Strive to bring poor women into the mainstream and build a self-reliant life – Basavaraja Mundaragi, a resource person for women’s unions.
ಕೊಪ್ಪಳ : ಸ್ತ್ರೀಯರು ಸಮಾಜದಲ್ಲಿ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಮರ್ಥರಾಗಿದ್ದಾರೆ. ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿರದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಕಡೆಗೆ ಚಿಂತನೆ ನಡೆಸಬೇಕು. ಮಹಿಳೆಯರ ಸಬಲೀಕರಣವಾಗಬೇಕು ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಬಸವರಾಜ ಮುಂಡರಗಿ ಹೇಳಿದರು.
ತಾಲೂಕಿನ ಬೂದಗುಂಪಾ ಗ್ರಾಮದ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಜೀವನೋಪಾಯ ಸಂಸ್ಥೆ ಹಾಗೂ ಜಿಲ್ಲಾ ಮತ್ತು ತಾಲೂಕ ಪಂಚಾಯತ ಕೊಪ್ಪಳ ಗ್ರಾಮ ಪಂಚಾಯತಿ ಹೊಸ ಜೀವನ ಸಂಜೀವಿನಿ ಮಹಿಳಾ ಒಕ್ಕೂಟ ಬೂದಗುಂಪಾ ಇವರು ಆಯೋಜೀಸಿದ ದೂರ ದೃಷ್ಠಿ ಹಾಗೂ ವ್ಯಾಪಾರ ಅಭಿವೃದ್ದಿ ಯೋಜನೆಯ ತರಬೇತಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿದ ಅವರು ಬಡ ಮಹಿಳೆಯರನ್ನ ಸಂಘದ ವ್ಯಾಪ್ತಿಗೆ ಬರಮಾಡಿಕೊಂಡು ಸಾಲ ಸೌಲಭ್ಯ ನೀಡಿ ಕೌಶಲ್ಯ ಆಧಾರಿತ ಉದ್ಯೋಗ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಆರ್ಥಿಕದಿಂದ ಸಬಲರನ್ನಾಗಿ ಮಾಡುವದೆ ದೂರ ದೃಷ್ಠಿಯ ಉದ್ದೇಶ ವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಷ್ಮವ್ವ ಸಂಗಟಿ ತರಬೇತಿಗೆ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಒಕ್ಕೂಟದ ಅದ್ಯಕ್ಷೆ ಲಕ್ಷಮ್ಮ ಭೋವಿ ಉಪಾಧ್ಯಕ್ಷೆ ಹುಲಿಗೆವ್ವ ಗೌಡ್ರ.ಕಾರ್ಯದರ್ಶಿ ರಾಧಮ್ಮ ರಡ್ಡಿ, ಉಪ ಕಾರ್ಯದರ್ಶಿ ಮೃಬೂಯಿ,ಖಜಾಂಚಿ ಬಾನೂಬಿ , ಮುಖ್ಯ ಪುಸ್ತಕ ಬರಗಾರ ಗಂಗಮ್ಮ ವೀರನಗೌಡ ಪೋಲಿಸ್ ಪಾಟೀಲ, ಫಕೀರಮ್ಮ ವೀರೇಶ ತರಲಕಟ್ಟಿ , ಲಕ್ಷ್ಮಿ ಸುರೇಶ ಉಪಲಾಪುರ , ರೇಣುಕಾ ರಾಮಣ್ಣ ಸಂಗಟಿ ಮಂಜುಳಾ ಸುರೇಶ ಪೋಲಿಸ ಪಾಟೀಲ್ ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು