Breaking News

ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಹಾಗೂ ನೀರಾವರಿ ಸಚಿವರಾದಉಪಮುಖ್ಯಮಂತ್ರಿಡಿ.ಕೆಶಿವಕುಮಾರ್ ರಾಜೀನಾಮೆಗೆ ಸುರೇಶ್ ಗೌಡ ಒತ್ತಾಯ

Suresh Gowda demanded the resignation of Agriculture Minister N Cheluvarayaswamy and Irrigation Minister Deputy Chief Minister DK Shivakumar

ಜಾಹೀರಾತು

ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 63ನೇ ದಿನವೂ ಕೂಡ ಪ್ರತಿಭಟನೆಯನ್ನು ಮುಂದುವರಿಸಲಾಯಿತು, ಈ ದಿನದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದಂತಹ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ವರಕುಡು ಕೃಷ್ಣೇಗೌಡರು ಮಾತನಾಡಿ, ದುರ ಆಡಳಿತ ಸರ್ಕಾರ ಎಂದು ಛಿಮಾರಿ ಹಾಕುತ್ತ, ಬರಗಾಲದಲ್ಲಿ 1700 ಕ್ಯೂ ಸಿಕ್ಸ್ ನೀರನ್ನು ಬಿಡ್ತಾ ಇದ್ದಾರೆ, ಇಂಥವರಿಗೆ ಏನು ಹೇಳಬೇಕು ಸುಳ್ಳು ಆಶ್ವಾಸನೆ ಕೊಟ್ಟು ಐದು ವರ್ಷ ಅಧಿಕಾರಕ್ಕೆ ಬಂದಿದ್ದೇವೆ. ಇಷ್ಟ ಬಂದ ಹಾಗೆ ಇರಬಹುದು ನಾಲ್ಕೈದು ತಿಂಗಳಲ್ಲಿ ಎಂಪಿ ಎಲೆಕ್ಷನ್ ಬರುತ್ತೆ, ಅವತ್ತು ಜನ ಏನು ಅಂತ ತೋರಿಸುತ್ತಾರೆ, ನಿಮಗೆ ತಿಂಗಳು ತಿಂಗಳು ಸಂಬಳ ಕೊಡ್ತಾ ಇರೋದು ನಾವು TA,DA .ಎಲ್ಲಾ ಕೊಡೋದು ನಾವೇ ಸ್ವಾಮಿ ಆದ್ರೆ ನೀವು ನಮ್ಮ ಮನಸ್ಸುಗಳಿಗೆ ನೋವು ಮಾಡುತ್ತೀರಾ, ಡಿಕೆ ಶಿವಕುಮಾರ್ ಚೆಲುವರಾಯಸ್ವಾಮಿ ಸಿದ್ದರಾಮಯ್ಯ ಒಂಥರಾ ಹೇಳಿಕೆ ಕೊಡುತ್ತಾರೆ. ನಾವು ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಾ ಇವತ್ತಿಗೆ ಅರವತ್ತು ಮೂರನೇ ದಿನ ಆಗಿದೆ ಯಾರಾದರೂ ಬಂದು ವಿಚಾರಿಸಿದಿರ, ಇನ್ನು ನಾಲ್ಕೈದು ತಿಂಗಳು ಎಲೆಕ್ಷನ್ ವಿರುದ್ಧ ಹಿಂದೂಪರ ಹೋರಾಟ ಕನ್ನಡಪರ ಹೋರಾಟ ಮಾಡುವವರು ಯಾರೂ ಕೂಡ ನಿಮಗೆ ಬೇಕಾಗಿಲ್ಲ ಎಂದು ಸರ್ಕಾರಕ್ಕೆಛಿಮಾರಿ ಹಾಕಿದರು.
ಕಾವೇರಿ ಕ್ರಿಯಾ ಸಮಿತಿ ಉಪಾಧ್ಯಕ್ಷರಾದ ಎಂ. ಜೆ .ಸುರೇಶ್ ಗೌಡ ಅವರು ಮಾತನಾಡಿ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರು ನಾವು ಸರ್ಕಾರದ ಗಮನ ಸೆಳೆಯುವುದಕ್ಕೆ ಆಗಲಿ,ಸಾರ್ವಜನಿಕರ ಗಮನ ಸೆಳೆಯುವುದಕ್ಕೆ ಆಗಲಿ ಪ್ರತಿಷ್ಟೆ ಸ್ವ ಪ್ರತಿಷ್ಠೆಗಾಗಿ ಮಂಡ್ಯದಲ್ಲಿ ಆಗಲಿ ಚಾಮರಾಜನಗರದಲ್ಲಿ ಆಗಲಿ ಬೆಂಗಳೂರಲ್ಲಿ ಆಗಲಿ ಸ್ವ ಪ್ರತಿಷ್ಠೆಗಾಗಿ ಪ್ರತಿಭಟನೆ ಧರಣಿ ಮಾಡುತ್ತಿಲ್ಲ, ಆದರೆ ಮಂಡ್ಯ ಶಾಸಕ ರವಿಕುಮಾರ್ ಗಾಣಿಗ ಅರ್ಥಮಾಡಿಕೊಳ್ಳಬೇಕು. ಮನುಷ್ಯನಿಗೆ ಗಾಳಿ ನೀರು ಮುಖ್ಯ ಜೀವ ಬದುಕಬೇಕು ಅಂದರೆ ಗಾಳಿ ನೀರು ಪ್ರಕೃತಿ ಕೊಟ್ಟಿರುವಂತಹದ್ದು ಇದು ಇದ್ದಾಗ ಮಾತ್ರ ನಾವು ಉಸಿರಾಡುವುದಕ್ಕೆ ಸಾಧ್ಯ ಉಸಿರಾಡುವುದಕ್ಕೆ ಗಾಳಿ ನೀರು ಆಹಾರ ಮುಖ್ಯ ಜನರ ಬದುಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ನಾವು ಒಣ ಪ್ರತಿಷ್ಠೆ ಧರಣಿ ಮಾಡುತ್ತಿಲ್ಲ, ಲೋಕಸಭೆ ಚುನಾವಣೆಯಲ್ಲಿ ಸದಸ್ಯರು ಸಂಖ್ಯೆ ಹೆಚ್ಚಾಗಿ ಮಾಡಿಕೊಳ್ಳೋದಿಕ್ಕೋಸ್ಕರ ನೀವು ಒಣ ಪ್ರತಿಷ್ಠೆ ಮಾಡುತ್ತಿರುವುದು. ಉಸಿರಾಡುವುದಕ್ಕೆ ಗಾಳಿ ನೀರು ಹಸಿವಾದಾಗ ಆಹಾರ ಕೇಳುತ್ತೇವೆ. ನೀವು ತಮಿಳುನಾಡಿಗೆ ನೀರು ಬಿಡುತ್ತಿರುವುದು ಸ್ವ ಪ್ರತಿಷ್ಠೆಗಾಗಿ ಲೋಕಸಭೆ ಸದಸ್ಯರ ಸಂಖ್ಯೆ ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಕಾವೇರಿ ನೀರನ್ನು ತಮಿಳು ನಾಡಿಗೆ ನೀರು ಬಿಡುತ್ತಿರುವುದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿಕೊಳ್ಳುವುದರ ಕೊಸ್ಕರ ಕರ್ನಾಟಕ ಜನತೆಯ ರೈತರು ಬಲಿಕೊಡುವಂತೆ ಮಾಡಿದೆ ನಿಮ್ಮ ಸರ್ಕಾರ, ಸುಮಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಹೋಗ್ತಾ ಇದ್ದಾರೆ. ಈ ರಾಜ್ಯದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಮಂಡ್ಯ ಮೈಸೂರು ಜಿಲ್ಲೆಗಳಿಗೆ ರೈತರಿಗೆ ನೀರು ಬಿಡಿ ಅಂತ ಆದೇಶ ಮಾಡುತ್ತಿಲ್ಲ, ಇವರು ಬೇಳೆ ಬೆಳೆಯಬೇಡಿ, ಕೆ ಆರ್ ಎಸ್ ಲ್ಲಿ ನೀರು ಇಲ್ಲ ಅಂತ ಆದೇಶ ಮಾಡುತ್ತಾರೆ. ಕುಡಿಯೋಕೆ ನೀರಿಲ್ಲ ಅಂತ ಆದೇಶ ಮಾಡುತ್ತಾರೆ, ಕಾವೇರಿ ನಿರ್ವಹಣಾ ಸಮಿತಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾರೆ. ರಾಜ್ಯ ಸರ್ಕಾರಕ್ಕೆ ಆಗಲಿ ಉಪಮುಖ್ಯಮಂತ್ರಿಗೆ ಆಗಲಿ, ಒಂದು ದಿನ ಕೂಡ ನೀರು ಬಿಡಬೇಡಿ ಎಂದು ಮನವಿ ಸಲ್ಲಿಸಿಲ್ಲ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮಂಡ್ಯ ಮೈಸೂರು ಜಿಲ್ಲಾ ರೈತರನ್ನು ಕ್ಷಮೆಯಾಚನೆ ಮಾಡಬೇಕು ಮಾಡಬೇಕು. ನಾನು ಕೃಷಿ ಮಂತ್ರಿಯಾಗಿ ಕಾರ್ಯನಿರ್ವಹಿಸುವಲ್ಲಿ ಸೋತಿದ್ದೇನೆ. ಆದರಿಂದ ಕಾವೇರಿ ಕೊಳ್ಳದ ರೈತರ ಹಾಗೂ ಕನ್ನಡಿಗರ ಕ್ಷಮೆ ಕೇಳಿ ಈ ಕೂಡಲೇ ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರು ರಾಜೀನಾಮೆ ನೀಡಬೇಕು. ನೀರಾವರಿ ಸಚಿವರು ರಾಜ್ಯದ ಉಪಮುಖ್ಯಮಂತ್ರಿಗಳು ಆದ ಸನ್ಮಾನ್ಯ ಡಿ.