Gangavati: Officials of the National Highway Authority have said that action will be taken to repair the toilets on the National Highway
ಗಂಗಾವತಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶೌಚಾಲಯಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೂದಗುಂಪಾ ಕ್ರಾಸ್ ನಿಂದ ಕೊಪ್ಪಳ ಮತ್ತು ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಟೋಲ್ ಪ್ಲಾಜಾಗಳ ಹತ್ತಿರ ಇರುವ ಶೌಚಾಲಯಗಳ ದುರಸ್ತಿಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಮತ್ತು ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಒಕ್ಕೂಟದ ನಿರ್ದೇಶಕ ಅಶೋಕಸ್ವಾಮಿ ಹೇರೂರ,ರಾಷ್ಟ್ರೀಯ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಮತ್ತು ಪ್ರಾಧಿಕಾರದ ಹೊಸಪೇಟೆ ಕಚೇರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅಶೋಕಸ್ವಾಮಿ ಹೇರೂರ ಅವರಿಗೆ ಪತ್ರ ಬರೆದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್ ಕಚೇರಿಯ ಅಧಿಕಾರಿಗಳು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದ್ದಾರೆ.
ವಣಗೇರಿ,ಶಹಪೂರ ಮತ್ತು ಹಿಟ್ನಾಳ ಟೋಲ್ ಪ್ಲಾಜಾಗಳ ಹತ್ತಿರ ಇರುವ ಶೌಚಾಲಯಗಳ ದುರಸ್ತಿಯ ಕೆಲಸ ಆರಂಭಿಸಲು ಸೂಚಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನೇಮ್ ಬೋರ್ಡ್ ಮತ್ತು ಮಾಹಿತಿ ಫ಼ಲಕಗಳು ಮುರಿದು ಹೋದ ಬಗ್ಗೆಯೂ ಹೇರೂರ ಅವರು ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ನೇಮ್ ಬೋರ್ಡ್ ದುರಸ್ತಿಗೊಳಿಸಲಾಗಿದ್ದು, ಮಾಹಿತಿ ಫ಼ಲಕಗಳನ್ನು ಸರಿಪಡಿಸಿರುವುದಿಲ್ಲ.ಈ ಬಗ್ಗೆ ಸಂಭಂದಿಸಿದವರಿಗೆ ಪುನಃ ದೂರು ಸಲ್ಲಿಸಿರುವುದಾಗಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.