Corey Society: 3rd Anniversary

ಗಂಗಾವತಿ: ದೇಶದ ಬಹುರಾಜ್ಯಗಳಲ್ಲಿ ತನ್ನ ಶಾಖೆಯನ್ನು ಹೊಂದಿರುವ ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಯಿಟಿ ಗಂಗಾವತಿಯ ಶಾಖೆಯಲ್ಲಿ ಇಂದು ೩ ನೇವಾರ್ಷಿಕೋತ್ಸವವನ್ನು ಬರಗಾಲದ ನಿಮಿತ್ಯ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿಯು ಸಾಮಾಜಿಕವಾಗಿ, ರೈತರಿಗೆ ಮತ್ತು ಗ್ರಾಹಕರಿಗೆ ಮಾಡುತ್ತಿರುವ ಸೇವೆ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗಂಗಾವತಿಯ ಶಾಖೆಯ ಅಧ್ಯಕ್ಷರಾದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಡಿ.ಆರ್.ಡಿ.ಎಸ್.ಕರೋಶಿ, ಸಂಚಾಲಕ ಗವಿಸಿದ್ದಪ್ಪ ಢಣಾಪುರ, ಸಾಗರ ಮುನವಳ್ಳಿ, ಬಸವರಾಜ್ ನಿಟ್ಟಾಲಿ, ಚಂದ್ರಪ್ಪ ಛಲವಾದಿ, ಡಾ.ಬಸವರಾಜ್ ಸಿಂಗನಾಳ್, ಶ್ರೀಕಾಂತ್ ಕಿಶೋರ್ ಬಾಬು, ತ್ರಿಯಂಬಕೇಶ್ವರ ಅರಳಿ, ನಿತೇಶ್ ಬಾಪ್ನಾ, ಗಣೇಶ್ ಬಿಚ್ಚಾಲಿ, ರಮೇಶ್ ಹೊಸಮಲಿ, ಶಾಖಾ ವ್ಯವಸ್ಥಾಪಕ ಸದಶಿವ ಚಂಚಲಿ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.