Navali: A warm welcome to the warrior

ಕನಕಗಿರಿ: ಭಾರತೀಯ ಸೇನೆಗೆ ಸೇರಿದ ಬಳಿಕ ಪ್ರಥಮ ಬಾರಿಗೆ ಸ್ವಗ್ರಾಮಕ್ಕೆ ಆಗಮಿಸಿದ ತಾಲೂಕಿನ ನವಲಿ ಗ್ರಾಮದ ಬಸವರಾಜ ಹಿರೇರಾಮಣ್ಣ ಕಂಬಿ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಮಾಕಣ್ಣ ಕಂಬ್ಬಿ ವೃತ್ತದಲ್ಲಿ ಗ್ರಾಮದ ಹಿರಿಯರು ಶಾಲಾ ಮಕ್ಕಳು ಮೈಸೂರು ಪೇಟ ತೊಡಿಸಿ ಶಾಲು, ಹೂಮಾಲೆ ಹಾಕಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪುಷ್ಪ ಎರಚಿ ಘೋಷಣೆ ಕೂಗುತ್ತ ಸ್ವಾಗತಿಸಿದರು.
ಬಳಿಕ ಯುವ ಸೈನಿಕ ಬಸವರಾಜ ಕಂಬ್ಬಿ ಮಾತನಾಡಿ, ನಮ್ಮೂರ
ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ನೀಡಿದ ಈ ಸನ್ಮಾನ, ಗೌರವವನ್ನು ದೇಶ ಕಾಯುವ ಪ್ರತಿಯೊಬ್ಬ ಸೈನಿಕನಿಗೂ ಸಮರ್ಪಿಸುತ್ತೇನೆ ಎಂದರು.
ವಿರುಪಣ್ಣ ಕಲ್ಲೂರು ಮಾತನಾಡಿ, ಸೈನಿಕ ಸೇವೆ ಸಾರ್ಥಕ ಸೇವೆ. ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ ಸೈನಿಕರಿಗೆ ಪ್ರತಿಯೊಬ್ಬ ನಾಗರಿಕನೂ ಗೌರವ ಸಲ್ಲಿಸಬೇಕು ಎಂದರು. ಪ್ರೌಢಶಾಲೆ ಮುಖ್ಯಪಾಧ್ಯಾಯರು, ಪಪೂ ಕಾಲೇಜ್ ಆಡಳಿತ ಮಂಡಳಿ ಉಪಾಧ್ಯಕ್ಷ ಹನುಮಂತಪ್ಪ ಕಲ್ಲೂರು, ಸಿದ್ದನಗೌಡ ಮಾ.ಪಾ. ಇತರರು ಇದ್ದರು.