ಕೆ ಶಿವಕುಮಾರ್ ಅವರು ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿ ಈ ನಾಡಿನ ಜನತೆಗೆ ಮೋಸ ಮಾಡಿ ವಂಚಿಸಿ ದ್ರೋಹ ಬಗೆದು ಪಾದಯಾತ್ರೆ ಮುಖಾಂತರ ಅಧಿಕಾರಕ್ಕೆ ಬಂದು ಬಂದಮೇಲೆ ಕನ್ನಡ ನಾಡಿನ ಜೀವನದಿ ಬಗ್ಗೆ ಅಸಡ್ಡೆ ಮಾತುಗಳನ್ನ ಹಾಡಿದ್ದೀರಾ ನೀರಾವರಿ ಸಚಿವರು ಕಾವೇರಿ ನದಿ ನೀರನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಆದ್ದರಿಂದ ನೀವು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾವೇರಿ ಕ್ರಿಯಾ ಸಮಿತಿ ಉಪಾಧ್ಯಕ್ಷರಾದ ಎಂ.ಜೆ .ಸುರೇಶ್ ಗೌಡರವರು ಒತ್ತಾಯಿಸಿದರು . ತಮಿಳುನಾಡಿಗೆ ಬಿಡುತ್ತಿರುವ 1700 ಕ್ಯೂಸಿಕ್ ಕಾವೇರಿ ನೀರನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಈ ದಿನದ ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಮುಖಂಡರು ಹಾಗೂ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್. ಜಯ ಪ್ರಕಾಶ್( ಜೆಪಿ) ರವರು ವಹಿಸಿದ್ದರು ಈ ದಿನದ ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾದ ಮೂಗುರು ನಂಜುಂಡಸ್ವಾಮಿ ಗೌರವ ಕಾರ್ಯದರ್ಶಿ ಮೆಲ್ಲಳ್ಳಿ ಮಹದೇವಸ್ವಾಮಿ ರಾಜ್ಯ ರೈತ ಸಂಘದ ಸಿಂಧುವಳ್ಳಿ ಶಿವಕುಮಾರ್, ಬಿ ನಾಗರಾಜ್ ಹಿರಿಯ ಕನ್ನಡ ಹೋರಾಟಗಾರರಾದ ಬೋಗಾದಿ ಸಿದ್ದೇಗೌಡರು, ರವೀಶ್ ಮಾಜಿ ಶಾಸಕ ದಿವಂಗತ ಕೋಡಿ ಪಾಪಣ್ಣನವರ ಸಹೋದರ ರವಿಕುಮಾರ್ ಕರ್ನಾಟಕ ಜನಪರ ವೇದಿಕೆಯ ಗೌರವಾಧ್ಯಕ್ಷರಾದ ಹೊನ್ನೇಗೌಡರು ರಾಜ್ಯಾಧ್ಯಕ್ಷರಾದ ಸೋಮೇಗೌಡ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ.ಬಿ ಪ್ರಜಾ ಪಾರ್ಟಿಯ ನಗರಾಧ್ಯಕ್ಷ ಶ್ರೀನಿವಾಸ್ ರಾಜಶೇಖರ್ ಜೆಪಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಸಮಯ ಸೂತ್ರ ಪತ್ರಿಕೆಯ ಸಂಪಾದಕಿ ಶ್ರೀಮತಿ ಕೆ ಮಂಜುಳಾ ,ಚಲನಚಿತ್ರದ ನಿರ್ಮಾಪಕ ಕುಂಬಾರುಕೊಪ್ಪಲು ಭೈರಪ್ಪ ಮುಖಂಡರಾದ ಆಟೋ ಮಾದೇವ್ ,ಮಹೇಶ್ ಗೌಡ ,ಶ್ರೀನಿವಾಸ್ , ಕೃಷ್ಣ, ಅಶೋಕ್ ,ಅಭಿ ,ಪವನ್ ,ವಿಷ್ಣು ,ಸಂಜಯ್ ಇನ್ನು ಮುಂತಾದವರು ಭಾಗವಹಿಸಿದ್ದರು

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.