Birsa Munda Jayanti at Palar

ಹನೂರು ತಾಲೂಕಿನ ಪಾಲಾರ್ ಗ್ರಾಮದಲ್ಲಿ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟನೆ ಮಾಡಿದರು.
ವರದಿ:ಬಂಗಾರಪ್ಪ ಸಿ ಹನೂರು.
ಹನೂರು : ಶಿಕ್ಷಣ ಪಡೆದುಕೊಳ್ಳುವ ಮೂಲಕ
ಸಂಘಟನೆ ಮಾಡಿ ನಂತರ ಎಲ್ಲರೂ ಒಗ್ಗಟ್ಟಾಗಿ ಮುಂದೆ ಬರಬೇಕು ಎಂದು ರಾಜ್ಯ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಜಡೇಸ್ವಾಮಿ ಹೇಳಿದರು.
ತಾಲೂಕಿನ ಗಡಿ ಗ್ರಾಮ ಪಾಲಾರ್ ಗ್ರಾಮದಲ್ಲಿ ತಾಲೂಕು ಸೋಲಿಗ ಅಭಿವೃದ್ಧಿ ಸಂಘ ಹಾಗೂ ಸರ್ಕಲ್ ಸೋಲಿಗ ಸಂಘ ಮಹದೇಶ್ವರ ಬೆಟ್ಟ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ
ಮಾತನಾಡಿದರು.
ಮುಂಡಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯ ಬೇಕು ಆ ಮೂಲಕ ನಾವು ಸಂಘಟಿತರಾಗಬೇಕು ಎಂದರು. ಅರಣ್ಯ ಅಧಿಕಾರಿ ಭೋಜಪ್ಪ ಮಾತನಾಡಿ ಗಿರಿಜನರು ಮಕ್ಕಳನ್ನು ಶಾಲೆಗೆ ಕಳುಹಿಸಿ ಜೊತೆಗೆ ಅರಣ್ಯ ಇಲಾಖೆಯ ಜೊತೆಗೆ ಕೈಗೂಡಿ ಅರಣ್ಯ ಉಳಿಸಲು ನಮ್ಮ ಜೊತೆಗೆ ನಿಮ್ಮ ಸಹಕಾರ ಸಹ ಇದೆ ಜೊತೆಗೆ ತುಂಬಾ ಮುಖ್ಯವಾಗಿ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು .
ಇದೇ ಸಂದರ್ಭದಲ್ಲಿ ಸರ್ಕಲ್ ಸೋಲಿಗ ಸಂಘದ ಅಧ್ಯಕ್ಷ ಗಿರಿಯ, ಕಾರ್ಯದರ್ಶಿ ಮಾದೇಶ, ತಾ. ಸೋಲಿಗ ಕಾರ್ಯದರ್ಶಿ ರಂಗೇಗೌಡ, ಸಂಯೋಜ- ಕ ಮಹದೇವಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.