದೇ ಕಠಿಣ ಕಾನೂನುಗಳನ್ನು ಈ ಕೂಡಲೇ ಜಾರಿಗೊಳಿಸಿಬೇಕೆಂದು ಒತ್ತಾಯಿಸಿ ಮಾನ್ಯರಲ್ಲಿ ಕಳಕಳಿಯಿಂದ ದೂರು ನೀಡುವುದರೊಂದಿಗೆ ಆಗ್ರಹಿಸುತ್ತಿದ್ದೇವೆ. ಹಾಗಾಗಿ ಇಂತಹ ಕೃತ್ಯಗಳನ್ನು ಎಸಗಿದ ಯಾವುದೇ ವ್ಯಕ್ತಿಯಾಗರಲೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕುಲಂಕುಷವಾಗಿ ತನಿಖೆ ಮಾಡಿ ಸತ್ಯತೆಯನ್ನು ಕಾನೂನಿಗೆ ದಾರಿ ತಪ್ಪಿಸುವ ಕೆಲಸ ಮಾಡದೇ ಸರಿಯಾದ ರೀತಿಯಲ್ಲಿ ಈ ಪ್ರಕರಣಗಳನ್ನು ಸಿ.ಐ.ಡಿ ತನಿಖೆಗೆ ವಹಿಸುವುದರೊಂದಿಗೆ ರಾಜ್ಯದ ಜನತೆಗೆ ನೆಮ್ಮದಿಯ ಜೀವನ ಹೊದಗಿಸಿಕೊಡುವಂತೆ ಆಗ್ರಹಿಸುತ್ತಿದ್ದೇವೆ. ಗಂಗಾವತಿಯಲ್ಲಿ ನಡೆದಂತಹ ಘಟನೆಯನ್ನು ಇಲ್ಲಿಯವರೆಗೆ ಗಂಭೀರವಾಗಿ ಪರಿಗಣಿಸದೇ ಸಂಬAಧಪಟ್ಟ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಡಾ. ಬಿ.ಆರ್.ಅಂಬೇಡ್ಕಲ್ ರವರ ವಿಚಾರದಲ್ಲಿ ಈ ರೀತಿಯಾಗಿ ದಾರಿ ತಪ್ಪಿಸುವಂತಹ ಕೆಲಸಗಳು ನಡೆಯಬಾರದು. ದೇಶ ಇಷ್ಟೊಂದು ಸುರಕ್ಷಿತ, ನೆಮ್ಮದಿ. ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ, ಸ್ತಿçÃಯರ ಸಮಾನತೆ, ಬಾತೃತ್ವ ಭಾವನೆ, ದುಡಿಯುವ ವರ್ಗದವರಿಗೆ, ಕೂಲಿಕಾರ್ಮಿಕರಿಗೆ, ದಿನಗೂಲಿ ಕಾರ್ಮಿಕರಿಗೆ, ಬಡವರಿಗೆ ಪ್ರತಿಯೊಬ್ಬರಿಗೂ ಬಾಬಾಸಾಹೇಬ್ ಅಂಬೇಡ್ಕರವರು ಬರೆದಿರುವ ಸಂವಿಧಾನವೇ ಕಾರಣವಾಗಿರುತ್ತದೆ.
ಸಮಾಜದಲ್ಲಿ ಪ್ರಚೋದನಕಾರಿ ಭಾಷಣಗಳ ಮೂಲಕ ಕೋಮುಗಲಭೆಗಳನ್ನು ಸೃಷ್ಟಿಸುವ ಉದ್ದೇಶವನ್ನು ಇಟ್ಟುಕೊಂಡು ಕಾನೂನು ಬಾಹೀರವಾಗಿ ತಲೆಯಲ್ಲಿ ಜಾತಿ ವ್ಯವಸ್ಥೆಯ ನೀಚ ಬುದ್ದಿಯಿಂದ ಒಂದು ಸಮುದಾಯವನ್ನು ಒಂದು ಧರ್ಮವನ್ನು ಕೀಳು ಮಟ್ಟದಲ್ಲಿ ಮಾತನಾಡುವುದರ ಮುಖಾಂತರ ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಲ್ಲಡ್ಕರ ಪ್ರಭಾಕರ ಭಟ್‌ರವರು ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಈ ಹಿಂದೆ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬರದೇ ಇರತಕ್ಕಂತಹ ಪೂರ್ವದಲ್ಲಿ ಆ ಹೆಣ್ಣು ಮಕ್ಕಳಿಗೆ ಗಂಡ ಯಾರು ಎಂದು ಗೊತ್ತಿರುತ್ತಿಲ್ಲ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರು ಅನುಸರಿಸುತ್ತಿದ್ದ ತಲಾಕ್-ತಲಾಕ್-ತಲಾಕ್ ಎನ್ನುವ ಕಾನೂನನ್ನು ತೆಗೆದ ನಂತರ ಅವರ ಗಂಡ ಯಾರು ಎಂದು ತಿಳಿದು ಬರುತ್ತಿದೆ. ಅಲ್ಲಿಯವರೆಗೆ ಅವರ ಗಂಡAದಿರು ಯಾರೆಂದು ಯಾರಿಗೂ ತಿಳಿಯುತ್ತಿರಲಿಲ್ಲ ಎಂದು ನಮ್ಮ ದೇಶದ ಸಂಸ್ಕೃತಿಯನ್ನು ಅಲ್ಲೆಗಳೆಯುವುದರೊಂದಿಗೆ ಅವಹೇಳನಕಾರಿಯಾಗಿ ಮಾತನಾಡಿದ ಇವರನ್ನು ಸೂಕ್ತ ಕಾನೂನು ಕ್ರಮ ಜರುಗಿಸಿ ಈ ಕೂಡಲೇ ದೇಶದಿಂದ ಗಡಿ ಪಾರು ಮಾಡಿ ಆದೇಶ ಮಾಡಬೇಕೆಂದು ನಮ್ಮ ಸಂಘಟನೆ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ರಾಜ್ಯ ಸಂಘಟನಾ ಸಂಚಾಲಕರಾದ ಯಲ್ಲಪ್ಪ ಹಲೀಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಕಾಶ ವೀರಾಪೂರ, ಕನಕಗಿರಿ ತಾಲೂಕ ಅಧ್ಯಕ್ಷರಾದ ಹನುಮೇಶ, ಗಂಗಾವತಿ ತಾಲೂಕ ಅಧ್ಯಕ್ಷರಾದ ಯಲ್ಲಪ್ಪ. ಎಮ್., ಪದಾಧಿಕಾರಿಗಳಾದ ಸುಭಾನ್‌ಸಾಬ, ಅನ್ವರ್, ಮುಲ್ಲಾರ್, ಅತಾ ಸಂಪAಗಿ, ವೆಂಕಟೇಶ.ಟಿ., ದೇವೇಂದ್ರ ಕಟ್ಟಿ ರೆಡ್ಡಿಹಾಳ, ದುರುಗೇಶ, ನಾಗರಾಜ ನರೇಗಲ್, ಮುರ್ತುಜಾಸಾಬ, ಓಂಕಾರಪ್ಪ ಈಳಿಗನೂರ,
ತಿಪ್ಪಣ್ಣ ಕಾರಟಗಿ, ಯಮನೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.