Breaking News

ಚಿಕ್ಕೋಡಿ : ಕರವೇ, ಡಾ|ಪುನೀತ್ ಜಕುಮಾರ ಅಭಿಮಾನಿಗಳ ಬಳಗ ದಿಂದಉಪವಿಭಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಕೆ,

Chikkodi: Karaway, Dr. Puneeth Jakumar fan group submits petition to Chief Minister through Deputy Commissioner

ಜಾಹೀರಾತು

ಚಿಕ್ಕೋಡಿ, ೧೦: ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಹೇಳಿಕೆ ಮೂಲಕ, ಕರ್ನಾಟಕದ ಕನ್ನಡಿಗರ ಸಾರ್ವಭೌಮತ್ವ ಹಾಗೂ ಗಡಿನಾಡು ಭಾಷಾ ಸಾಮರಸ್ಯಕ್ಕೆ ಧಕ್ಕೆ ಮೂಡಿಸಿದ್ದಾರೆ, ಕನ್ನಡತಿ ಎಂದು ಹೇಳಿಕೊಳ್ಳುವ ಇವರು ಚುನಾವಣೆ ಸಂದರ್ಭದಲ್ಲಿ ಮತಕ್ಕೋಸ್ಕರ ಕನ್ನಡ ಪ್ರೀತಿ ತೋರಿಸುವ ಇವರು, ವಿವಾದಾತ್ಮಕ ಹೇಳಿಕೆ ನೀಡಿ ಬೆಂಕಿ ಹಚ್ಚುವ ಸಾಹಸಕ್ಕೆ ಕೈ ಹಾಕಿರುವುದು ರಾಜಕೀಯ ಹುನ್ನಾರವಲ್ಲದೆ ಬೇರೇನೂ ಅಲ್ಲ ಎಂದು ಕರವೇ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಅಮೂಲ ನಾವಿ ಇವರು ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ, ತಕ್ಷಣ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ, ಚಿಕ್ಕೋಡಿ ಪಟ್ಟಣದಲ್ಲಿ ಇರುವಂತ ಎಲ್ಲಾ ಅಂಗಡಿ ಮುಗ್ಗಟ್ಟುಗಳ ಮೇಲೆ ಇರುವಂತಹ ಆಂಗ್ಲ, ಮರಾಠಿ, ಹಿಂದಿ ನಾಮಫಲಕಗಳನ್ನು ತೆಗೆಯಬೇಕು, ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಇದ್ದರೂ ಸಹ ಅಂಗಡಿ ಮಾಲೀಕರು ಆದೇಶ ಪಾಲನೆಗೆ ಮುಂದಾಗುತ್ತಿಲ್ಲ, ನಾವು ಸುಮಾರು ಸಲ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗುತ್ತಿಲ್ಲ, ಆದ್ದರಿಂದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಎಲ್ಲಾ ಅಂಗಡಿಗಳ ಮೇಲೆ ಮತ್ತು ವಾಣಿಜ್ಯ ಸಂಘ ಸಂಸ್ಥೆಗಳ ಮೇಲೆ ಕಡ್ಡಾಯವಾಗಿ ಶೇಕಡಾ 60% ರಷ್ಟು ಭಾಗ ಕನ್ನಡವಾಗಿರಬೇಕು, ನಂತರ ಉಳಿದ ಭಾಷೆ ಇರಬೇಕು ಎಂದು ಸುಗ್ರೀವಾಜ್ಞೆ ತಂದಿದೆ, ಇದರ ಪ್ರಕಾರ ಚಿಕ್ಕೋಡಿ ತಾಲೂಕಿನ ಎಲ್ಲಾ ಅಂಗಡಿ ಮಾಲೀಕರಿಗೆ ನೋಟಿಸು ಮೂಲಕ ಶೇಕಡಾ 60 ರಷ್ಟು ಕನ್ನಡ ನಾಮಫಲಕ ಆಗಬೇಕೆಂದು ಅವರಿಗೆ ತಿಳಿಸಬೇಕೆಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಸಚಿನ್ ಸನದಿ, ಶಿವರಾಜ ಸನದಿ, ಅಮರ್ ಕಾಂಬಳೆ, ಲವಕುಶ ಸನದಿ, ಪ್ರವೀಣ ವಡೇರ್, ಕುಮಾರ್ ನಾಯಿಕ, ವಿಠ್ಠಲ ಖಿಲಾರೆ, ಅರಿಹಂತ ಹಜಾರೆ, ರಾಹುಲ ಕಾಡಾಪುರ, ವಿಶ್ವನಾಥ್ ಪಾಟೀಲ, ಸಾಗರ ಪಾಟೀಲ ಸೌರಭ ಹಿರೇಮಠ ಹಾಗೂ ನೂರಾರು ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.

About Mallikarjun

Check Also

screenshot 2025 07 28 19 58 25 20 6012fa4d4ddec268fc5c7112cbb265e7.jpg

ಎಂಟನೇಯ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಹೋರಾಟ

The struggle of the civil servants has entered its eighth day. ಕಾರಟಗಿ ಪುರಸಭೆಯಲ್ಲಿ ಸುಮಾರು ಹತ್ತು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.