Babasaheb Dr. BR to Martalli Ramalingam and wife Nadiya Ramalingam. Ambedkar National Award




ವರದಿ:ಬಂಗಾರಪ್ಪ ಸಿ ಹನೂರು.
ಹನೂರು: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ರಾಷ್ಟದ್ಯಾಂತ ಸಾಧಕರನ್ನು ನೀಡಿ ಕೊಡ ಮಾಡುವ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ರಾಮಲಿಂಗಮ್ ಮತ್ತು ಅವರ ಪತ್ನಿ ಹಾಲಿ ಮಾರ್ಟಳ್ಳಿ ಗ್ರಾಮ ಪಂಚಾಯತಿ ಉಪಾದ್ಯಕ್ಷೆ ಶ್ರೀಮತಿ ನದಿಯಾ ರಾಮಲಿಂಗಮ್ ಭಾಜನರಾಗಿದ್ದಾರೆ
ಡಿಸೆಂಬರ್ 10 ಮತ್ತು 11 ರಂದು ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಮಲಿಂಗಮ್ ಮತ್ತು ಅವರ ಪತ್ನಿ ಶ್ರೀಮತಿ ನದಿಯಾ ರಾಮಲಿಂಗಮ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮಾರ್ಟಳ್ಳಿ ಸಮೀಪದ ಕಿಚ್ ಗುತ್ರಿ ಮಾರಮ್ಮ ದೇವಸ್ಥಾನದಲ್ಲಿ ಜರುಗಿದ್ದ ವಿಷ ಪ್ರಾಶನ ಘೋರ ದುರಂತ ಸಂಧರ್ಭದಲ್ಲಿ ರಾಮಲಿಂಗಮ್ ಮತ್ತು ಅವರ ಪತ್ನಿ ಶ್ರೀಮತಿ ನದಿಯಾ ರಾಮಲಿಂಗಮ್ ಅವರು ಸಂತ್ರಸ್ತರಿಗೆ ನೆರವು ಮತ್ತು ತೆಗೆದುಕೊಂಡ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿ ಯನ್ನು ಗುರುತಿಸಿ ಮತ್ತು ರಾಮಲಿಂಗಮ್ ಅವರು ದಲಿತ ಹಿಂದುಳಿದ ಸಮುದಾಯದ ಜನರ ಆರೋಗ್ಯ ಶಿಕ್ಷಣದ ಬಗ್ಗೆ ಸಮಾಜ ಸೇವೆಯನ್ನು ಗುರುತಿಸಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.