Breaking News

ಕರ್ನಾಟಕ ರಾಜ್ಯ ರೈತ ಸಂಘದಿಂದಹನೂರು ತಾಲ್ಲೂಕಿನಲ್ಲಿ ರಸ್ತೆ ತಡೆ ಚಳುವಳಿ


ವರದಿ :ಬಂಗಾರಪ್ಪ ಸಿ ಹನೂರು.
ಹನೂರು :ಕ್ಷೇತ್ರದಲ್ಲಿ ರೈತರಿಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಬಗೆಹರಿಸದಿರುವುದು ಬೆಸರದ ಸಂಗಾತಿ ಹಾಗೂ ರಾಮಾಪುರ ಹೋಬಳಿಯ ನಾಲ್ ರೋಡಿನಿಂದ ಮಾರ್ಟಳ್ಳಿ-ಜಲ್ಲಿಪಾಳ್ಯಂ ವರೆಗಿನ ಕಾಡಂಚಿನ ಗ್ರಾಮಗಳ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜನವರಿ 3ನೆ ತಾರೀಖಿನಂದು ನಾಲ್‌ ರೋಡ್‌ ನಲ್ಲಿ ರಸ್ತೆ ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ ಗೌಡೆಗೌಡ ತಿಳಿಸಿದರು.

ಜಾಹೀರಾತು

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷ ರಾದ ಅಮ್ಜಾದ್ ಖಾನ್
ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲ್ಲೂಕಾದ ಹನೂರಿನಲ್ಲಿ ರುವ ಕಾಡಂಚಿನ ಗ್ರಾಮಗಳ ರೈತರ ಸಮಸ್ಯೆಗಳು ಬಹಳಷ್ಟಿದ್ದು, ಅಭಿವೃದ್ಧಿ ಕಡೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನವೇ ಕೊಡದ ಕಾರಣ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಮಾಪುರ ಹೋಬಳಿ ನಾಲ್‌ ರೋಡಿನಲ್ಲಿ ಮೇಲ್ಕಂಡ ಸಂಘಟನೆಯು ರಸ್ತೆ ತಡೆ ಚಳುವಳಿಯನ್ನು ಹಮ್ಮಿಕೊಂಡಿರುತ್ತದೆ. ಆದ್ದರಿಂದ ಮಾರ್ಟಳ್ಳಿ, ವೆಟ್ಟುಕಾಡು, ಬಿದರಹಳ್ಳಿ, ಸಂದನಪಾಳ್ಯ, ಪೆದ್ದನಪಾಳ್ಯ, ಕೂಡೂರು, ಹೂಗ್ಯಂ, ಜಲ್ಲಿಪಾಳ್ಯ ಮುಂತಾದ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದೆವಿ ಎಂದರು.
ಇದೇ ಸಮಯದಲ್ಲಿ ಮಂಡಿಸಿದ
-ಹಕ್ಕೋತ್ತಾಯಗಳು :-

  1. ಹದಗೆಟ್ಟಿರುವ ರಸ್ತೆ : ರಾಮಾಪುರದಿಂದ ನಾಲ್‌ ರೋಡ್ ಮೂಲಕವಾಗಿ ಜಲ್ಲಿಪಾಳ್ಯವರೆಗಿನ ರಸ್ತೆಯು ತೀರಾ ಹದಗೆಟ್ಟಿದ್ದು 40 ಟನ್ ಭಾರ ಹೊರುವ ವಾಹನಗಳು ಈ ಭಾಗದಲ್ಲಿ ಓಡಾಡುತ್ತಿದ್ದು ಗುಣಮಟ್ಟದ ಡಾಂಬರು ರಸ್ತೆ ನಿರ್ಮಾಣ ಮಾಡಬೇಕು.
  2. ಜಮೀನುಗಳಿಗೆ ಪೋಡು ಸಮಸ್ಯೆ : ಮಾರ್ಟಳ್ಳಿ ಗ್ರಾಮ ಹಾಗೂ ಹೂಗ್ಯಂ ಗ್ರಾಮಗಳ ಜಮೀನುಗಳ ಪೋಡಿನ ಸಮಸ್ಯೆ ಬಗೆಹರಿಸಬೇಕು.
  3. ಮಾರ್ಟಳ್ಳಿಯಿಂದ ಜಲ್ಲಿಪಾಳ್ಯದವರೆಗಿನ ಕಾಡಂಚಿನ ಪ್ರದೇಶಗಳ ಜಮೀನುಗಳಿಗೆ ಆನೆಗಳು ಸೇರಿದಂತೆ ಕಾಡುಪ್ರಾಣಿಗಳ

