An honest attempt to stop illegal activities in the Gangavati excise zone. Vitthal Pirgannavar, Zonal Inspector of Excise
ಗಂಗಾವತಿ: ಅಬಕಾರಿ ನಿರೀಕ್ಷಕರ ಕಛೇರಿ ಗಂಗಾವತಿ ವಲಯವು ೩ ತಾಲೂಕುಗಳನ್ನೊಳಗೊಂಡಿದ್ದು ಸದರಿ ಕಛೇರಿಯಲ್ಲಿ ೩ ಜನ ಅಧಿಕಾರಿಗಳು ಹಾಗೂ ೩ ಜನ ಖಾಯಂ ಸಿಬ್ಬಂದಿ ಮತ್ತು ೨ ಜನ ಪ್ರತಿ ನಿಯೋಜನೆ ಮೇರೆಗೆ ಇದ್ದು ಒಟ್ಟು ೫ ಜನ ಸಿಬ್ಬಂದಿಗಳು ಕರ್ತವ್ಯನಿರ್ವಹಿಸುತ್ತಿದ್ದಾರೆ. ವಲಯ ಕಛೇರಿಗೆ ಗಂಗಾವತಿ, ಕಾರಟಗಿ ೨ ಘನ ನ್ಯಾಯಾಲಯಗಳು ಇದ್ದು ಪ್ರತಿ ದಿನ ೨ ಜನ ಸಿಬ್ಬಂದಿಗಳು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಬೇಕಾಗುತ್ತದೆ. ಮುಂದುವರೆದು ವಲಯ ವ್ಯಾಪ್ತಿಯಲ್ಲಿ ಒಟ್ಟು ೭ ಮಾರ್ಗಗಳನ್ನಾಗಿ ವಿಂಗಡಿಸಿದ್ದು ಎಲ್ಲಾ ಮಾರ್ಗಗಳಲ್ಲಿ ಬರುವ ಹಳ್ಳಿಗಳಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಬೇಕಾಗುತ್ತದೆ. ಸಾರ್ವಜನಿಕರಿಂದ ಬಂದ ದೂರುಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ದಾಳಿ ಮಾಡಬೇಕಾಗುತ್ತದೆ ಹಾಗೂ ರಾತ್ರಿ ಗಸ್ತು ಕಾರ್ಯ ಮಾಡುತ್ತಾ ರಸ್ತೆಗಾವಲು ಮಾಡುತ್ತಾ ಸಂಶಯಾಸ್ಪದ ವಾಹನಗಳ ತಪಾಸಣೆ ಮಾಡಬೇಕಾಗುತ್ತದೆ ಹಾಗೂ ವಲಯ ವ್ಯಾಪ್ತಿಯಲ್ಲಿ ಒಟ್ಟು ೬೨ ಸನ್ನದು (ಮದ್ಯದ ಅಂಗಡಿಗಳು) ಇರುತ್ತವೆ. ಮೇಲಿಂದ ಮೇಲೆ ಸನ್ನದುಗಳ ತಪಾಸಣೆ ಮಾಡುತ್ತಾ ಸನ್ನದು ಷರತ್ತುಗಳ ಉಲ್ಲಂಘನೆಯಾಗದAತೆ ನಿಗಾ ವಹಿಸುತ್ತಾ ಸನ್ನದು ಷರತ್ತುಗಳ ಉಲ್ಲಂಘನೆಯಾದಲ್ಲಿ ಅಂತಹ ಸನ್ನದುಗಳ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಹೀಗೆ ರಾತ್ರಿ ಹಾಗೂ ಹಗಲು ವೇಳೆ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ಕಳ್ಳಭಟ್ಟಿ ಸರಾಯಿ, ಹೊರ ರಾಜ್ಯದ ಮದ್ಯ ಹಾಗೂ ನಕಲಿ ಮದ್ಯದ ಹಾವಳಿಯಾಗದಂತೆ ಮತ್ತು ಮಾದಕ (ಎನ್.ಡಿ.ಪಿ.ಎಸ್) ವಸ್ತುಗಳ ಮಾರಾಟವಾಗದಂತೆ ಇದರಿಂದ ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ನಿಗಾವಹಿಸಬೇಕಾಗುತ್ತದೆ. ಈ ರೀತಿ ನಾನು ವಿಠ್ಠಲ್ ಪಿರಗಣ್ಣವರ್ ಅಬಕಾರಿ ನಿರೀಕ್ಷಕನಾಗಿ ಮಾರ್ಚ್-೨೦೨೩ ರಲ್ಲಿ ಗಂಗಾವತಿ ವಲಯ ಕಛೇರಿಗೆ ಕರ್ತವ್ಯದ ಮೇಲೆ ಹಾಜರಾದ ಮೇಲೆ ಇಲ್ಲಿಯವರೆಗೆ ನಿಷ್ಠೆಯಿಂದ, ಪ್ರಮಾಣಿಕತೆಯಿಂದ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಾರದ ರಾಜ್ಯಸ್ವದ ಹಿತದೃಷ್ಟಿಯಿಂದ ಕರ್ತವ್ಯನಿರ್ವಹಿಸಿರುತ್ತೇನೆ.
