Petition demanding withdrawal of the order issued by reducing student stipend for the children of building and other construction workers.
ಗಂಗಾವತಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕ ಅಧಿಕಾರಿಗಳು, ಗ್ರೇಡ್ ತಹಶೀಲ್ದಾರ್ ಮೂಲಕ ಮಾನ್ಯ ಕಾರ್ಮಿಕ ಆಯುಕ್ತರು ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರ ಶರಣು ಗಡ್ಡಿ ಮಾತನಾಡುತ್ತ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಮಕ್ಕಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೈಕ್ಷಣಿಕ ಸಹಾಯ ಧನವನ್ನು ಕಳೆದ 2 ವರ್ಷಗಳಿಂದ ಅಂದರೆ 2021, ಮತ್ತು 2022-23ನೇ ಸಾಲಿನ ಶೈಕ್ಷಣಿಕ ವರ್ಷಗಳ ಸಹಾಯಧನವನ್ನು ನೀಡಿಲ್ಲ . ಮೇಲಾಗಿ ಇದೀಗ ಎಲ್ಲ ತರಗತಿಗಳ ಶೈಕ್ಷಣಿಕ ಧನಸಹಾಯವನ್ನು ಅತೀವ ಕಡಿಮೆ ಮಾಡಿರುವುದು ಅತ್ಯಂತ ವಿಷಾದನೀಯ ಈ ಕುರಿತು AIUTUC ಒಳಗೊಂಡಂತೆ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು 20 ಜುಲೈ 2023 ರಂದು ಮಾನ್ಯ ಸಚಿವರೊಂದಿಗೆ ಹಾಗೂ ದಿನಾಂಕ 21 ಆಗಸ್ಟ್ 2023 ರಂದು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಲಾಗಿತ್ತು . ಈ ಸಭೆಗಳಲ್ಲಿ ಕಾರ್ಮಿಕ ಸಂಘಟನೆಗಳ ನಾಯಕರು , 2 ವರ್ಷಗಳಿಂದ ಶೈಕ್ಷಣಿಕ ಸಹಾಯಧನ ಬಿಡುಗಡೆ ಆಗದಿರುವುದು ಒಳಗೊಂಡಂತೆ ಇನ್ನಿತರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿ ತಮ್ಮ ಅಹವಾಲುಗಳನ್ನು ಹೇಳಿದರು . ಮುಂದುವರೆದು ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಬೆಂಬಲ ಹಾಗೂ ಸಲಹೆಗಳನ್ನು ಸಹ ನೀಡಿದರು . ಆದರೆ ಇದು ಯಾವುದನ್ನು ಪರಿಗಣಿಸದೆ ಮಂಡಳಿಯು ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡು , ಎಲ್ಲಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ – ಶೈಕ್ಷಣಿಕ ಸಹಾಯಧನವನ್ನು ಕಡಿತಗೊಳಿಸಿ ಆದೇಶ ಹೊರಡಿಸಿರುವುದು ಖಂಡನೀಯ. ಆದರಿಂದ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು AIUTUC ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ( ರಿ ) ಗಂಗಾವತಿ ತಾಲೂಕು ಸಮಿತಿ ಸರ್ಕಾರವನ್ನು ಒತ್ತಾಯಿಸುತ್ತದೆ ಮತ್ತು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ತಾಲೂಕು ಮುಖಂಡರುಗಳಾದ ಸುರೇಶ್ ಉಪ್ಪಾರ್, ಹುಲುಗಪ್ಪ, ಪರಸಪ್ಪ ವಡ್ಡರ್, ಹನುಮಂತ ವಡ್ಡರ್, ಶ್ಯಾಮ ಸುಂದರ್,ಶರಣು ಪಾಟೀಲ್ ಮುಂತಾದವರು ಭಾಗವಹಿಸಿದ್ದರು.