The legislators of the two states convinced the farmers to solve the problems of the border villages.
ವರದಿ : ಬಂಗಾರಪ್ಪ ಸಿ ಹನೂರು .
ಹನೂರು :- ಗಡಿಯಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಅನುಕೂಲ ಕಲ್ಪಿಸಲು,ಹಾಗೂ ಗ್ರಾಮಗಳ ಜನರಿಗೆ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಲು ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಆರ್.ಮಂಜುನಾಥ್ ಹಾಗೂ ತಮಿಳುನಾಡಿನ ಹಂದಿಯೂರು ಶಾಸಕರಾದ ಎ.ಜೆ.ವೆಂಕಟಾಚಲಂ ಇಬ್ಬರು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು .
ಹನೂರು
ತಾಲ್ಲೂಕಿನ ನಾಲ್ ರೋಡ್ ಸಮೀಪದ ಕ್ಷೇತ್ರದ ಗಡಿಭಾಗವಾದ ಹೂಗ್ಯಂ ಪಂಚಾಯ್ತಿಗೆ ಒಳಪಡುವ ಜಲ್ಪಿಪಾಳ್ಯಂ ಗ್ರಾಮದಲ್ಲಿ ಎರಡು ರಾಜ್ಯಗಳ ಅರಣ್ಯಾ ಇಲಾಖೆಯ ಅಧಿಕಾರಿಗಳಾದ ಡಿಎಫ್ಓ ಮತ್ತು ಆರ್ ಎಫ್ಓ ಸೇರಿದಂತೆ ಅಧಿಕಾರಿಗಳ ತಂಡದ ಸಮನ್ವಯ ಸಭೆಯಲ್ಲಿ ತಮಿಳುನಾಡಿಗೆ ಸೇರಿದ ಗುಡ್ಡೆಯೂರು ಗ್ರಾಮದಲ್ಲಿ ಜಂಟಿಯಾಗಿ ಸವೆ೯ನಡೆಸಿ ