Telangana Congress Election Manifesto Released

ಹೈದ್ರಾಬಾದ್ ನ ಗಾಂಧಿ ಭವನದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅದ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ತೆಲಂಗಾಣ 2023 ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ 6 ಭರವಸೆಗಳ ಪ್ರಣಾಳಿಕೆ ಬಿಡುಗಡೆಯ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಭಾಗವಹಿಸಿ ಪಕ್ಷದ ಭರವಸೆಯ ಪ್ರಣಾಳಿಕಾ ಪುಸ್ತಕವನ್ನು ಅನಾವರಣಗೊಳಿಸಿದರು.
ಕಾಂಗ್ರೆಸ್ “ಅಭಯಸ್ತಂ”
ಗ್ರಾರಂಟಿ 1: ಮಹಾಲಕ್ಷ್ಮೀ
ಪ್ರತಿ ತಿಂಗಳು ಮನೆಯೊಡತಿಗೆ 2,500 ರೂಪಾಯಿ. 500 ರೂ ಗ್ಯಾಸ್ ಸಿಲೆಂಡರ್. ಟಿಪಿಎಸ್ ಆರ್ ಟಿಸಿ ಬಸ್ ಉಚಿತ ಪ್ರಯಾಣ.
* ಗ್ಯಾರಂಟಿ 2: ರೈತ ಭರವಸೆ
ವರ್ಷಕ್ಕೆ ರೈತರ ಪ್ರತಿ ಎಕರೆಗೆ 15000, ಕೃಷಿ ಕಾರ್ಮಿಕರಿಗೆ 12000.
* ಗ್ಯಾರಂಟಿ 3: ಗೃಹಜ್ಯೋತಿ
ಬಡವರಿಗೆ 200 ಯೂನಿಟ್‍ವರೆಗೂ ಉಚಿತ ವಿದ್ಯುತ್ ಗ್ಯಾರಂಟಿ.
* ಗ್ಯಾರಂಟಿ 4: ಇಂದಿರಾ ವಸತಿ
ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ನೆರವು.
* ಗ್ಯಾರಂಟಿ 5: ಯುವ ವಿಕಾಸ
ವಿದ್ಯಾಭ್ಯಾಸಕ್ಕೆ 5 ಲಕ್ಷ ಕಾರ್ಡ್. ಮಂಡಲಕ್ಕೊಂಡು ಆಂಗ್ಲ ಶಾಲೆ.
* ಗ್ಯಾರಂಟಿ 6: ವೃದ್ದಾಪ್ಯ ವೇತನ
ಪಿಂಚಣಿ ಮೊತ್ತ 2,000 ರೂಪಾಯಿ ನಿಂದ 4,000 ರೂಪಾಯಿಗೆ ಹೆಚ್ಚಳ.
ಈ ಸಂದರ್ಭದಲ್ಲಿ ಟಿಪಿಸಿಸಿ ಅದ್ಯಕ್ಷರಾದ ವ ರೇವಂತರಡ್ಡಿ, ಮಾಜಿ ಸಂಸದರು, ಕಾಂಗ್ರೆಸ್ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ದೀಪಾದಾಸ್ ಮುನಿಷಿ, ಪ್ರಣಾಳಿಕಾ ಬಿಡುಗಡೆ ಸಮಿತಿ ಅದ್ಯಕ್ಷರಾದ ಶ್ರೀಧರ ಬಾಬು, ತಾರೀಫ್ ಅನ್ವರ್, ಅಂಜನ್ ಕುಮಾರ್ ಯಾದವ್, ಅನಿಲ್ ಕುಮಾರ್, ಸಲೀಂ ಅಹ್ಮದ್, ಮಾಜಿ ಸಚಿವ ಚಿನ್ನಾ ರಡ್ಡಿ ಸೇರಿದಂತೆ ನೇಕರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
