Demonstration of EVM/VVPAT at Sri Vidyaniketan Graduate College

ಮೊದಲ ಬಾರಿಗೆ ಮತ ಹಾಕಿ ಖುಷಿಪಟ್ಟ ಹೊಸ ಮತದಾರರು
ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಶ್ರೀ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾ.ಪಂ.ಯಿಂದ ಮಂಗಳವಾರ ಆಯೋಜಿಸಿದ್ದ ಮತದಾನ ಜಾಗೃತಿ ಹಾಗೂ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆಯಲ್ಲಿ ಹೊಸ ಮತದಾರರು ಮೊದಲ ಬಾರಿಗೆ ಅಣಕು ಮತದಾನ ಮಾಡಿ ಖುಷಿ ಪಟ್ಟರು.
ಸೆಕ್ಟರ್ ಅಧಿಕಾರಿಗಳಾದ ಕಿರಣ್ ಕುಮಾರ್ ಅವರು ಮಾತನಾಡಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ಕೂಡ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ನಂತರ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಕುರಿತು ಮಾಹಿತಿ ನೀಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಮತದಾನ ಮಾಡಬೇಕು. ಜೊತೆಗೆ ಯುವ ಸಮುದಾಯ ತಮ್ಮ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಕಡ್ಡಾಯವಾಗಿ ಮತದಾನ ಮಾಡಿಸಲು ಪ್ರೇರೆಪಿಸಬೇಕು ಎಂದರು.
ವಡ್ಡರಹಟ್ಟಿ ಗ್ರಾಮದ ಬಸ್ ನಿಲ್ದಾಣ ಬಳಿಯೂ ಸಾವರ್ಜನಿಕರಿಗೆ ಮತದಾನ ಜಾಗೃತಿ ಮೂಡಿಸಿ, ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನೀಡಲಾಯಿತು.
ತಾಲೂಕು ಸ್ವೀಪ್ ಸಮಿತಿಯ ಸಂತೋಷ ಎಂ., ಪ್ರಶಾಂತ ಬಾನಾಪುರ, ಬಾಳಪ್ಪ ತಾಳಕೇರಿ, ಗ್ರಾಪಂ ಕಾರ್ಯದರ್ಶಿಗಳಾದ ಈಶಪ್ಪ, ವಿದ್ಯಾನಿಕೇತನ ಪದವಿ ಮಹಾ ವಿದ್ಯಾಲಯ ಪ್ರಾಚಾರ್ಯರಾದ ಶ್ರೀ ಅಭಿಷೇಕ ಡಿ.ಎಂ., ಉಪನ್ಯಾಸರಾದ ಆನಂದ ಪುರೋಹಿತ್, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಸಿಬ್ಬಂದಿಗಳು ಇದ್ದರು.
ಬಸಾಪಟ್ಟಣ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ
ಗಂಗಾವತಿ : ತಾಲೂಕಿನ ಬಸಾಪಟ್ಟಣ ಗ್ರಾಮದ ಬಸ್ ನಿಲ್ದಾಣ ಬಳಿ ಮತದಾನ ಜಾಗೃತಿ ಹಾಗೂ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನೀಡಲಾಯಿತು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ವಿದ್ಯಾವತಿ ಅವರು, ಮತದಾನದ ಮಹತ್ವ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷರಾದ ಆಂಜನೇಯ ಡಿ.ನಾಯಕ, ಪಿಡಿಓ ವಿದ್ಯಾವತಿ, ಕಾರ್ಯದರ್ಶಿ ನಾಗೇಶ, ಎಸ್ ಡಿಎ ಶ್ರೀನಿವಾಸ, ತಾಲೂಕು ಸ್ವೀಪ್ ಸಮಿತಿಯ ಸದಸ್ಯರು, ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಇದ್ದರು.