Golden Celebration Mahotsav Program by Karnataka Dalit Sangharsh Samiti Tipaturu Unit

ತಿಪಟೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ,) ತಿಪಟೂರು ಘಟಕ ವತಿಯಿಂದ 50ರ ಸುವರ್ಣ ಸಂಭ್ರಮ ಮಹೋತ್ಸವ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಕಾನೂನು ಸಲಹೆಗಾರರಾದ ವಕೀಲರು ವೆಂಕಟೇಶ್ ಹಾಗೂ ತಾಲೂಕು ಸಂಚಾಲಕರಾದ ಜಕ್ಕನಹಳ್ಳಿ ಮೋಹನ್ ಹಾಗೂ ಗಡಬನಹಳ್ಳಿ ಶೇಖರಣ್ಣ, ತಾಲೂಕು ಮಹಿಳಾ ಘಟಕದ ಸಂಚಾಲಕರಾದ ಧನಲಕ್ಷ್ಮಿ ಕೊನೆಹಳ್ಳಿ, ನಂದಿನಿ ತಿಪಟೂರು ಹಾಗೂ ಮಂಜುಳ ಕುಪ್ಪಾಳು ನಗರಸಂಚಾಲಕರಾದ ರಮೇಶ್ ಮಾರನಗೆರೆ ಹಾಗೂ ತಾಲೂಕು ಪದಾಧಿಕಾರಿಗಳು ಸಮುಖದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.