
Preliminary meeting to celebrate Shivayogi Siddarama Jayanti


ಹನೂರು : ಶಿವಯೋಗಿ ಸಿದ್ಧರಾಮ ಜಯಂತಿ ಪ್ರಯುಕ್ತ ಶಾಸಕ ಎಂ.ಆರ್.ಮಂಜುನಾಥ್ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯು ಬೋವಿ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಜರುಗಿತು.
ಇದೆ ವೇಳೆ ಮುಖಂಡರು ಮಾತನಾಡಿ, ಚಿತ್ರದುರ್ಗ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಹಿಮ್ಮಡಿ ಸ್ವಾಮೀಜಿ ಅವರು ಜಯಂತಿಗೆ ಆಗಮಿಸಬೇಕಾಗಿದೆ ಹೀಗಾಗಿ ಇದೆ ಭಾನುವಾರದಂದು ಜಯಂತಿ ಸಂಬಂಧ ಮುಖಂಡರ ಸಭೆ ಏರ್ಪಡಿಸಲಾಗುವುದು ಬಳಿಕ ಶ್ರೀಗಳ ಸೂಚನೆ, ಮಾರ್ಗದರ್ಶನದಲ್ಲಿ ದಿನಾಂಕ ನಿಗಧಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಜಯಂತಿ ಮಾಡಲು ದಿನಾಂಕ ನಿಗಧಿಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಜಿಲ್ಲಾ ಬೋವಿ ಸಂಘದ ಗೌರವ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಎಸ್.ಆರ್ ಮಹದೇವ್, ಮುಖಂಡರಾದ ಕಾಳಿಯಪ್ಪ, ಕೃಷ್ಣ, ಚಿನ್ನರಾಜು, ರಂಗಸ್ವಾಮಿ ಮತ್ತಿತರರು ಹಾಜರಿದ್ದರು….




