Make e-attendance mandatory for all state government departments :- Praveena Naika urges
ಕಾಗವಾಡ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಸಿಬ್ಬಂದಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಚಕ್ಕರ ಹಾಕುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಇ-ಹಾಜರಾತಿ ಜಾರಿಗೆ ತಂದು ಮುಗುದಾರ ಹಾಕಿದ್ದು ಒಳ್ಳೆಯ ಕಾರ್ಯ ಎಂದು ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಹೇಳಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಇ ಹಾಜರಾತಿ ಜಾರಿ ಮಾಡಿರುವದು ಉತ್ತಮ ಬೆಳವಣಿಗೆ ಇ ಹಾಜರಾತಿ ಹಾಕದೆ ನಿರ್ಲಕ್ಷಿಸಿದರೆ ವೇತನ ಕಡಿತಗೊಳ್ಳುತ್ತದೆ ಅಧಿಕಾರಿ, ಸಿಬ್ಬಂದಿ ಸರಿಯಾದ ಸಮಯಕ್ಕೆ ಕಛೇರಿಗೆ ಬಂದು ಕಾರ್ಯನಿರ್ವಹಿಸಲಿದ್ದಾರೆ ಈ ಮೊದಲು ಜನಸಾಮಾನ್ಯರು ಕಚೇರಿಗೆ ಹೋದಾಗಲೇಲ್ಲ ಸಿಬ್ಬಂದಿ ಅಷ್ಟೇ ಇರುತಿದ್ದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸರಿಯಾದ ಸಮಯಕ್ಕೆ ಇರುವದೆ ಅಪರೂಪವಾಗಿದೆ.ಗ್ರಾಮ ಪಂಚಾಯತಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಜಾರಿ ಆಗಬೇಕು.
ರಾಜ್ಯಸರಕಾರ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಕಡ್ಡಾಯ ಸಮಯ ಪಾಲನೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು ಮತ್ತು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ ಬೋಯರ ಇವರು ಉತ್ತಮ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಒತ್ತಾಯ ಮಾಡಿದ್ದಾರೆ.