praśikṣaṇārthi vi.Vi taṇḍadinda āyke.In the yoga competition of TMAE School of Education, Gangavati Trainees selected from the team of V.V.

ಇತರಗಂಗಾವತಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ವತಿಯಿಂದ ನಡೆದ ೨೦೨೩-೨೪ನೇ ಸಾಲಿನ ಯೋಗ ಸ್ಪರ್ಧೆಯಲ್ಲಿ ಗಂಗಾವತಿ ನಗರದ ಟಿ.ಎಂ.ಎ.ಇ. ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿ ಕಾವ್ಯ ಅರಳಿಕಟ್ಟಿಮಠ ಇವರು ವಿ.ವಿ ತಂಡದಿAದ ಆಯ್ಕೆಯಾಗಿದ್ದು, ಇವರು ಮುಂದಿನ ಡಿಸೆಂಬರ್ ೦೧ ರಿಂದ ೦೪ ರವರೆಗೆ ಕೊಂಗನಾಡು ಇಂಜಿನೀಯರಿAಗ್ & ಟೆಕ್ನಾಲಜಿ ಕಾಲೇಜು ತಿರುಚನಾಪಳ್ಳಿ (ನಾಮಕ್ಕಲ್) ಯಲ್ಲಿ ನಡೆಯುವ ದಕ್ಷಿಣವಲಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಇವರಿಗೆ ಟಿ.ಎಂ.ಎ.ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವರಸದ್ಯೋಜಾತ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮಾನ್ ಟಿ.ಎಂ ಚಂದ್ರಶೇಖರಯ್ಯನವರು, ಸಂಸ್ಥೆಯ ಸರ್ವ ಸದಸ್ಯರು, ಪ್ರಾಚಾರ್ಯರಾದ ಡಾ. ಕೆ.ಸಿ ಕುಲಕರ್ಣಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಜಯರಾಮ ಮರಡಿತೋಟ, ಸಂಸ್ಥೆಯ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.