MLA G.T.’s 75th day protest sit-in of Cauvery Committee struggle. Visit Devegowda
“ನಿರಂತರ “ಕಾವೇರಿ ಕ್ರಿಯಾಸಮಿತಿಯಹೋರಾಟದ, 75ನೇ ದಿನದ ಪ್ರತಿಭಟನಾ ಧರಣಿಯಲ್ಲಿ. ಕಾವೇರಿ ಕ್ರಿಯಾ ಸಮಿತಿಗೆ ಆಗಮಿಸಿದ,ಮಾಜಿ ಸಚಿವರು ಹಾಲಿ ಶಾಸಕರು ಜಿ.ಟಿ. ದೇವೇಗೌಡರು ಮಾತನಾಡಿ. ಎಲ್ಲರೂ ಕೂಡ ಹೋರಾಟದಲ್ಲಿ 75 ದಿನಗಳಿಂದ ಭಾಗವಹಿಸಿದ್ದೀರಿ. ಚಾಮರಾಜನಗರ ಚನ್ನಪಟ್ನ ಬೆಂಗಳೂರು ರಾಮನಗರ ಆದರೆ ಈ ರೀತಿಯಾಗಿ ಮೈಸೂರು ಮಂಡ್ಯದಲ್ಲಿ ಮಾತ್ರ ಮುಂದುವರಿಸಿದ್ದೀರಾ, ಕಾವೇರಿ ನೀರಿಗಾಗಿ ರೈತರ ಬೆಳೆಗಾಗಿ, ಕಾವೇರಿ ನೀರಿನ ಉಳಿವಿಗಾಗಿ,ಜನತೆ ಪರವಾಗಿ, ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ದೇವೇಗೌಡರು ಡಿಕೆ ಶಿವಕುಮಾರ್ ತಮ್ಮ ಸುರೇಶ್ ರವರು ಶಿವಕುಮಾರ್ ಉದಾಸಿ ಅವರು ಮಾಹಿತಿಯನ್ನು ಸಂಪೂರ್ಣವಾಗಿ ಸಮಿತಿಯವರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದಾರೆ, ದೇವೇಗೌಡರ ಹೋರಾಟ ನಿರಂತರವಾಗಿ ಇರುತ್ತೆ. ಮೈಸೂರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಕಾವೇರಿ ನೀರಿಗಾಗಿ 75 ದಿನಗಳಿಂದ ತಾವೆಲ್ಲರೂ ಹಾಗೂ ಏನು ಈ ಹೋರಾಟ ಮಾಡುತ್ತೀರಾ ಅಧ್ಯಕ್ಷರಾಗಿ ಮಹಿಳೆಯರೆಲ್ಲರಿಗೂ ಕಾವೇರಿ ಸಮಿತಿ ಎಲ್ಲರಿಗೂ ಕೂಡ ಒಳ್ಳೆಯದಾಗಲಿ, ಹಾಗೆಯೇ ಡಾ. ಶಿವರಾಜಪ್ಪ, ಅವರು ಮಾತನಾಡಿ ಅನೇಕರು ಕವಿಗಳು ಮಹಾತ್ಮರು ಹುಟ್ಟಿದಂತಹ ಈ ನಾಡಿನಲ್ಲಿ ಶಾಂತಿಗಾಗಿಸಂಯಮಕ್ಕಾಗಿಸಹಬಾಳ್ವೆಗಾಗಿ, ಸಾಮರಸ್ಯಕ್ಕಾಗಿ, ಯಾವಾಗಲೂ ಪರಿತಪಿಸುವಂತಹ ರಾಜ್ಯ,ಅಂತಹ ರಾಜ್ಯವನ್ನು ಕಲುಷಿತಗೊಳಿಸುವಂತಹ ಕೆಲಸಕ್ಕೆ ಯಾರು ಕೂಡ ಹೋಗಬಾರದು, ಅದನ್ನು ನಿಲ್ಲಿಸಿ, ನಮ್ಮ ಕಾವೇರಿ ಸಮಿತಿಯ ಹೋರಾಟಗಾರರು ನಿಮ್ಮ ಪರವಾಗಿ ನಾವು ಇರ್ತೀವಿ. ಜಿಲ್ಲಾ ಆಡಳಿತ, ಸರ್ಕಾರ, ಯಾಕೆ ಏನ್ ಮಾಡ್ತಾರೆ, ಎಲ್ಲಿ ಲೋಪ ಆಗ್ತಾ ಇದೆ. ಅಂತದ್ದನ್ನು ಕೇಳಬೇಕು. ನಿಮ್ಮಷ್ಟಕ್ಕೆ ನೀವು ಮಾಡಿಕೊಳ್ಳಿ,ನಮ್ಮಷ್ಟಕ್ಕೆ ನಾವಿರ್ತಿವಿ, ಅದು ಸಾಮರಸ್ಯದ ಬೆಳವಣಿಗೆ ಅಲ್ಲ ಹೋರಾಟ ಇದು ನಿಲ್ಲಲ್ಲ,ಗೌರವದ ಹೋರಾಟ ಶಕ್ತಿ ಪವರ್ ಈ ಜಗತ್ತಿನಲ್ಲಿ ಯಾವುದೂ ಕೂಡಇಲ್ಲ,ಗಾಂಧೀಜಿಯವರು ಅವತ್ತೇ ಹೇಳಿದ್ದಾರೆ,ಶಾಂತಿಯುತ ಹೋರಾಟ, ಅದು ಮುಂದೆ ಮರುಕಳಿಸಬಾರದು, ಸರ್ಕಾರವೇ ಮುಂದೆ ಬಂದು ಸಮಸ್ಯೆ ಬಗೆಹರಿಸಲಿ,ಎಂದುಮಾತನಾಡಿದರು. ಇಂದಿನ ಧರಣಿಯಲ್ಲಿ ಪಾಲ್ಗೊಂಡಿದ್ದ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರು, ಜೆಪಿ ಜಯಪ್ರಕಾಶ್, ಎಂ ಜೆ ಸುರೇಶ್ ಗೌಡ, ಮೆಲ್ಲಹಳ್ಳಿ ಮಹದೇವಸ್ವಾಮಿ, ಮೂಗೂರು ನಂಜುಂಡಸ್ವಾಮಿ, ತೇಜಸ್ ಲೋಕೇಶ್ ಗೌಡ, ಭಾನುಪ್ರಕಾಶ್, ಶಿವಲಿಂಗಯ್ಯ,ಎಂ ಎಚ್ ಹನುಮಂತಯ್ಯ,ಕೆ ಮಹೇಶ್ ಒಂಟಿಕೊಪ್ಪಲ್, ಶ್ರೀನಿವಾಸ್ ರವೀಶ್ ಎಸ್ ಪುಷ್ಪಾವತಿ,ಕೆ ಮಂಜುಳಾ, ರಾಘವಾಚಾರಿ, ಮಹದೇವಸ್ವಾಮಿ,ಬೋಗಾದಿ ಸಿದ್ದೇಗೌಡ, ಎಸ್ವಿಶಿವನಾಯ್ಕರ್,ವಿಷ್ಣು,ಹೊನ್ನೇಗೌಡ, ವರಕುಡು ಕೃಷ್ಣೇಗೌಡ, ಶಿವಕುಮಾರ್ ಸಿಂಧುವಳ್ಳಿ,ಪೈಲ್ವಾನ್ ಬಾಲಾಜಿ, ಪೈಲ್ವಾನ್ ಬಲರಾಮ್, ನೇಹಾ, ಶುಭಶ್ರೀ, ಪದ್ಮ ಶಶಿಧರ್, ಶಿವರಾಜಪ್ಪ, ರವಿ, ಕೃಷ್ಣ, ಮಂಜುಳಾ ಆರ್, ಅಶೋಕ್, ರಾಜು, ಭಾಗ್ಯಮ್ಮ ಲಕ್ಷ್ಮಿ, ಆರ್ ಶ್ರೀನಿವಾಸ್ ಇನ್ನು ಮುಂತಾದವರು ಭಾಗವಹಿಸಿದ್ದರು.