Public should be cautious about Corona: Virupaksha Murthy

ಗಂಗಾವತಿ,30 : ನಗರದ ಸಾರ್ವಜನಿಕರು ತಮ್ಮ ದಿನ ನಿತ್ಯದ ಜೀವನದಲ್ಲಿ ತುಂಬಾ ಜಾಗೂರಕರಾಗಿ ಇರಬೇಕು ನಗರಸಭೆ ಪೌರಾಯುಕ್ತರಾದ ವಿರೂಪಾಕ್ಷ ಮೂರ್ತಿ ಹೇಳಿದರು.
ಮಾದ್ಯಮದವರೊಂದಿಗೆ ಮಾತನಾಡಿದ ಅವರು ಇತ್ತಿಚೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿದಂತೆ ನಾವು ಮುಂಜಾಗ್ರತೆ ವಹಿಸಬೇಕು.60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಟ್ ಧರಿಸಬೇಕು.ವಾತಾವರಣ ಉಷ್ಣತೆ ಹೆಚ್ಚಿರುವುದರಿಂದ ವಹಿಸಬೇಕು ಮೂನ್ನೆಚ್ಚರಿಕೆ ಒಂದೆ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂದಣೆ ಸೇರುವದನ್ನು ಕಡಿಮೆ ಮಾಡಬೇಕು ಹಾಗೂ ಅಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು. ಕೊರೋನಾ ಬಗ್ಗೆ ಭಯಪಡದೆ
ಮುಂಜಾಗ್ರತೆ ಕ್ರಮಗಳನ್ನು ಕೈಗೋಳ್ಳುವ ಅನಿವಾರ್ಯತೆ ಇದೆ ಸೀತ, ಜ್ವರ.ಕೆಮ್ಮು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಕಾಣಬೇಕು.
ಯಾರು ಭಯಪಡುವ ಅಗತ್ಯವಿಲ್ಲಾ ಯಾಕೆಂದರೆ ನಮ್ಮ ತಾಲೂಕು ಸೇರಿದಂತೆ ನಮ್ಮ ಜಿಲ್ಲೆಯಲ್ಲಿ ಯಾವ ಇಲ್ಲಿಯವರೆಗೆ ಒಂದು ಪ್ರಕರಣಗಳು ಪತ್ತೆಯಾಗಿರುವದಿಲ್ಲಾ ಜನತೆ ಆದಷ್ಟು ಅಂತರ ಕಾಪಾಡಿಕೊಳ್ಳಬೇಕು ಎಂದರು.
Kalyanasiri Kannada News Live 24×7 | News Karnataka
