Somashekhar Juttal as the new rural CPI: Acceptance of power
ಗಂಗಾವತಿ: ಗ್ರಾಮೀಣ ಭಾಗದಲ್ಲಿ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ , ಶಾಂತಿ ಸೌಹಾರ್ದತೆಗಾಗಿ ಎಲ್ಲರ ಸಹಕಾರ ಜೊತೆಗೆ ಇಲಾಖೆಯ ನಿಯಮಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ಶುಕ್ರವಾರ ಗ್ರಾಮೀಣ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯ ಮತ್ತು ಶೋಷಿತ ಜನರಿಗೆ ಕಾನೂನಾತ್ಮಕವಾಗಿ ನ್ಯಾಯ ಒದಗಿಸುವಂತಹ ಕಾರ್ಯ ಮಾಡುತ್ತೇನೆ. ಮೇಲಾಧಿಕಾರಿಗಳ ಆದೇಶದಂತೆ ಅಕ್ರಮ ಚಟುವಟಿಕೆಗಳನ್ನು ತಡೆದು ಪ್ರತಿಯೊಬ್ಬರು ಶಾಂತಿ ಕಾನೂನು ಸೂರ್ಯವವಸ್ಥೆ ಅಡಿಯಲ್ಲಿ ಜೀವನ ನಡೆಸುವ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.
ಇತ್ತೀಚಿಗೆ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ್ದು
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಅವರು ರಾಜ್ಯ ಸರಕಾರ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಆದೇಶಿಸಿತ್ತು.
ನೂತನ ಸಿಪಿಐ ಸೋಮಶೇಖರ್ ಜುಟ್ಟಲ್ ಅವರು ಹಿಂದೆ ಪ್ರಪ್ರಥಮ ಧಾರವಾಡ ಜಿಲ್ಲೆ ಗದಗ ಪೊಲೀಸ್ ಠಾಣೆ. ಬೆಳಗಾವಿ ಜಿಲ್ಲೆ ಕ್ಯಾಂಪ್ ಪೊಲೀಸ್ ಠಾಣೆ ಕೊಪ್ಪಳ ಜಿಲ್ಲೆ ಕುಕನೂರ ಪೊಲೀಸ್ ಠಾಣೆ ಹುಬ್ಬಳ್ಳಿ ವಿಮಾನ ನಿಲ್ದಾಣ ಪೊಲೀಸ್ ಇನ್ಸೆಕ್ಟರ್ ಗದಗ ಗ್ರಾಮೀಣ ಸಿಪಿಐ ಕೊಪ್ಪಳ CEN ಪೊಲೀಸ್ ಠಾಣೆ ಇನ್ಸೆಕ್ಟರ್ ಬಿಜಾಪುರ್ ಜಿಲ್ಲೆ ಬಸವನ ಬಾಗೇವಾಡಿ ಸಿಪಿಐ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಸಿಪಿಐ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಗಂಗಾವತಿ ಗ್ರಾಮೀಣ ಸಿಪಿಐಯಾಗಿ ನೇಮಕಗೊಂಡಿದ್ದು. ಗ್ರಾಮೀಣ ಭಾಗದಲ್ಲಿ ಅಕ್ರಮ ಡಂಧಗೆ ಕಡಿವಾಣ ಬಿಳಲಿ ಎಂದು ಸಾರ್ವಜನಿಕರ ಅಭಿಪ್ರಾಯ