Peaceful coexistence is necessary for peace in the country – Nishti Rudrappa

ಸೌಹಾರ್ದ ಕರ್ನಾಟಕ ಬಳ್ಳಾರಿ
ಬಳ್ಳಾರಿ: ಸೌಹಾರ್ದ ಪರಂಪರೆ ಅಭಿಯಾನದ ಅಂಗವಾಗಿ ದಿ 30-1-2024 ಬೆಳಗ್ಗಿನ ಬಳ್ಳಾರಿಯ ಗಾಂಧಿ ಭವನದಿಂದ ಹೊರಟ ಸೌಹಾರ್ದತ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸೌಹಾರ್ದತ ಮಾನವ ಸೇರ್ಪಡೆಯನ್ನು ನಿರ್ಮಿಸಲಾಯಿತು.
ನಂತರದಲ್ಲಿ ಮುಂದುವರೆದ ಜಾಥವು ಮೋತಿ ವೃತ್ತದಲ್ಲಿರುವ ಬಸವೇಶ್ವರರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಜಾಥವನ್ನು ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಪಾದ್ರಿಗಳಾದ ಐವನ್ ಪಿಂಟೋ ಅವರು ಮಾತನಾಡಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಭಾವೈಕ್ಯತೆ ಸಾರುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲೆಂದು ತಿಳಿಸಿದರು.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಈ ಸಂದರ್ಭದಲ್ಲಿ ಮಾತನಾಡಿ ದೇಶದಲ್ಲಿ ಶಾಂತಿ ನೆಲೆಸಲು ಸೌಹಾರ್ದತ ಸಹಬಾಳ್ವೆ ಅಗತ್ಯವೆಂದು ತಿಳಿಸಿದರು.
ಈ ಕಾರ್ಯಕ್ರಮದ ರೂವಾರಿಗಳಾದ ಸತ್ಯಬಾಬು ಅವರು ಮಾತನಾಡಿ ಸಾಮರಸ್ಯದ ಬದುಕು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವುದು ಎಂದು ತಿಳಿಸಿದರು.
ಸಾಹಿತಿಗಳಾದ ಎನ್ ಡಿ ವೆಂಕಮ್ಮ ಮತ್ತು ಪಿ ಆರ್ ವೆಂಕಟೇಶ್ ಮತ್ತು ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಹೆಗಡೆ,ಕೆ ಕೋಟೇಶ್ವರ್ ರಾವ್, ಡಾ ಮಾತನಾಡಿದರು.
ಜಾಥಾದಲ್ಲಿ ಹಿಂದೂ ಕ್ರೈಸ್ತ ಮುಸಲ್ಮಾನ ಮತ್ತು ಜೈನ ಸಮಾಜದ ಹಾಗೂ ದಲಿತ ಪರ ಮತ್ತು ಕನ್ನಡಪರ ಕಾರ್ಮಿಕ ರೈತ ಸಂಘಟನೆಗಳ ಡಾ ಜೆನುಲ್ಲಾ ಜಮಾತ್ ಇಸ್ಲಾಂ, ಹುಮಯನ್ ಖಾನ್ ವಕ್ತ ಬೋರ್ಡ್ ಅಧ್ಯಕ್ಷರು, ಮಹಮ್ಮದ್ ರಫಿ, ನದಾಫ್ ಮುಖಂಡರು, ಘನಿ ಹರಿಚಂರಣ್ ಜೈನ ಸಮುದಾಯ,ಕೃಷ್ಣ ಸಂಗನಕಲ್
ರೈತ ಮುಖಂಡರು, ಕೊಳಗಲ್ಲು ಯಾರ್ರಿ ಸ್ವಾಮಿ, ಬಾದಾಮಿ ಶಿವಲಿಂಗ್ ವಕೀಲರು ಗಳು,ಗಂಗಣ್ಣ ಪತ್ತಾರ್ ಗ್ರಾಮೀಣ ಬ್ಯಾಂಕ್, ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು