Breaking News

ಗಂಗಾವತಿಯರಸ್ತೆಗಳನ್ನು ಸರಿಪಡಿಸಲು ಶಾಸಕರಿಗೆ ಒತ್ತಾಯ: ಭಾರಧ್ವಾಜ್.

Urge MLAs to repair Gangavati roads: Bhardwaj

ಜಾಹೀರಾತು
Screenshot 2023 12 19 19 21 19 48 E307a3f9df9f380ebaf106e1dc980bb6 232x300

ಗಂಗಾವತಿ: ನಗರದಲ್ಲಿ ರಸ್ತೆಗಳು ಪೂರ್ತಿಯಾಗಿ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳ ವಾಹನ ಸವಾರರು ರಸ್ತೆಗಳಲ್ಲಿರುವ ತೆಗ್ಗುಗಳನ್ನು ತಪ್ಪಿಸಲು ಆಗದೆ ಪರದಾಡುತ್ತಿದ್ದಾರೆ. ಶಾಸಕರು ಕೂಡಲೇ ಗಂಗಾವತಿ ನಗರದ ರಸ್ತೆಗಳನ್ನು ಸ್ವತಃ ಪರಿಶೀಲಿಸಿ ರಿಪೇರಿ ಮಾಡಲು ಸರ್ಕಾರವನ್ನು ಒತ್ತಾಯಿಸಲು ಕೇಳಿಕೊಳ್ಳುತ್ತೇವೆ. ಶಾಸಕರು ಮುಂದೆ ಬಂದಲ್ಲಿ ಕಾರ್ಮಿಕರು, ಆಟೋ ಚಾಲಕರು, ಬೀದಿ ವ್ಯಾಪಾರಿಗಳು ಅವರನ್ನು ಬೆಂಬಲಿಸಿ ಸರ್ಕಾರದ ವಿರುದ್ಧ ಹೋರಾಟಗಳನ್ನು ನಡೆಸಲು ಸಿದ್ಧರಿದ್ದೇವೆ.
ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಮಾತಾಡಲು ಸಮಯ ಸಿಕ್ಕಾಗಲ್ಲೆ ಬಳ್ಳಾರಿ ಬಗ್ಗೆ ಮತ್ತು ಹಳೆಯ ಪ್ರಕರಣಗಳ ಬಗ್ಗೆ ಮಾತನಾಡುತ್ತಾರೆ. ಇದು ಗಂಗಾವತಿ ಮತದಾರರಿಗೆ ಶಾಸಕರು ಮಾಡುತ್ತಿರುವ ದ್ರೋಹವಾಗಿದೆ. ಶಾಸಕರು ಕೂಡಲೇ ಗಂಗಾವತಿಯ ೩೫ ವಾರ್ಡುಗಳನ್ನು ಪರಿಶೀಲಿಸಿ ರಸ್ತೆಗಳನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸಲು ಮುಂದಾಗಬೇಕು.
ಶಾಸಕರು ರಸ್ತೆಗಳ ವಿಷಯದಲ್ಲಿ ನಿರ್ಲಕ್ಷö್ಯವಹಿಸಿ ಅಂಜನಾದ್ರಿ ಬೆಟ್ಟ ಇನ್ನಿತರ ದೇವಸ್ಥಾನಗಳ ಬಗ್ಗೆ ಮಾತನಾಡುವುದು ಪ್ರಗತಿಪರ ಜನರು ಗಮನಿಸುತ್ತಿದ್ದಾರೆ. ಗಂಗಾವತಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿದ ನಿವೇಶನರಹಿತರಿಗೆ ಯಾವುದೇ ರೀತಿಯ ಸ್ಪಂದಿಸುತ್ತಿಲ್ಲ. ಶಾಸಕರು ಈ ವಿಷಯವನ್ನು ಹಗುರವಾಗಿ ಪರಿಗಣಿಸದೇ ಮುಂದಿನ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಶಾಸಕರ ವಿರುದ್ಧ ಗಂಗಾವತಿ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಕ್ರಾಂತಿಚಕ್ರ ಬಳಗ ಎಚ್ಚರಿಸಿದೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.