57th day of protest by Cauvery Action Committee

ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 57ನೇ ದಿನವೂ ಕೂಡ ಪ್ರತಿಭಟನೆಯನ್ನು ಮುಂದುವರಿಸಲಾಯಿತು.
ಈ ದಿನದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದಂತಹ ಮೆಲ್ಲಹಳ್ಳಿ ಮಹಾದೇವ ಸ್ವಾಮಿಯವರು ರಾಜ್ಯದಲ್ಲಿ ಮಳೆ ಇಲ್ಲದೆ ಕೃಷ್ಣರಾಜ ಸಾಗರ ಸೇರಿದಂತೆ ಎಲ್ಲಾ ಅಣೆಕಟ್ಟೆಗಳಲ್ಲಿ ನೀರು ಖಾಲಿಯಾಗಿದ್ದು, ಈಗಾಗಲೇ ಕೃಷಿಗೆ ನೀರಿಲ್ಲದೆ ಅಕ್ಕಿಯ ಬೆಲೆ ಜಾಸ್ತಿಯಾಗಿದ್ದು ಬೆಂಗಳೂರು ಮೈಸೂರು ಸೇರಿದಂತೆ ಕುಡಿಯುವ ನೀರಿನ ಅಭಾವ ಶುರುವಾಗಿದ್ದು ಈ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಪುಡಿ ಕುಡಿಯುವ ನೀರಿಗೆ ತೊಂದರೆಯಾಗಲಿದ್ದು ಈ ವಿಚಾರವನ್ನು ಕೇಂದ್ರ ಸರ್ಕಾರ ಹಾಗೂ ಕಾವೇರಿ ನ್ಯಾಯ ಮಂಡಳಿಗೆ ಗಮನಕ್ಕೆ ತಂದು ಈ ಕೂಡಲೇ ತಮಿಳುನಾಡು ನೀರು ಬಿಡುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರು ಹಾಗೂ ಚಲನಚಿತ್ರ ನಟರಾದ ಎಸ್ ಜಯಪ್ರಕಾಶ್ ರವರು, ಉಪಾಧ್ಯಕ್ಷರಾದ ಎಂ ಜೆ ಸುರೇಶ್ ಗೌಡ, ರಾಜ್ಯ ರೈತ ಸಂಘದ ವರ್ಕುಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ಗಾಣಿಗನಕೊಪ್ಪಲು ನಾಗರಾಜು, ಕರ್ನಾಟಕ ಸೇನಾ ಪಡೆಯ ತೇಜೇಶ್ ಲೋಕೇಶ್ ಗೌಡ, ಹನುಮಂತಯ್ಯ, ಪ್ರಭಾಕರ್, ಕೃಷ್ಣಪ್ಪ, ರಾಜಕುಮಾರ್ ಸಂಘದ ಅಧ್ಯಕ್ಷ ಮಹದೇವ ಸ್ವಾಮಿ ಕಾವೇರಿ ಸಮಿತಿಯ ಬಾಲಕೃಷ್ಣ, ನೇಹಾ, ದೇವರಾಜ್ ಶುಭಶ್ರೀ,ವಿಷ್ಣು, ಆರ್ ಮಂಜುಳಾ, ಪುಷ್ಪವತಿ, ಸಮಯ ಸೂತ್ರ ಸಂಪಾದಿಕೆ ಏನ್ ಮಂಜುಳಾ, ಬಿಜೆಪಿ ಮುಖಂಡರಾದ ಕುಮಾರ್, ಕೃಷ್ಣೆಗೌಡ, ಗಂಗನ್ ಗೌಡ ,,ಮಹೇಶ್ ಗೌಡ, ಅಶೋಕ್, ಕೃಷ್ಣ ಭಾಗವಹಿಸಿದ್ದರು.