Breaking News

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ-ದೊಡ್ಡನಗೌಡಪಾಟೀಲ್

BJP’s victory in the next Lok Sabha elections is certain – Doddan Gowda Patil

ಜಾಹೀರಾತು

ಬೆಂಗಳೂರು: ಏಪ್ರಿಲ್-ಮೇನಲ್ಲಿ ಘೋಷಣೆ ಆಗಲಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಲಿರುವ ಎಲ್ಲ ಅಭ್ಯರ್ಥಿಗಳು ವಿಜಯಶಾಲಿಗಳಾಗಲಿದ್ದಾರೆ. ಮುಂದಿನ ಪ್ರಧಾನಮಂತ್ರಿ ಮತ್ತೆ ನರೇಂದ್ರ ಮೋದಿ ಆಗಲಿದ್ದಾರೆ ಎಂದು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್ ಭರವಸೆ ವ್ಯಕ್ತಪಡಿಸಿದರು. ವಿಧಾನಸೌಧದ ಉತ್ತರ ಗೇಟ್ ನ 146ನೇ ಕೊಠಡಿಯಲ್ಲಿ ತಮ್ಮ ನೂತನ ಕಚೇರಿಗೆ ಪೂಜೆ ನೆರವೇರಿಸಿ ಪಕ್ಷದ ರಾಜ್ಯಾಧ್ಯಕ್ಷರು, ಧುರೀಣರು, ಮುಖಂಡರು, ಕಾರ್ಯಕರ್ತರು, ಹಾಲಿ, ಮಾಜಿ ಸಂಸದರು, ಶಾಸಕರುಗಳಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಬಿ.ವೈ.ವಿಜಯೇಂದ್ರ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರ ಜನಪ್ರಿಯತೆ ಆಧರಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪಕ್ಷದ ಹಿರಿಯ ರಾಜ್ಯ ನಾಯಕರು, ಎಲ್ಲ ಶಾಸಕರು, ಪಕ್ಷದ ಕಾರ್ಯಕರ್ತರು ರಾಜಾಹುಲಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ರಾಜ್ಯ ಸರ್ಕಾರ ಈಗ ಕೊಟ್ಟಿರುವ ಗ್ಯಾರಂಟಿ ವಾಗ್ದಾನಗಳಿಂದ ಜನರಲ್ಲಿ ಭ್ರಮನಿರಸನ ಮೂಡಿಸಿದೆ. ಇದನ್ನು ಸಮರ್ಥವಾಗಿ ಜನರ ಬಳಿ ಕೊಂಡೊಯ್ಯುತ್ತೇವೆ. ಕೇವಲ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಜನತೆ ಮೋದಿ ಅವರು ಬೇಕೇಬೇಕು ಎಂದು ಬಯಸಿದ್ದಾರೆ. ನಮ್ಮೆಲ್ಲ ಕಾರ್ಯಕರ್ತರು ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿ ಸಂಸತ್ ಭವನದಲ್ಲಿ ಮತ್ತೆ ಅರಳುವಂತೆ ಮಾಡುತ್ತೇವೆ ಎಂದರು. ಮತ್ತೊಮ್ಮೆ ಕರಡಿ ಸಂಗಣ್ಣ: ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಈಗಾಗಲೇ ಸಂಸದರಾಗಿರುವ ಕರಡಿ ಸಂಗಣ್ಣನವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರಮುಖ ರೈಲು ಯೋಜನೆಗಳು, ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾರ್ಯಗತಗೊಳಿಸಿದ್ದಾರೆ. ಕ್ಷೇತ್ರದಲ್ಲಿ ಕೇಂದ್ರದ ಸೌಲಭ್ಯಗಳನ್ನು ಒದಗಿಸಿ ಜನಪ್ರಿಯತೆ ಪಡೆದಿದ್ದಾರೆ. ಈ ಬಾರಿ ಕರಡಿ ಸಂಗಣ್ಣ, ಡಾ.ಬಸವರಾಜ ಸೇರಿದಂತೆ ಹಲವರು ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಸೂಚನೆಯಂತೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ನಮ್ಮದಾಗಿದೆ. ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವುದು ಹೈಕಮಾಂಡ್ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಸಮಸ್ಯೆಗಳಿವೆ: ಈ ಕಾಂಗ್ರೆಸ್ ಸರ್ಕಾರ ಬಂದು 7 ತಿಂಗಳಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಇದುವರೆಗೂ ಬಿಡಿಗಾಸು ಬಂದಿಲ್ಲ. ಕುಷ್ಟಗಿ ವಿಧಾನಸಭಾ ಕ್ಷೇತ್ರದಾದ್ಯಂತ ಅನೇಕ ಸಮಸ್ಯೆಗಳಿವೆ. ಕುಡಿವ ನೀರಿನ ಯೋಜನೆ ಕೈಗೊಂಡು ಸ್ವಲ್ಪ ಮಟ್ಟಿಗೆ ನಿವಾರಣೆ ಮಾಡಲಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ದೃಷ್ಟಿಯಿಂದ ಪ್ರಗತಿ ಕಾಣಬೇಕಿದೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆದಿದೆ. ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಅಭೀಪ್ಸೆ ಇದೆ. ಈ ಸರ್ಕಾರದಲ್ಲಿ ಹಣವೇ ಇಲ್ಲ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ರೂ.5 ಸಾವಿರ ಕೋಟಿ ಹಣ ಬೇಕಿದೆ. ಹಂತ ಹಂತವಾಗಿ ಹಣ ಬಿಡುಗಡೆ ಆಗುತ್ತಿದೆ.