ಹಾವಳಿ ಹೆಚ್ಚಾಗಿದ್ದು ರೈಲ್ವೆ ಕಂಬಿಗಳ ಬ್ಯಾರಿಕೇಡ್ ಬೇಲಿ ನಿರ್ಮಾಣ ಮಾಡಬೇಕು.

  1. ನಾಲ್‌ರೋಡಿನಿಂದ ಜಲ್ಲಿಪಾಳ್ಯದವರೆಗೆ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು ತಕ್ಷಣ ಆರಂಭಿಸಬೇಕು ಹಾಗೂ ಪಂಪ್‌ಸೆಟ್ಟುಗಳಿಗೆ 7 ತಾಸು ಹಗಲು ವೇಳೆಯಲ್ಲಿಯೇ 3 ಫೇಸು ಗುಣಮಟ್ಟದ ವಿದ್ಯುತ್ ನೀಡಬೇಕು.

5) ಕೂಡಲೂರು ಹಾಗೂ ಸುಳ್ಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸರ್ಮಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಆದ್ದರಿಂದ ಆರೋಗ್ಯ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವಂತೆ ಕ್ರಮವಹಿಸಬೇಕು.

6) ಸ್ಥಳೀಯವಾಗಿ ಲಭ್ಯವಿರುವ ಕೊಟ್ಟಿಗೆ ಗೊಬ್ಬರವು ಹೊರ ರಾಜ್ಯಕ್ಕೆ ಸಾಗಾಣಿಕೆಯಾಗುತ್ತಿದ್ದು ಸ್ಥಳೀಯ ರೈತರಿಗೆ ಗೊಬ್ಬರ ದೊರಕುತ್ತಿಲ್ಲ ಆದ್ದರಿಂದ ಕೊಟ್ಟಿಗೆ ಗೊಬ್ಬರವು ಹೊರರಾಜ್ಯಕ್ಕೆ ಹೋಗದಂತೆ ನಿರ್ಬಂದ ವಿಧಿಸಬೇಕು.

ಈ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ರಸ್ತೆ ತಡೆ ಚಳುವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಗ್ರಾಮಸ್ಥರು ಭಾಗವಹಿಸುವಂತೆ ಮೇಲ್ಕಂಡ ಸಂಘಟನೆ ಮನವಿ ಮಾಡಿದೆ , ದರಣಿಯ ಸಮಯದಲ್ಲಿ
ಸುವ್ಯವಸ್ಥೆ ಕಾಪಾಡಬೇಕು. ಹಾಗೂ ಅನಿದಿಷ್ಟ ರಸ್ತೆ ತಡೆ ಚಳುವಳಿಯ ಸ್ಥಳಕ್ಕೆ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು, ಉಪವಿಭಾಗಅಧಿಕಾರಿಗಳು, ಹಾಗೂ ಹಾಗೂ ಇನ್ನಿತರೆ ಅಧಿಕಾರಿಗಳು ರಸ್ತೆ ತಡೆ ಚಳುವಳಿ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಕ್ತಿವೇಲು, ಗೌರವಾಧ್ಯಕ್ಷ ರಾಜೇಂದ್ರ, ಯುವ ಘಟಕ ಅಧ್ಯಕ್ಷ ಸೂರ್ಯ, ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ಗೌಡ, ಕಾಶಿ ಗೌಡ, ಅರ್ಪದ್ ರಾಜ್, ಪಳನಿ ಶೆಟ್ಟಿ, ಹುಚ್ಚಯ್ಯ, ರಾಜಮಣಿ, ಪೂಂಗುಡಿ, ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.