ಅಬಕಾರಿ ನಿರೀಕ್ಷಕನಾಗಿ ನಾನು ಬಂದಾಗಿನಿAದ ವೈಯಕ್ತಿಕವಾಗಿ ಇಲ್ಲಿಯವರೆಗೆ ೧೪ ಘೋರ ಪ್ರಕರಣಗಳನ್ನು ದಾಖಲಿಸಿದ್ದು, ೧೨೦, ೧೫(ಎ) ಪ್ರಕರಣಗಳನ್ನು ದಾಖಲಿಸಿದ್ದು, ಸನ್ನದು (ಮದ್ಯ ಅಂಗಡಿ) ಮೇಲೆ ೨೨ ಬಿಎಲ್‌ಸಿ ಪ್ರಕರಣಗಳನ್ನು ದಾಖಲಿಸಿದ್ದು, ೧೭೬ ದಾಳಿಗಳನ್ನು ಮಾಡಲಾಗಿದೆ, ೫೩೨ ಲೀ ಅಕ್ರಮ ಮದ್ಯ ಜಪ್ತಿಪಡಿಸಿಕೊಂಡಿದ್ದು, ೧೬ ಲೀ ಬಿಯರ್ ಜಪ್ತಿಪಡಿಸಿಕೊಂಡಿದ್ದು, ೦೯ ವಾಹನಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಮುಂದುವರೆದು ಗಂಗಾವತಿ ವಲಯ ಕಛೇರಿಯ ವ್ಯಾಪ್ತಿಯಲ್ಲಿ ನಾನು ಬಂದಾಗಿನಿAದ ಒಟ್ಟಾರೆಯಾಗಿ ಇಲ್ಲಿಯವರೆಗೆ ೫೦ ಘೋರ ಪ್ರಕರಣಗಳನ್ನು ದಾಖಲಿಸಿದ್ದು, ೪೯೨, ೧೫(ಎ) ಪ್ರಕರಣಗಳನ್ನು ದಾಖಲಿಸಿದ್ದು, ಸನ್ನದು (ಮದ್ಯ ಅಂಗಡಿ) ಮೇಲೆ ೧೧೦ ಬಿಎಲ್‌ಸಿ ಪ್ರಕರಣಗಳನ್ನು ದಾಖಲಿಸಿದ್ದು, ೦೧ ಎನ್.ಡಿ.ಪಿ.ಎಸ್ (ಗಾಂಜಾ) ಪ್ರಕರಣ ದಾಖಲಿಸಿದ್ದು, ೫೦೧ ದಾಳಿಗಳನ್ನು ಮಾಡಲಾಗಿದ್ದು, ೨೨೬೦.೨೪ ಲೀ ಅಕ್ರಮ ಮದ್ಯ ಜಪ್ತಿಪಡಿಸಿಕೊಂಡಿದ್ದು, ೧೦೯.೭೮ ಲೀ ಬಿಯರ್ ಜಪ್ತಿಪಡಿಸಿಕೊಂಡಿದ್ದು, ೨೭ ವಾಹನಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಅಲ್ಲದೇ ಒಟ್ಟು ರೂ. ೩,೪೧,೬೧,೮೫೦/- (ಮೂರು ಕೋಟಿ ನಲವತ್ತೊಂದು ಲಕ್ಷ ಅರವತ್ತೊಂದು ಸಾವಿರದ ಎಂಟು ನೂರಾ ಐವತ್ತು ರೂಪಾಯಿ) ರಾಜಸ್ವ ಸಂಗ್ರಹಣೆ ಮಾಡಿ ಸರ್ಕಾರಕ್ಕೆ ಭರಣ ಮಾಡಲಾಗಿರುತ್ತದೆ. ಹೀಗೆ ಮುಂದಿನ ದಿನಗಳಲ್ಲಿಯೂ ವಲಯ ಕಛೇರಿಯ ವ್ಯಾಪ್ತಿಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಮತ್ತು ಸನ್ನದುಗಳ ಮೇಲೆ ನಿಗಾವಹಿಸಿ ಸನ್ನದು ಷರತ್ತುಗಳ ಉಲ್ಲಂಘನೆಯಾಗದAತೆ ಸನ್ನದುದಾರರಿಗೆ ಎಚ್ಚರಿಕೆಯನ್ನು ನೀಡಿ ಸರ್ಕಾರದ ರಾಜ್ಯಸ್ವದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಮೇಲಾಧಿಕಾರಿಗಳ ಆದೇಶ ಪಾಲಿಸುತ್ತಾ ಪ್ರಾಮಾಣಿಕ ಪ್ರಯತ್ನ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿಲಾಗುವುದು.