A successful folk program in Gangavati city by Parasurama Master Mallapur Harmonium artists
ಗಂಗಾವತಿ: ಪರಿಸರ ಸೇವಾ ಟ್ರಸ್ಟ್ ಗಂಗಾವತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಸೋಮವಾರ ಗಂಗಾವತಿ ನಗರದ ಜಯನಗರದ ತಾಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸದರಿ ಕಾರ್ಯಕ್ರಮದಲ್ಲಿ ಖ್ಯಾತ ಹಾರ್ಮೋನಿಯಂ ಕಲಾವಿದರಾದ ಪರಶುರಾಮ ಮಾಸ್ತರ ಮಲ್ಲಾಪುರ ಇವರು ಜಾನಪದ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪಂಡಿತ್ ಪುಟ್ಟರಾಜ ಕವಿಗವಾಯಿಗಳ ಸಂಗೀತ ಸಂಸ್ಥೆಯ ಅಧ್ಯಕ್ಷರಾದ ರಾಜಾಸಾಬ್ ಮುದ್ದಾಬಳ್ಳಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಅನೇಕ ಸಂಘ ಸಂಸ್ಥೆಗಳು ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಕ್ಕೆ ಹರ್ಷವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು ಹಾಗೂ ಮುಖ್ಯವಾಗಿ ಹಾರ್ಮೋನಿಯಂ ಕಲಾವಿದರಾದ ಪರಶುರಾಮ ಮಾಸ್ತರರವರ ಜಾನಪದ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮಣ್ಣ ಮಾಸ್ತರ ಕಲಾವಿದರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಉಡುಮಕಲ್ ಗ್ರಾಮದ ಶ್ರೀ ವೇ.ಮೂ ಶಿವಲಿಂಗಯ್ಯಶಾಸ್ತಿçಗಳು, ಕಲ್ಯಾಣ ಕರ್ನಾಟಕ ಒಕ್ಕೂಟದ ಕೊಪ್ಪಳ ಘಟಕದ ಗೌರವಾಧ್ಯಕ್ಷರಾದ ಡಿ.ಎಸ್ ಪೂಜಾರ ಮ್ಯಾದನೇರಿ, ಕಲಾವಿದರಾದ ಶಿವಮ್ಮ ಹೇರೂರು ಹಾಗೂ ಗಂಗಾವತಿ ನಗರದ ೩ನೇ ವಾರ್ಡ್ ವಾಲ್ಮೀಕಿನಗರದ ಗುರು ಹಿರಿಯರು ಉಪಸ್ಥಿತರಿದ್ದರು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾಗಿ ರಿಜ್ವಾನ್ ಮುದ್ದಾಬಳ್ಳಿ, ಸುರೇಶ ಚಲುವಾದಿ, ರುದ್ರೇಶ ಹಡಪದರವರು ಭಾಗವಹಿಸಿದ್ದರು.