He submitted a request to former MLA Paranna Munavalli to provide railway facility to go from Gangavati to Ayodhya Sri Rama Mandir.
ಗಂಗಾವತಿ,9:ಹನುಮನುದಿಸಿದ ನಾಡು ಎಂದು ಪ್ರಖ್ಯಾತಗೊಂಡಿರುವ ಗಂಗಾವತಿ ತಾಲೂಕ ಕಾತ್ಮಕವಾಗಿ ಅಂಜನಾದ್ರಿಯಿಂದ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಹೋಗಿ ಬರಲು ರೈಲ್ವೆ ಸೌಲಭ್ಯ ಒದಗಿಸಲು ಮಾಜಿ ಶಾಸಕರ ಪರಣ್ಣ ಮುನವಳ್ಳಿಯವರಿಗೆ ಮನವಿ ಸಲ್ಲಿಸಿದರು.
ಭಾರತೀಯರ ಬಹುದೊಡ್ಡ ಕನಸ್ಸಾದ ಅಯೋಧ್ಯಾದಲ್ಲಿ ಶ್ರೀರಾಮ ಮಂದಿರ ಕಟ್ಟಡ ನಿರ್ಮಾಣ ಇಂದಿಗೆ ನನಸಾಗಿರುತ್ತದೆ. ಇದು ಇದು ನಮ್ಮೆಲ್ಲರಿಗೆ ಹರ್ಷವೆನಿಸುತ್ತಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಶ್ರೀರಾಮ ಮತ್ತು ಶ್ರೀರಾಮನ ಭಂಟ ಶ್ರೀ ಆಂಜನೇಯಸ್ವಾಮಿಯವರ ಸಹಸ್ರಾರು ಭಕ್ತರು ಇದ್ದು, ಇಂದಿಗೂ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ. ಗಂಗಾವತಿಯ ಅಂಜನಾದ್ರಿಯ ಬೆಟ್ಟ, ಪಂಪಾ ಸರೋವರ, ಶ್ರೀ ವಿಜಯ ವಿಠಲ ದೇವಸ್ಥಾನ ಇನ್ನೂ ಪುರಾತನ ಕಾಲದ ದೇವಸ್ಥಾನಗಳನ್ನು ನೋಡಲು ನಮ್ಮ ದೇಶದ ಅನೇಕ ರಾಜ್ಯ ಮತ್ತು ಅನೇಕ ಜಿಲ್ಲೆಗಳಿಂದ ಬಂದು ದರ್ಶನ ಪಡೆದ ಭಕ್ತರಿಗೆ ಶ್ರೀರಾಮನ ದರ್ಶನ ಪಡೆಯುವುದು ಅವರ ಇಚ್ಛೆಯಾಗಿರುತ್ತದೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಹೋಗುವಂತೆ, ಅಂಜನಾದ್ರಿಯಿಂದ-ಅಯೋಧ್ಯಾಕ್ಕೆ. ಅಯೋಧ್ಯಾದಿಂದ-ಅಂಜನಾದ್ರಿಗೆ ಹೋಗಿ ದರ್ಶನ ಪಡೆಯುವ ಭಕ್ತರ ಇಚ್ಛೆಯಾಗಿರುವುದರಿಂದ ಭಕ್ತರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಲು ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿದರು
ನಾವುಗಳು ದಿ, 22-01-2024ರ ಸೋಮವಾರದಂದು ಶತಮಾನಗಳಿಂದ ಕಾತುರದಿಂದ ಕಾಯುತ್ತಿದ್ದ ಅಯೋಧ್ಯಾದಲ್ಲಿ ” ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ” ನಡೆಯುತ್ತಿದ್ದು, ಈ ಪ್ರತಿಷ್ಠಾಪನೆಯ ದಿನದಂದೇ ಗಂಗಾವತಿ ತಾಲೂಕ ಅಂಜನಾದ್ರಿಯಿಂದ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಹೋಗಿ ಶ್ರೀರಾಮನ ದರ್ಶನ ಪಡೆಯಲು ಭಕ್ತರಿಗೆ ಅನುಕೂಲಕರವಾಗುವ ಸಲುವಾಗಿ ರೈಲ್ವೆ ಸೌಲಭ್ಯ ಒದಗಿಸಿಕೊಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಒತ್ತಾಯಿಸಿ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಎಂದು ಹಿಂದೂ ಜಾಗರಣ ವೇದಿಕೆ,ಕನ್ನಡ ಸಾಹಿತ್ಯ ಪರಿಷತ್,ಕಿಂಧಾ ಯುವ ಚಾರಣ ಬಳಗ , ಜಗಜ್ಯೋತಿ ಬಸವೇಶ್ವರ ಟ್ರಸ್ಟ್,ಅಖಿಲ ಭಾರತ ಎ ಸ್ ಪರಿಷತ್,ಲಯನ್ಸ್ ಕ್ಲಬ್, ಚಾರಣ ಬಳಗ, Sangeete HN. ಭಾರತೀಯ ವಿಕಾಸ ಪರಿಷತ್ ಒತ್ತಾಯಿಸಿದರು.
ವಕೀಲರ ಸಂಘ, ಗಂಗಾವತಿ