Children’s Gram Sabhas should become important, -TS Nagarajshetty

ತಿಪಟೂರು : ಕಿಬನಹಳ್ಳಿ ಹೋಬಳಿ, ಕುಪ್ಪಾಳು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯನ್ನು ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಹಿಳೆಯರು ಮತ್ತು ಮಕ್ಕಳು ಸದಾ ಕ್ರಿಯಾಶೀಲರಾಗಿರಬೇಕು ಭವ್ಯ ಭಾರತದ ಭಾವಿ ಸತ್ಪ್ರಜೆಗಳು ಆದ ನೀವು ಸದಾ ಕಲಿಕೆಯಲ್ಲಿ ಮಗ್ನರಾಗಬೇಕು, ಇಂದಿನ ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಬೇಕು, ಕನ್ನಡಕ್ಕೆ ಬಂದಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರ ಬಗ್ಗೆ ಸ್ವಯಂ ರಚಿತ ಪದ್ಯಗಳನ್ನು ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿದರು, ಮಹಿಳಾ ಮತ್ತು ಮಕ್ಕಳ ಹಿತರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿರುವ ಗ್ರಾಮ ಪಂಚಾಯಿತಿಯ ಕಾರ್ಯ ಸಂತಸ ತಂದಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಎಸ್ ಕೆ ಷಡಾಕ್ಷರಿ ಅವರು ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಮಂಡಿಸಿದರು.
ಕರಡಾಳು ಶಾಲೆಯ ಪ್ರಜ್ಞಾ ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಇಂಥ ಅವಕಾಶಗಳನ್ನು ದೊರಕಿಸುತ್ತಿರುವ ಸರ್ಕಾರ ಮತ್ತು ಗ್ರಾಮ ಪಂಚಾಯಿತಿಗೆ ಧನ್ಯವಾದ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಪ್ಪಾಳು ಶಾಲೆಯ ನವಮಿ ತಮ್ಮ ರಾಷ್ಟ್ರೀಯ ಹಬ್ಬಗಳು ಎಂಬ ವಿಶೇಷ ಉಪನ್ಯಾಸದಿಂದ ಮಕ್ಕಳ ಮತ್ತು ಸಭೀಕರಣ ಮನ ಸೂರೆಗೊಳಿಸಿದರು. ಕಡಾಳು ಸಂತೆ ಮೈದಾನದ ಶಾಲೆಯ ರುಚಿತ ,ಕೊಂಡ್ರಿಘಟ್ಟ ಶಾಲೆಯ ದೀಕ್ಷಾ, ಗಿಣಿಕಿಕೆರೆ ಶಾಲೆಯ ಜ್ಞಾನೇಶ, ಶಿವಪುರ ಶಾಲೆಯ ಯಶಸ್ವಿ, ಮತ್ತು ಕರಡಾಳು ಪ್ರೌಢಶಾಲೆಯ ಮನೋಜ್ ಮುಂತಾದ ವಿದ್ಯಾರ್ಥಿಗಳು ವಿಷಯವಾರು ಅಭಿಮತ ಮಂಡಿಸಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ಅವರು ಮಾತನಾಡುತ್ತಾ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಹಾಗೂ ಬಾಲ ವಿವಾಹ ,ಬಾಲ ಕಾರ್ಮಿಕ ಪದ್ಧತಿ, ಇವುಗಳ ನಿರ್ಮೂಲನೆಗೆ ಗ್ರಾಮೀಣ ಜನರು ಇಲಾಖೆ ಜೊತೆಗೆ ಸಹಕರಿಸಬೇಕು ಎಂದರು.
ಸಿ.ಆರ್. ಪಿ ಷಹಜಿಯ ಶಿಕ್ಷಣ ಇಲಾಖೆಯಿಂದ ದೊರೆಯುವ ಹಲವಾರು ಸೌಲಭ್ಯಗಳ ಬಗ್ಗೆ ವಿವರಿಸಿದರು
ಮಾಜಿ ಅಧ್ಯಕ್ಷರಾದ ಬಳ್ಳೇಕಟ್ಟೆ ಮಹೇಶ್ ರವರು ಮಾತನಾಡಿ ಗ್ರಾಮ ಪಂಚಾಯಿತಿಯಿಂದ ದೊರೆಯುವ ಸಾಕಷ್ಟು ಸೌಲಭ್ಯಗಳನ್ನು ಮತ್ತು ಉದ್ಯೋಗ ಖಾತ್ರಿ ಯೋಜನೆಯಿಂದ ಪ್ರತಿ ಕುಟುಂಬಕ್ಕೂ ನೂರು ದಿನದ ಕೆಲಸ ಸರ್ಕಾರ ನೀಡುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿತಾ ಷಡಕ್ಷರಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳ ಮತ್ತು ಮಹಿಳೆಯರ ಸಬಲೀಕರಣ ಹಾಗೂ ವಿದ್ಯಾರ್ಜನೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ತಮ್ಮ ಅಧ್ಯಕ್ಷ ನುಡಿಗಳಾಡಿದರು. ಸಂಪೂರ್ಣ ಕಾರ್ಯಕ್ರಮವನ್ನು ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪಟ್ಟಾಭಿರಾಮ್ ರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಕೋಟಿಗೆಹಳ್ಳಿ ಯೋಗಾನಂದ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ , ಗ್ರಾ.ಪಂ.ಹಾಲಿ ಸದಸ್ಯರಾದ ಮೀನಾಕ್ಷಮ್ಮ, ಮಂಜುಳಾ, ದರ್ಶನ್ ಹಾಗೂ ಮುಖ್ಯ ಶಿಕ್ಷಕರಾದ ಪ್ರಕಾಶಪ್ಪ, ಗ್ರಾಮ ಪಂಚಾಯತಿ ಪಿಡಿಒ ಪ್ರಸನ್ನಾತ್ಮ, ಕಾರ್ಯದರ್ಶಿ ಬಸವಯ್ಯ , ಗ್ರಂಥ ಗ್ರಂಥಾಲಯ ಮೇಲ್ವಿಚಾರಕ ಪಿ ಶಂಕ್ರಪ್ಪ ಸ್ವಾಗತಿಸಿ ನಿರೂಪಿಸಿದರು. ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲಾ ಶಿಕ್ಷಕರು ಮತ್ತು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು, ಅಂಗನವಾಡಿ ಶಿಕ್ಷಕಿಯರು ಆರೋಗ್ಯ ಕಾರ್ಯಕರ್ತರು ಮಹಿಳಾ ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು.