Desecration of Ambedkar statue in Gangavati Nagar: Condemned Vijaya Doraraj


ಗಂಗಾವತಿ: ನಗರದ ಕೋರ್ಟ್ ಮುಂಭಾಗದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಪುತ್ಥಳಿಗೆ ಕೆಲವು ಕಿಡಿಗೇಡಿಗಳು ಅಪಮಾನವೆಸಗಿರುವುದು ತೀವ್ರ ಖಂಡನೀಯ ಎಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾವತಿ ನಗರವು ಇತ್ತೀಚೆಗೆ ಶಾಂತಿ ಸೌಹಾರ್ಧತೆಗೆ ಹೆಸರುವಾಸಿಯಾಗಿದ್ದು, ಯಾವುದೆ ಕೋಮು ಗಲಭೆಗಳು ನಡೆಯದಂತೆ ಸಾರ್ವಜನಿಕರು ಸೌಹಾರ್ಧತಯುತವಾಗಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರು ಅಂಬೇಡ್ಕರ್ ಪುತ್ಥಳಿಗೆ ರಕ್ಷಣೆಯಾಗಿರುವ ಸಿ.ಸಿ ಕ್ಯಾಮೇರಾಗಳನ್ನು ತೆರವುಗೊಳಿಸಿರುವುದು ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನವಾಗಿದೆ. ಇದರಿಂದಾಗಿ ಕೆಲವು ಕಿಡಿಗೇಡಿಗಳು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ಪುತ್ಥಳಿಗೆ ಮಧ್ಯರಾತ್ರಿ ಟೊಮೊಟೊ ಸಾರ್ಸ್ ಎರಚುವ ಮೂಲಕ ಪುತ್ಥಳಿಯನ್ನು ಮಲೀನಗೊಳಿಸಿರುತ್ತಾರೆ. ಇಂಥವರನ್ನು ಪತ್ತೆಹಚ್ಚಿ ಅವರ ಮೇಲೆ ಶಿಸ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಮ್ಮ ಪಕ್ಷ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ, ಅಬ್ದುಲ್, ಅಮೀರ್ ಅಲಿ, ಚಾಂದ್‌ಪಾಷಾ ಸೇರಿದಂತೆ ಪ್ರಗತಿಪರ, ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದರು.
Kalyanasiri Kannada News Live 24×7 | News Karnataka
