Breaking News

ಮಾತನಾಡಿದರೆ ಮನ ಅರಳುತಿರಬೇಕು-ಮಹಾದೇವಸ್ವಾಮಿಗಳು

If you speak, your mind should be blooming – Mahadeva Swami

ಜಾಹೀರಾತು

ಯಲಬುರ್ಗಾ— ಒಳ್ಳೆ ಮಾತಿಗಿಂತ ದುಡಿದು ತಿನ್ನುವ ಕೈಗಳು ಶ್ರೇಷ್ಠ ಎಂದಾಗಲೂ ನಮ್ಮ ಮಾತುಗಳು ಪರರ ಮನಸ್ಸನ್ನು ಅರಳಿಸುವಂತಿರಬೇಕೆಂದು ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಮಹಾದೇವ ಸ್ವಾಮಿಗಳು ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಪ್ರವಚನದ ಮೂರನೇ ದಿನದ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ನೋಡಿದರೆ ಕೈಲಾಸವೆ ಕರಮುಡಿ ಗ್ರಾಮದಲ್ಲಿ ಇದೆ ಅನಿಸುತ್ತದೆ ಜಾತಿ ಬೇಧಗಳನ್ನು ಎಣಿಸದೆ ಸಾಮರಸ್ಯದ ಬದುಕು ಸಾಗಿಸುತ್ತಿರುವ ಅನುಭವ ಮಂಟಪವೇ ಧರೆಗೆ ಇಳಿದಂತಾಗಿದೆ . ದಾನ ಮಾಡುವ ಕೈ ಹಾಗೂ ಮನಸ್ಸು ಎರಡು ಶುದ್ಧವಾಗಿರಬೇಕು ಅದು ನಿಜಕ್ಕೂ ಶಿವನಿಗೆ ಅರ್ಪಣೆ ಯಾಗುತ್ತದೆ ಅಂತಹ ಮಲ್ಲಿಗೆ ಹೂವಿನ ಮನಸ್ಸು ಗ್ರಾಮದವರದಾಗಿದೆ. ಒಂದು ಒಳ್ಳೆಯ ಧಾರ್ಮಿಕ ಕೆಲಸ ಹೇಗಿರಬೇಕು ಎಂಬುವುದಕ್ಕೆ ಗ್ರಾಮದ ಹಿರಿಯರು ˌ ಯುವಕರು ! ಮಹಿಳೆಯರು ಮಾಡುತ್ತಿರುವ ಕೆಲಸವೇ ಸಾಕ್ಷಿಯಾಗಿದೆ ಎಂದರು.

 ಗಜಗಿನಹಾಳದ ವೀರೇಶ ಶಾಸ್ತ್ರಿಗಳು  ವೀರಭದ್ರೇಶ್ವರ ಪುರಾಣ ಪ್ರವಚಿಸಿದರು. ಯರಗೇರಾದ ಚಂದಾಲಿಂಗಯ್ಯ ಹಿರೇಮಠ ˌ ವೀರಭದ್ರಯ್ಯ ಕೆಂಬಾವಿಮಠ ರವರು ಸಂಗೀತ ಕಾರ್ಯಕ್ರಮ ನೀಡಿದರು.

ಸಂಗಪ್ಪ ಬಂಡಿˌರಾಜು ಉಳ್ಳಾಗಡ್ಡಿˌ ಮಂಜುನಾಥ ತುರಬಿನˌ ಅಂದಪ್ಪ ಹೊಸಂಗಡಿ ˌವೀರಣ್ಣ ಹೆಂಡಿಗೇರಿˌ ವೀರಣ್ನ ಮಾನಶೆಟ್ಟಿ ˌಶಾರದಾ ಕುರಿ! ವೀರಮ್ಮ ಪಾಟೀಲ! ಅನ್ನಪೂರ್ಣ ಕೆಂಚರಡ್ಡಿˌ ಶಕುಂತಲಾ ಪಾಟೀಲ ˌಶಿವಪ್ಪ ಉಳ್ಳಾಗಡ್ದಿ ˌ ಕಳಕಪ್ಪ ರಾಟಿ! ಶರಣಗೌಡ ಪೋ.ಪಾಟೀಲ ˌ ಶ್ಯಾಮೀದ್ ಸಾಬ ಮುಲ್ಲಾ ˌ ಹುಚ್ಛುಸಾಬ ಬಡಿಗೇರ!ˌˌಭೀಮಪ್ಪ ಹವಳಿˌ ಮಂಜುನಾಥ ಕುಕನೂರ ಮಂಜುನಾಥ ಚನ್ನಬಸಪ್ಪ ಗೊಂಗಡಶೆಟ್ಟಿ ! ಗೌಡಪ್ಪ ಬಲಕುಂದಿ ˌ ಉಮೇಶ ಕುಕನೂರ ˌ ಮರ್ಧಾನಸಾಬ ಮುಲ್ಲಾ ˌ ˌˌಗಂಗಪ್ಪ ಹವಳಿ. ವೀರೂಪಾಕ್ಜ್ಞಪ್ಪ ಉಳ್ಳಾಗಡ್ಡಿ. ಪರುಶರಾಮ ರಾಠೊಡ ˌಇನ್ನೀತರರು ಉಪಸ್ಥಿತರಿದ್ದರು.
ದಾಸೋಹ ಸೇವೆಯನ್ನು ಮೂರನೇ ವಾರ್ಡಿನ ನಾಗರಿಕರು ಮಾಡಿದರು .

About Mallikarjun

Check Also

ನಮ್ಮ ಭೂಮಿ-ನಮ್ಮ ಹಕ್ಕು ಬಿಜೆಪಿ ಪ್ರತಿಭಟನೆ

Our Bhoomi-Our Right BJP protest ಕೊಪ್ಪಳ: ರಾಜ್ಯದಲ್ಲಿ ಕೃಷಿ ಭೂಮಿ, ಮಠ, ದೇವಸ್ಥಾನ ದ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.