Among Madappa’s devotees was Saraswati, the secretary of the authority.

ವರದಿ: ಬಂಗಾರಪ್ಪ ಸಿ ಹನೂರು.
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ
ಭಕ್ತರ ಜೊತೆಯಲ್ಲಿಯೇ ಮಾದಪ್ಪನ ಭಕ್ತರಾಗಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿರವರು ಮಾದಪ್ಪನ ಪ್ರಸಾದ ಸೇವಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರು
ಪರ ಮಾಡುವ ಸ್ಥಳ ಪರಿಶೀಲನೆಗೆ
ಪ್ರಾಧಿಕಾರದ ಕಾರ್ಯದರ್ಶಿಗಳು ತೆರಳಿದ್ದ
ವೇಳೆ, ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನಿವಾಸಿಗಳು ನೀವು ನಮ್ಮ ಜೊತೆಯಲ್ಲಿ ಊಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ
ಕಾರ್ಯದರ್ಶಿಗಳು ಇಲ್ಲ ನೀವು ನಿಮ್ಮ ಪೂಜೆ ನೆರವೇರಿಸಿ ಎಂದು ತಿಳಿಸಿದ್ದಾರೆ. ಆದರೆ ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಮ್ಮ ನೀವು ಬಡವರ ಜೊತೆ ಊಟ ಮಾಡುವುದಿಲ್ಲ ಬಿಡಿ ಎಂದು ತಿಳಿಸಿದ್ದಾರೆ. ಇಲ್ಲ ಬಡವರುಶ್ರೀಮಂತರ ಎಂಬ ಭೇದ ಭಾವ ಇಲ್ಲ ನಿಮ್ಮ ಜೊತೆ ನಾನು ಬಂದು ಪ್ರಸಾದ ಸ್ವೀಕರಿಸುತ್ತೇನೆ ಎಂದು ಸಂಜೆ 5:00 ಸಮಯದಲ್ಲಿ ಪರ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದವಾಗಿ ಮಾಡಲಾಗಿದ್ದ ಕಜ್ಜಾಯಪಾಯಸಅನ್ನಸಾಂಬಾರ್ ಹುಳಿ ಸಂಡಿಗೆ ಪ್ರಸಾದ ಸ್ವೀಕರಿಸಿ ದೇವಾಲಯದ ಅಭಿವೃದ್ಧಿ ಕಾರ್ಯದರ್ಶಿ ಭಕ್ತರ ಮನಗೆದ್ದಿದ್ದಾರೆ.