Health checkup camp for Narega laborers at lake dredging site



ಅರೋಗ್ಯ ಶಿಬಿರದ ಸದುಪಯೋಗ ಪಡೆಯಿರಿ ಚಿಕ್ಕಬೆಣಕಲ್ ಗ್ರಾಪಂ ಅಧ್ಯಕ್ಷರಾದ ಶಿವಮೂರ್ತಿ ಯಾದವ್ ಹೇಳಿಕೆ

ಗಂಗಾವತಿ : ತಾಲೂಕಿನ ಚಿಕ್ಕಬೆಣಕಲ್ ಗ್ರಾಪಂ ವ್ಯಾಪ್ತಿಯ ಕೂಲಿಕಾರರು ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ ಶಿಬಿರ ಬುಧವಾರ ನಡೆಸಲಾಯಿತು.
ಗ್ರಾಪಂ ಅಧ್ಯಕ್ಷರಾದ ಶಿವಮೂರ್ತಿ ಯಾದವ್ ಅವರು ಮಾತನಾಡಿ, ನಾವು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ಕುಟುಂಬ ಆರೋಗ್ಯವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಬಡ ಜನರಿಗೆ ಶಿಬಿರ ತುಂಬಾ ಅನುಕೂಲ ಆಗಲಿದೆ. ಯಾರೂ ಕೂಡ ಹಿಂಜರಿಯದೆ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿಗಳಾದ ಶ್ರೀದೇವಿ ಅವರು ಮಾತನಾಡಿ, ಪ್ರತಿ ತಿಂಗಳಿಗೊಮ್ಮೆ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯವೇ ಮಹಾಭಾಗ್ಯವಾಗಿದ್ದು, ಎಲ್ಲ ಕೂಲಿಕಾರರು ಶಿಬಿರದ ಸೌಲಭ್ಯ ಪಡೆಯಬೇಕು ಎಂದರು.
ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಅವರು,’ ನರೇಗಾ ಯೋಜನೆಯಡಿ ಕೂಲಿಕಾರರಿಗೆ ದೊರೆಯುವ ಸೌಲಭ್ಯಗಳು, ಉಪಯೋಗಗಳ ಕುರಿತು ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷರಾದ ಗುರಮ್ಮ ನಿಂಗಪ್ಪ ಭೋವಿ, ಗ್ರಾಪಂ ಕಾರ್ಯದರ್ಶಿಗಳಾದ ಭೀಮಣ್ಣ, ಮುಖಂಡರಾದ ಮಹೆಬೂಬ್, ಕೆಎಚ್ ಪಿಟಿ ಗ್ರಾಮ ಆರೋಗ್ಯ ತಾಲೂಕು ಸಂಯೋಜಕರಾದ ಶರಣಬಸವ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಶ್ರೀದೇವಿ, ಮಲೇರಿಯಾ ನಿರೀಕ್ಷಣಾ ಅಧಿಕಾರಿಗಳಾದ ವೆಂಕಟೇಶ, ಬಿಎಫ್ ಟಿ ನಿಂಗಪ್ಪ, ಗ್ರಾಮಕಾಯಕ ಮಿತ್ರರಾದ ಹನುಮಂತಿ, ಗ್ರಾಪಂ ಸಿಬ್ಬಂದಿಗಳು, ಕಾಯಕ ಬಂಧುಗಳು ಇದ್ದರು.