Breaking News

ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ವಿಶ್ವಕರ್ಮರ ಕೊಡುಗೆ ಅಪಾರ…..ಸಚಿವ ಶಿವರಾಜ ತಂಗಡಗಿ

Vishwakarma’s contribution to the historic architectural heritage of the country is immense…..Minister Shivraj Thangadagi

ಜಾಹೀರಾತು

ಸಿಂಧನೂರು ನಗರದ ವಾರ್ಡ ನಂಬರ್ 4ರಲ್ಲಿನ ವಿಶ್ವಕರ್ಮ ಸಮುದಾಯದ ಶೀಥೀಲಾವಸ್ಥೆಯಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಕಾರಟಗಿಯ ನಿವಾಸದಲ್ಲಿ ಸಿಂಧನೂರಿನ ವಿಶ್ವಕರ್ಮ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು.

ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಿಗಳ ಕೊಡುಗೆ ಅಪಾರ ಎಂದು ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಹೇಳಿದರು.

ಕಾರಟಗಿ ನಗರದ ತಮ್ಮ ನಿವಾಸದಲ್ಲಿ ಸಿಂಧನೂರಿನ ವಿಶ್ವಕರ್ಮ ಮುಖಂಡರ ಮನವಿ ಸ್ವೀಕರಿಸಿ ಮಾತನಾಡಿದ ಅವರು ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಿಗಳ ಕೊಡುಗೆ ಅಪಾರ.
ವಿಶ್ವಕರ್ಮರು ತಮ್ಮದೇ ಆದ ಸಾಂಪ್ರದಾಯಿಕ ವೃತ್ತಿಯನ್ನು ಮಾಡುವ ಮೂಲಕ ಈ ನಾಡಿಗೆ ಕಲೆ,ಸಂಸ್ಕೃತಿ,ವಾಸ್ತುಶಿಲ್ಪಗಳನ್ನು ಕೊಡುಗೆ ನೀಡಿದವರು.ಇಂತಹ ಒಂದು ಅದ್ಭುತವಾದ ಕಲೆಯನ್ನು ಹೊಂದಿರುವ ಏಕೈಕ ಸಮಾಜ ವಿಶ್ವಕರ್ಮ ಸಮಾಜ.ಇಂತಹ ಸಮಾಜವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸ ಬೇಕಾಗಿದೆ.ನಿಮ್ಮ ಮನವಿಯನ್ನು ಆದಷ್ಟೂ ಶೀಘ್ರವಾಗಿ ಪರಿಶೀಲಿಸಿ ಶ್ರೀ ಕಾಳಿಕಾದೇವಿ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ರಾಜ್ಯ ಕಾರ್ಯದರ್ಶಿ ಸೋಮಣ್ಣ ಸುಕಲಪೇಟೆ,ತಾಲೂಕ ಅದ್ಯಕ್ಷರಾದ ಮೌನೇಶ ತಿಡಿಗೋಳ,ಮುಖಂಡರುಗಳಾದ ಅಂಬಣ್ಣ ಗೊರೆಬಾಳ, ಧರ್ಮಣ್ಣ ಗುಂಜಳ್ಳಿ,ಷಣ್ಮುಖಪ್ಪ ಮುಳ್ಳೂರು,ಡಾ.ವೀರೇಶ ತಿಡಿಗೋಳ,ವೀರಭದ್ರಪ್ಪ ಹಂಚಿನಾಳ,ಮಂಜುನಾಥ ಕೊಟ್ನೆಕಲ್,ಮೌನೇಶ ಸಾಲವಾಡಗಿ,ಬಸವರಾಜ ಕಮತಗಿ,ಶಂಕರ ಪತ್ತಾರPWD, ಸುಶೀಲ ದೇವರಗುಡಿ,ಮುತ್ತಣ್ಣ ಪತ್ತಾರ,ವಿನೋದ ಪತ್ತಾರ, ಉಪೇಂದ್ರ ಆಚಾರಿ ಶಿಲ್ಪಿ,ರಾಜು ಬಳಗಾನೂರ,ಮಂಜುನಾಥ ಉಪ್ಪಲದೊಡ್ಡಿ,ವೀರೇಶ ಚನ್ನಳ್ಳಿ,ಚನ್ನಪ್ಪ ಕೆ.ಹೊಸಹಳ್ಳಿ ಇನ್ನೂ ಹಲವರು ಉಪಸ್ಥಿತರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.