ಸದನದಲ್ಲಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಹಾಜರಾತಿ ಹೆಚ್ಚಿಸುತ್ತೇನೆ. ಯಾವುದೇ ಬಿಲ್ ಬಂದರೂ ನಮ್ಮ ವಿರೋಧ ಪಕ್ಷದ ನಾಯಕರ ಮತ್ತು ಹಿರಿಯರೊಂದಿಗೆ ಚರ್ಚಿಸಿ ಬಿಲ್ ವಿರುದ್ಧ ತೀರ್ಮಾನ ಪ್ರಕಟಿಸುತ್ತೇನೆ. ಚುನಾವಣೆ ನಡೆಯುವ ಸಂದರ್ಭದಲ್ಲಿ ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಗೆ ಪಕ್ಷದ ಆದೇಶದ ಪ್ರಕಾರ ಕರ್ತವ್ಯ ನಿರ್ವಹಿಸುತ್ತೇನೆ. ಪಕ್ಷ ಜವಾಬ್ದಾರಿ ನೀಡಿದೆ. ಕರ್ತವ್ಯ ಪಾಲನೆ ಮಾಡುತ್ತೇನೆ. – ದೊಡ್ಡನಗೌಡ ಹನಮಗೌಡ ಪಾಟೀಲ್ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು. —-

ಈ ಸರ್ಕಾರದಿಂದ ಜನರು ಬೇಸರಗೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಆಮಂತ್ರಣ ಬಂದಿಲ್ಲ: ಇದೇ ಜ. 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಮಂತ್ರಣ ಬಂದಿಲ್ಲ. ಅಯೋಧ್ಯೆಗೆ ನಿರೀಕ್ಷೆಗೂ ಮೀರಿ ಜನರು ಪಾಲ್ಗೊಳ್ಳುವುದರಿಂದ ನಮ್ಮ ಕ್ಷೇತ್ರದಲ್ಲಿಯೇ ಇದ್ದು, ದೀಪಾವಳಿ ಹಬ್ಬದಂತೆ ಆಚರಿಸಲು ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತೇನೆ. ಅಂದು ಕ್ಷೇತ್ರದಾದ್ಯಂತ ಎಲ್ಲ ದೇವಾಲಯಗಳಲ್ಲಿ ದೀಪಾವಳಿ ಮಾದರಿಯಲ್ಲಿ ದೀಪ ಹಚ್ಚಿ, ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ಮನವಿ ಮಾಡುತ್ತೇನೆ ಎಂದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.