Appointment of various office bearers of K.D.Sam Samiti (Bhimavada) organization
ಗಂಗಾವತಿ: ಸಂವಿಧಾನ ಶಿಲ್ಪಿ, ಭಾರತರತ್ನ, ವಿಶ್ವಜ್ಞಾನಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಮಹಾಪರಿನಿರ್ವಾಣ ದಿನದ ವಿಚಾರ ಸಂಕೀರಣ ಅಂಗವಾಗಿ ಗಂಗಾವತಿ ತಾಲೂಕ ಪದಾಧಿಕಾರಿಗಳ ಅಲ್ಪಸಂಖ್ಯಾತರ ವಿಭಾಗದ ಹಾಗೂ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಕೊಪ್ಪಳ ಜಿಲ್ಲಾ ಸಂಚಾಲಕರಾದ ಸಿ.ಕೆ ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧೀರ ಕನ್ನಡಿಗರ ಕರವೇ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿರುಪಾಕ್ಷಿಗೌಡ ನಾಯಕ ಹೇರೂರು ಮತ್ತು ಯುವ ಕಾಂಗ್ರೆಸ್ ಮುಖಂಡರಾದ ರಾಜುನಾಯಕ ಅವರು ವಹಿಸಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ವಿಚಾರಗಳನ್ನು ಮತ್ತು ಸಂಘಟನೆ ಎಂದರೇನು, ಸಂಘಟನೆಯನ್ನು ನಾವು ಏಕೆ ಮಾಡಬೇಕು, ಅನ್ಯಾಯಕ್ಕೆ ಒಳಗಾದವರ ಪರವಾಗಿ ನಾವು ಯಾವಾಗಲೂ ಧ್ವನಿ ಎತ್ತಬೇಕು ಎಂದು ಪದಾಧಿಕಾರಿಗಳಿಗೆ ತಿಳಿಸಿ, ನೂತನ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಚಿಂತಕರು ಹಾಗೂ ಬುದ್ಧಿಜೀವಿಗಳಾದ ಎಂ.ಎನ್.ಎA ಕಾಲೇಜಿನ ಪ್ರಾಚಾರ್ಯರಾದ ಡಾ. ಸೋಮಕ್ಕ ಹಾಗೂ ಸರಕಾರಿ ಜೂನಿಯರ್ ಕಾಲೇಜಿನ ಗ್ರಂಥಪಾಲಕರು ಹಾಗೂ ಜಾನಪದ ಕವಿಗಳಾದ ರಮೇಶ ಗಬ್ಬೂರು ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಕುರಿತು, ಅವರು ನಡೆದುಬಂದ ದಾರಿ ಹಾಗೂ ನಮ್ಮ ದೇಶದ ಸಂವಿಧಾನ ಜಾರಿಯಾಗುವ ಪೂರ್ವದಲ್ಲಿ ಈ ದೇಶದಲ್ಲಿ ಬಹುಸಂಖ್ಯಾತ ಹೆಣ್ಣುಮಕ್ಕಳು, ಕೂಲಿಕಾರ್ಮಿಕರು, ಶೋಷಿತ ಸಮುದಾಯಗಳು, ದಲಿತರು, ತಿರಸ್ಕಾರಕ್ಕೆ ಒಳಗಾದವರು, ನಿರ್ಗತಿಕರು, ಬುಡಕಟ್ಟು ಜನಾಂಗದವರು, ಶಿಕ್ಷಣ, ಆಸ್ತಿ, ಸಂಪತ್ತು, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಅವಕಾಶ ಇಲ್ಲದಿರುವುದು, ಕೆಲವು ಅವಕಾಶಗಳಿಂದ ವಂಚಿತರಾಗಿದ್ದರು. ಸಂವಿಧಾನ ಜಾರಿಯಾದ ನಂತರ ಇವುಗಳನ್ನು ಎಲ್ಲವನ್ನೂ ಪಡೆದುಕೊಳ್ಳುವುದಕ್ಕೆ ಸಾಧ್ಯವಾಯಿತು ಎಂದು ತಿಳಿಸುತ್ತಾ, ಬಾಬಾಸಾಹೇಬರ ಜೀವನ ಕುರಿತು ಹೇರಳವಾಗಿ ತಿಳಿಯಪಡಿಸಿದರು.
ಇದೇ ಸಮಯದಲ್ಲಿ ಸಂಘಟನೆಯ ಗಂಗಾವತಿ ತಾಲೂಕ ಅಧ್ಯಕ್ಷರಾಗಿ ಯಲ್ಲಪ್ಪ, ಉಪಾಧ್ಯಕ್ಷರಾಗಿ ಟಿ. ವೆಂಕಟೇಶ ಜಂತಕಲ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅತ್ತ ಸಂಪAಗಿ, ವಿದ್ಯಾರ್ಥಿ ಘಕಟದ ತಾಲೂಕ ಅಧ್ಯಕ್ಷರಾಗಿ ಸಾಗರ ಉಪಾಧ್ಯಕ್ಷರಾಗಿ ಕೃಷ್ಣ ನೂತನ ಪದಾದಿಕಾರಿಗಳಾಗಿ ಆಯ್ಕೆಯಾದರು.