Sacrificial constitution, awareness needed for survival of democracy: Laxman Gowda

ಗಂಗಾವತಿ: ಸಾವಿರಾರು ಜನರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಲಭಿಸಿದ್ದು ಇದರ ಉಳಿವಿಗಾಗಿ ಸದಾ ಜಾಗೃತರಾಗಿರುವುದು ಅವಶ್ಯಕತೆ ಇದೆ ಎಂದು ನಿತ್ಯಹೊಯ್ಸಳ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜೆ.ಬಿ.ಲಕ್ಷ್ಮಣಗೌಡ ಹೇಳಿದರು.
ಅವರು ಸಹಕಾರಿಯ ಆವರಣದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ರಾಷ್ಟಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹಿರಿಯರ ಕನಸು ಸರ್ವ ಜನಾಂಗಗಳ ಪ್ರಗತಿಯ ಮೂಲಕ ದೇಶವು ವಿಶ್ವಮಟ್ಟಕ್ಕೆ ಬೆಳವಣಿಗೆಯಾಗಬೇಕೆನ್ನುವ ಕನಸು ನಾವೆಲ್ಲ ಸಂವಿಧಾನದ ಅಡಿ ಅನುಷ್ಠಾನ ಮಾಡಬೇಕಿದೆ. ಶೋಷಿತರ ವರ್ಗಗಳಿಗೆ ಆರ್ಥಿಕ ,ಶೈಕ್ಷಣಿಕ ಶಕ್ತಿ ನೀಡುವ ಮೂಲಕ ಸಮಸಮಾಜಕ್ಕೆ ಮುನ್ನುಡಿ ಬರೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಉಪಾಧ್ಯಕ್ಷ ಅಶೋಕ ಗೌಡ,ನಿರ್ದೇಶಕರಾದ ನೀಲಕಂಠಪ್ಪ ಹೊಸಳ್ಳಿ, ಮಲ್ಲೇಶಪ್ಪ, ರಾಜೇಂದ್ರ ನಾಯಕ,ಕೆಲೋಜಿ ವೆಂಕಟೇಶ, ಧನಲಕ್ಷ್ಮಿ,ಲಕ್ಷ್ಮಿದೇವಿ,ಕುಮಾರಪ್ಪ ಸಿಂಗನಾಳ, ಪರಶುರಾಮ ಇಟಗಿ, ಪರಶುರಾಮಗೌಡ,ವ್ಯವಸ್ಥಾಪಕ ರಘುರಾಮ ದರೋಜಿ, ಸಿಬ್ಬಂದಿಗಳಾದ ಶಿಲ್ಪಾ ಸೇರಿ ಸಹಕಾರಿ ಸದಸ್ಯರಿದ್ದರು.