Ambedkar’s spirit of service should be a model for the society – Dr. Rudramuni Swamiji.
ತಿಪಟೂರು : ಅಂಬೇಡ್ಕರ್ ರವರ ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಬೇಕು- ಡಾ.ರುದ್ರಮುನಿ ಸ್ವಾಮೀಜಿ.
ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ನಿಸ್ವಾರ್ಥ ಸೇವೆ ಹಾಗೂ ದೀನದಲಿತರ ಏಳಿಗೆಗಾಗಿ ಅವರ ಕೊಡುಗೆ ಅಪಾರ ಎಂದು ಷಡಕ್ಷರ ಮಠದ ಡಾ. ರುದ್ರಮುನಿ ಮಹಾಸ್ವಾಮೀಜಿ ಅವರು ತಿಳಿಸಿದರು
ನಗರದ ತಮ್ಮ ಶ್ರೀಮಠದಲ್ಲಿ ಕರ್ನಾಟಕ ಭೀಮಸೇನೆ ತಾಲೂಕು ವತಿಯಿಂದ ದಿನದರ್ಶಿನಿ ಬಿಡುಗಡೆ ಮಾಡಿ ಮಾತನಾಡಿದ ಅವರು
ಡಾ ಅಂಬೇಡ್ಕರ್ ರವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಮನಸ್ಸಿನಲ್ಲಿ ಸದಾ ಇದ್ದಾರೆ ಅವರ ಸೇವಾ ಮನೋಬಾವನೆ ಪ್ರತಿಯೊಬ್ಬ ಭಾರತೀಯರಲ್ಲೂ ಬರಬೇಕು ಎಂದರು.
ಹಾಗೂ ಇಂಥ ಸೇವಾ ಮನೋಭಾವ ಹೊಂದಿರುವ ಕರ್ನಾಟಕ ಭೀಮ ಸೇನೆ ರಾಜ್ಯದ್ಯಂತ ಉತ್ತಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲಿ ಆ ಮೂಲಕ ಅಂಬೇಡ್ಕರ್ ಅವರ ಸಂಘಟನೆ ಹೋರಾಟ ಶಿಕ್ಷಣ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಇದೆ ವೇಳೆ ಅವರು ತಿಳಿಸಿದರು
ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಅಧ್ಯಕ್ಷ ಮಂಜುನಾಥ್ ಮಾತನಾಡಿ ಈಗಾಗಲೇ ಭೀಮ ಸೇನೆ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮುಂದೆಯು ಇಂತಹ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಇದೆ ವೇಳೆ ಅವರು ತಿಳಿಸಿದರು.
ಕರ್ನಾಟಕ ರೈತ ಸಂಘ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ
ಸಂಘಟನೆಯು ಮುಂದೆ ಉಚಿತ ಆರೋಗ್ಯ ಶಿಬಿರ ಕಣ್ಣಿನ ಆಪರೇಷನ್ ಹಾಗೂ ಉಚಿತ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ರಮ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಹಾಗೂ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಇದೇ ವೇಳೆ ಅವರು ಸಲಹೆ ನೀಡಿದರು .
ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಟ್ರಸ್ಟಿನ ಅಧ್ಯಕ್ಷ ಎಸ್ ಜಗದೀಶ್ ವಕೀಲರಾದ ಚನ್ನಕೇಶವ ಪತ್ರಕರ್ತರಗಳಾದ ಕಿರಣ್ ಸಿದ್ದೇಶ್ವರ್
ಕೆಪಿಟಿಸಿಎಲ್ ಇಂಜಿನಿಯರ್ ಶಾಮ್
ಮುಖಂಡರಾದ ಲಕ್ಷ್ಮಯ್ಯ, ರಂಗಸ್ವಾಮಿ, ಬಾಲಾಜಿ, ಶ್ರೀನಿವಾಸ್ ಮೊದಲಾದವರು ಹಾಜರಿದ್ದರು