Complaint to tehsildar from farmer’s association for finding star-shaped items in ration.

ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಸರ್ಕಾರದಿಂದ ನೀಡುವ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬಳಸಿದ್ದಾರೆ ಹಾಗೂ ಅದೆ ಅಕ್ಕಿಗೆ ಬೆಂಕಿ ಹಚ್ಚಿದ್ದರೆ ಅದು ಕರ್ಪೂರದ ರೂಪದಲ್ಲಿ ಬೆಂಕಿ ಉರಿಯುತ್ತದೆ ಇದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡರು ಹನೂರು ತಹಶಿಲ್ದಾರರಿಗೆ ದೂರು ನೀಡಿದರು .
ತಾಲ್ಲೂಕು ಕೇಂದ್ರದಿಂದ ಸಮೀಪದಲ್ಲೇ ಇರುವ ಅಜ್ಜಿಪುರ ನ್ಯಾಯಬೆಲೆ ಅಂಗಡಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶದ ಅಕ್ಕಿಯನ್ನು ನೀಡುತ್ತೆವೆ ಎಂದು ಸರ್ಕಾರ ತಿಳಿಸಿತು .ತದನಂತರ ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಘಟನೆಗಳು ನಡೆಯುತ್ತದೆ ಎಂದು ದೂರಿದರು . ಇದೇ ಸಮಯದಲ್ಲಿ ತಾಲ್ಲೂಕು ದಂಡ ಅಧಿಕಾರಿಗಳಾದ ಗುರುಪ್ರಸಾದ್ ರವರು ಪರಿಶೀಲನೆ ಮಾಡಿ ,ನೀರಿನಲ್ಲಿ ಅಕ್ಕಿಯನ್ನು ಹಾಕಿ ತೆಲಿದ ಅಕ್ಕಿಯನ್ನು ಪರಿಸಿಲಿಸಿದರು ಈ ಸಂಬಂದವಾಗಿ ನಮ್ಮ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು ರೈತರಿಗೆ ತಿಳಿಸಿದರು . ಇದೇ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅದ್ಯಕ್ಷ ಅಂಜಾದ್ ಖಾನ್ ಸೇರಿದಂತೆ ,ಕಚೇರಿಯ ಅಧಿಕಾರಿಗಳು ಹಾಜರಿದ್ದರು .