Protest on February 02 condemning the attack on Kurubara Hostel, Kanakadasara Plaques
ಗಂಗಾವತಿ: ಮಂಡ್ಯ ನಗರದಲ್ಲಿರುವ ಸಮಾಜದ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲು ಹೊಡೆದಿರುವ ಮತ್ತು ಶ್ರೀಕನಕದಾಸರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ಲೇಕ್ಸ್ ಹರಿದು ಹಾಕಿರುವ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀಕನಕದಾಸ ಕುರುಬರ ಹಾಲುಮತ ಸಮಾಜ ಹಾಗೂ ಹಾಲುಮತ ಸಮಾಜದ ವಿವಿಧ
ಸಂಘಟನೆಗಳ ನೇತೃತ್ವದಲ್ಲಿ ಫೆ.02 ರಂದು ಬೆಳ್ಳಿಗ್ಗೆ 10 ಗಂಟೆಗೆ ಬೈಕ್ ರ‍್ಯಾಲಿ ನಡೆಸಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಷ್ಟ ಭರಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷರಾದ ವಿಠಲಾಪೂರ ಯಮನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಅಂದಿನ ಹೋರಾಟ ಉದ್ದೇಶವನ್ನು ಮರೆತು ಉದ್ದೇಶಪೂರ್ವಕವಾಗಿ ಕುರುಬ ಹಾಲುಮತ ಸಮಾಜದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೆಲ ದುಷ್ಟ ವ್ಯಕ್ತಿಗಳು ಷಡ್ಯಂತ್ರ ನಡೆಸುವ ಫಲವಾಗಿ ಕುರುಬ ಸಮಾಜದ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲಿನಿಂದ ದಾಳಿ ನಡೆಸಿದ್ದರ ಪರಿಣಾಮ ಕಿಟಕಿ ಗಾಜು ಪುಡಿಪುಡಿಯಾಗಿವೆ. ಹಾಸ್ಟೆಲ್ ಗೆ ಕಟ್ಟಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ಲೇಕ್ಸ್ ಹಾಗೂ ಪೂಜ್ಯ ಶ್ರೀ ಕನಕದಾಸರ ಪ್ಲೇಕ್ಸ್ಗಳನ್ನು ಹರಿದು ಹಾಕಲಾಗಿದೆ. ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಸಮಾಜ ಮತ್ತು ಹಿಂದುಳಿದ ವರ್ಗಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ವಿಠಲಾಪೂರ ಯಮನಪ್ಪ ಎಚ್ಚರಿಸಿದ್ದಾರೆ.