NAC team visit

ಗಂಗಾವತಿ: ಜನೇವರಿ-೧೦ ಮತ್ತು ೧೧ ರಂದು ಚಿಲುಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀರಾಮನಗರಕ್ಕೆ ನ್ಯಾಕ್ ಪೀರ್ ತಂಡ ಬೇಟಿ ನೀಡಲಿದ್ದು, ಕಾಲೇಜಿನ ಶೈಕ್ಷಣಿಕ ಪ್ರಗತಿ, ಪ್ರವೇಶಾತಿ, ವಿದ್ಯಾರ್ಥಿಗಳ ಪರೀಕ್ಷಾ ಪಲಿತಾಂಶ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಾಧನೆ, ಕಾಲೇಜಿನ ಮೂಲ ಸೌಕರ್ಯದ ಬಗ್ಗೆ, ಕಾಲೇಜಿನಲ್ಲಿ ಇರುವ ವಿವಿಧ ವಿಭಾಗಗಳ ಮತ್ತು ಸಮಿತಿಗಳ ಸಾಧನೆಗಳನ್ನು ಪರಾಮರ್ಶಿಸಿ, ಜೊತೆಗೆ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳು, ಪಾಲಕರು, ಹಳೆಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಕಾಲೇಜಿಗೆ ಶ್ರೇಯಾಂಕ ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶೋಭಾ. ಕೆ.ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.