Breaking News

2 ವರ್ಷದಿಂದಬಳ್ಳಾರಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದವಯಸ್ಸಾದ ವೃದ್ಧರನ್ನು ಬೆಂಗಳೂರು ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಿ ಮಾನವಿತೆ ಮೆರೆದಿದ್ದಾರೆ

The elderly who were sleeping at Ballaralli bus stand since 2 years have been admitted to Bangalore Auto Raja Orphanage.

ಜಾಹೀರಾತು
Screenshot 2024 01 10 19 08 41 52 6012fa4d4ddec268fc5c7112cbb265e7 229x300

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಬಳ್ಳಾರಳ್ಳಿ ಬಸ್ ನಿಲ್ದಾಣದಲ್ಲಿ ಎರಡು ವರ್ಷದಿಂದ ಬಸ್ ನಿಲ್ದಾಣದಲ್ಲಿ ವಯಸ್ಸಾದ (70) ವೃದ್ದರು ಮಲಗುತ್ತಿದ್ದರು ಇದನ್ನು ನೋಡಿದ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆಗೆ ಫೋನ್ ಮುಖಾಂತರ ಸಂಪರ್ಕಿಸಿ ಈ ವಯಸ್ಸಾದ ವೃದ್ಧರನ್ನು ಅನಾಥಾಶ್ರಮಕ್ಕೆ ಸೇರಿಸಿ ಎಂದು ಕೇಳಿಕೊಂಡಿದ್ದರು ಅದರಂತೆ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಹಂಡ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವೀರೇಂದ್ರ ಕುಮಾರ್ ಅವರನ್ನು ಫೋನ್ ಮುಖಾಂತರ ಸಂಪರ್ಕಿಸಿ ಬಳ್ಳಾರಳ್ಳಿ ಬಸ್ ನಿಲ್ದಾಣದಲ್ಲಿ ವೃದ್ಧರೊಬ್ಬರು ಮಲಗುತ್ತಿದ್ದಾರೆ .

Screenshot 2024 01 10 19 08 56 45 6012fa4d4ddec268fc5c7112cbb265e7 1024x767

ಅವರನ್ನು ಅನಾಥಾಶ್ರಮಕ್ಕೆ ಸೇರಿಸಲು ಪಂಚಾಯಿತಿಯಿಂದ ಲೆಟರ್ ಹಾಗೂ ಬೆಂಗಳೂರಿಗೆ ಕರೆದುಕೊಂಡು ಕಾರಿನ ವ್ಯವಸ್ಥೆ ಮಾಡಿಕೊಡಲು ತಿಳಿಸಿದ ಮೇರೆಗೆ ವೀರೇಂದ್ರ ಕುಮಾರ್ ಅವರು ಹಂಡ್ಲಿ ಪಂಚಾಯತಿ ಅಭಿವೃದ್ಧಿಯ ಅಧಿಕಾರಿಗಳ ಹತ್ತಿರ ಮಾತನಾಡಿ ವೃದ್ಧನನ್ನು ಅನಾಥ ಸಮಕ್ಕೆ ಸೇರಿಸಲು ಸಹಕರಿಸಿದ್ದಾರೆ ಹಾಗೆಯೇ ಇವತ್ತು ಬೆಳಿಗ್ಗೆ 6:00ಗೆ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಹಾಗೂ ವೀರೇಂದ್ರ ಕುಮಾರ್ ಹಾಗೂ ಬಳ್ಳಾರಳ್ಳಿ ಜಗದೀಶ್ ಹಾಗೂ ಬಳ್ಳಾರಳ್ಳಿ ಗ್ರಾಮದ ಗಂಗಾಧರ್ ಇವರೆಲ್ಲರೂ ಸೇರಿಸಿ ಈ ವಯಸ್ಸಾದ ವೃದ್ಧನನ್ನು ಸ್ಥಾನ ಮಾಡಿಸಿ ( ಸಂಪೂರ್ಣ ಕೊಳಕು ಸ್ಥಿತಿಯಲ್ಲಿದ್ದ ವೃದ್ಧರು) ಇವರನ್ನು ಸ್ನಾನ ಮಾಡಿಸಿ ಬೇರೆ ಒಳ್ಳೆಯ ಬಟ್ಟೆಯನ್ನು ತೊಡಿಸಿ ನಂತರ ಬೆಂಗಳೂರು ಆಟೋ ರಾಜ ಅನಾಥಾಶ್ರಮ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರ ಖುದ್ದಾಗಿ ಬೆಂಗಳೂರು ಹೋಗಿ ಈ ವೃದ್ಧರನ್ನು ಅನಾಥಾಶ್ರಮಕ್ಕೆ ಸೇರಿಸಲಾಯಿತು. ಇದೇ ಸಮಯದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ವೀರೇಂದ್ರ ಕುಮಾರ್ ರವರು ಸಂಪೂರ್ಣ ಸಹಕಾರ ನೀಡಿರುತ್ತಾರೆ ಅವರಿಗು ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೆಯೇ ಈ ವೃದ್ಧರನ್ನು ಸ್ನಾನ ಮಾಡಿಸಲು ಸಹಕಾರ ನೀಡಿದ ಜಗದೀಶ್ ರವರಿಗೆ ಹಾಗೂ ಸ್ಥಾನ ಮಾಡಿಸಲು ಬಿಸಿ ನೀರಿನ ವ್ಯವಸ್ಥೆ ಹಾಗೂ ಬಟ್ಟೆ ನೀಡಿದ ಗಂಗಾಧರ ರವರಿಗು ಕರವೇಯಿಂದ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ರವರು ಅನಾಥ ವೃದ್ಧರು ಹಂತ ಅನಾಥಾಶ್ರಮಕ್ಕೆ ಲೆಟರ್ ಕೊಟ್ಟಿರುತ್ತಾರೆ ಹಾಗೂ ಈ ವೃದ್ಧನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಕಾರಿನ ವ್ಯವಸ್ಥೆ ಸಹ ಮಾಡಿಕೊಟ್ಟಿರುತ್ತಾರೆ ಇವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಈ ವೃದ್ಧರನ್ನು ಕರವೇ ಯಿಂದ ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳುವುದಕ್ಕೆ ಫೋನ್ ಮುಖಾಂತರ ಸಂಪರ್ಕಿಸಿದಾಗ ಆಟೋ ರಾಜ ಸಂಸ್ಥೆಯವರು ಸಂತೋಷದಿಂದ ಒಪ್ಪಿಕೊಂಡಿರುತ್ತಾರೆ ಆಟೋ ರಾಜ ಅನಾಥಾಶ್ರಮದವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಇದೇ ಸಮಯದಲ್ಲಿ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಹಾಗೂ ಹಂಡ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವೀರೇಂದ್ರ ಕುಮಾರ್ ಮತ್ತು ಬಾಳ್ಳಾರಳಿ ಜಗದೀಶ್ ಹಾಗೂ ಗಂಗಾಧರ ಹಾಗೂ ಭರತ್ ಹಾಗೂ ಹೂವಯ್ಯ ಈ ಸಂದರ್ಭದಲ್ಲಿ ಭಾಗವಹಿಸಿದ್ದರು
ಕರವೇ ಪ್ರಾಸಿಸ್ ಡಿಸೋಜ. ಸೋಮವಾರಪೇಟೆ. ಕೊಡಗು ಜಿಲ್ಲೆ.. 9686095831 ಮತ್ತು 9449255831

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.