Yedudandu Muneshwar Swamijatramhotsava was held in a grand manner
ವರದಿ : ಬಂಗಾರಪ್ಪ ಸಿ ಹನೂರು .
ಹನೂರು: ಸಂಕ್ರಾಂತಿಯ ಹಬ್ಬದ ಮರುದಿನ ನಡೆಯುವ ತಾಲೂಕಿನ ಕೂಡ್ಲೂರು ಗ್ರಾಮದ ಏಳುದಂಡು ಮುನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಬ್ಬ ಆಚರಣೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದ್ದು ಸಹಸ್ರಾರು ಭಕ್ತಾದಿಗಳು ಆಗಮಿಸಿ ಹರಕೆ ಪೂಜೆ ಸಲ್ಲಿಸಿದರು ದೇವರ ಕೃಪೆಗೆ ಪಾತ್ರರಾದರು .
ಕೂಡ್ಲೂರು ಗ್ರಾಮದಲ್ಲಿರುವ ಶ್ರೀ ಏಳುದಂಡು ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡು ದಿನಗಳು ನಡೆಯುವ ಜಾತ್ರಾ ವಿಶೇಷ ಪೂಜಾ ಕೈಂಕರ್ಯಗಳು ಧಾರ್ಮಿಕ ಸಾಂಪ್ರದಾಯಕ ಆಚರಣೆಯಂತೆ ಜರುಗಿತು. ಶ್ರೀ ಏಳುದಂಡು ಮುನೇಶ್ವರ ಸ್ವಾಮಿಯ ದೇವಾಲಯವು ತಮಿಳುನಾಡು ಹೊಂದಿಕೊಂಡಂತೆ ಗಡಿಭಾಗದಲ್ಲಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಮಿಳಿಗರೇ ಹೆಚ್ಚಾಗಿ ಆಗಮಿಸಿದ್ದರು.ಹಾಗೂ ಹನೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವಾರು ಕಡೆಯಿಂದ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಮುನೇಶ್ವರ ಸ್ವಾಮಿಗೆ ಹರಕೆ ಪೂಜೆ ಸಲ್ಲಿಸಿದರು.
ಪಂಕ್ತಿ ಸೇವೆ, ವಿವಿಧ ಸೇವೆ ಸಲ್ಲಿಸಿದ ಭಕ್ತಾದಿಗಳು:
ಹರಕೆ ಹೊತ್ತು ಜಾತ್ರಾ ಮಹೋತ್ಸವ ಅಂಗವಾಗಿ ಆಗಮಿಸಿದ ಭಕ್ತರು ಏಳುದಂಡು ಮುನೇಶ್ವರ ಸ್ವಾಮಿಗೆ ಕುರಿ, ಮೇಕೆ, ಕೋಳಿಗಳನ್ನು ಬಲಿ ನೀಡುವ ಮೂಲಕ ಹರಕೆ ಪೂಜೆ ಸಲ್ಲಿಸಿ ಪಂಕ್ತಿ ಸೇವೆ ಸಲ್ಲಿಸಿದರು.
ಮುನೇಶ್ವರ ಸ್ವಾಮಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು. ಪೊಲೀಸ್ ಇಲಾಖೆ ವತಿಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.