Breaking News

ವಿಶ್ವ ಬ್ಯಾಂಕಿನ ಸಾಲದ ನೆರವಿನಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಸರ್ಕಾರದ ನಿರ್ಧಾರ ಕುರಿತು ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಹೇಳಿಕೆ

AIDSO District Convener Gangaraja Allalli’s statement on the government’s decision to upgrade government engineering colleges with the help of World Bank loans

ಜಾಹೀರಾತು

ಕೊಪ್ಪಳ: ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ವಿಶ್ವ ಬ್ಯಾಂಕಿನ ಸಾಲದ ಹೊರೆ ಹೇರಬೇಡಿ, ಜನರ ತೆರಿಗೆ ಹಣದಿಂದ ಈ ಸಂಸ್ಥೆಗಳನ್ನು ನಡೆಸಿ ಎಂದು ಎಐಡಿಎಸ್ಓ ಜಿಲ್ಲಾಸಂಚಾಲಕ . ಗಂಗರಾಜ ಅಳ್ಳಳ್ಳಿ,ಹೇಳಿದರು.

ರಾಜ್ಯದ ಬಜೆಟ್ ನಿಂದ ಅನುದಾನ ನಿಗದಿಪಡಿಸಿ

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಅನುದಾನದ ಕೊರತೆಯಿಂದ ಪರಿತಪಿಸುತ್ತಿವೆ. ಪ್ರತಿಷ್ಠಿತ ಯುವಿಸಿಇ ಸೇರಿದಂತೆ ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಅವಶ್ಯಕತೆಗಿಂತ ಕಡಿಮೆ ಸಿಬ್ಬಂದಿಗಳ ಮೇಲೆ ನಡೆಸಲಾಗುತ್ತಿದೆ. ಹೊಸ ನೇಮಕಾತಿಗಳಾಗಿ ಒಂದು ದಶಕವೇ ಕಳೆದಿದೆ. ಕಾಲೇಜು ನಿರ್ವಹಣೆಗಾಗಿ ಅನುದಾನ ಬಿಡುಗಡೆಗೊಳಿಸುವಂತೆ ಯುವಿಸಿಇ ಆಡಳಿತ ಮಂಡಳಿಯು ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಈ ಕಾಲೇಜುಗಳಲ್ಲಿನ ಹಣಕಾಸಿನ ಶೋಚನೀಯ ಅವಸ್ಥೆಯು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸದೆ, ಕಾಲೇಜುಗಳನ್ನು ಉನ್ನತ ದರ್ಜೆಗೇರಿಸುವ ಸರ್ಕಾರದ ಘೋಷಣೆಯು ಕೇವಲ ಪ್ರಹಸನವಾಗುತ್ತದೆ. ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಹೆಚ್ಚಿನ ಅನುದಾನ ನಿಗದಿ ಪಡಿಸಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ. ರಾಜ್ಯ ಸರ್ಕಾರವು ಕೇವಲ ಕೆಲವೇ ಕಾಲೇಜುಗಳನ್ನು ಆಯ್ಕೆ ಮಾಡುವ ಬದಲು ಎಲ್ಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತ ದರ್ಜೆಗೇರಿಸಿ ಅಭಿವೃದ್ಧಿ ಪಡಿಸಬೇಕು ಮತ್ತು ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಬೇಕು.

ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೇಲೆ ಸಾಲದ ಹೊರೆಯನ್ನು ಹೊರಿಸಬಾರದು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣವನ್ನು ಪಡೆಯಲು ಸರ್ಕಾರಿ ಶಿಕ್ಷಣ ಸಂಸ್ಥೆಗಳೇ ಆಸರೆಯಾಗಿವೆ. ಕೆಲವು ಷರತ್ತುಗಳೊಂದಿಗೆ ಬರುವ ವಿಶ್ವ ಬ್ಯಾಂಕಿನ ಸಾಲವು ಶಿಕ್ಷಣದ ಪ್ರಜಾತಾಂತ್ರಿಕ ಮತ್ತು ಸ್ವಾಯತ್ತ ಸಂರಚನೆಗೆ ಧಕ್ಕೆಯುಂಟು ಮಾಡಬಹುದು. ಭವಿಷ್ಯದಲ್ಲಿ ಈ ಸಾಲವನ್ನು ತೀರಿಸುವ ಒತ್ತಾಯಕ್ಕೆ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ತಳ್ಳಲಾಗುತ್ತದೆ. ಇದು ವಿಶ್ವ ಬ್ಯಾಂಕಿನ ಸಾಮ್ರಾಜ್ಯಶಾಹಿ ಷಡ್ಯಂತ್ರದ ಒಂದು ಅಜೆಂಡಾ ಆಗಿದೆ.

ಹೀಗಾಗಿ, ವಿಶ್ವ ಬ್ಯಾಂಕಿನ ಸಾಲವನ್ನು ಕೈ ಬಿಟ್ಟು ರಾಜ್ಯ ಬಜೆಟ್ ನಿಂದ ಹೆಚ್ಚಿನ ಅನುದಾನವನ್ನು ಸರ್ಕಾರಿ ಕಾಲೇಜುಗಳಿಗೆ ವಿನಿಯೋಗಿಸಬೇಕೆಂದು ಎಐಡಿಎಸ್ಓ ಸರ್ಕಾರವನ್ನು ಆಗ್ರಹಿಸುತ್ತದೆ.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.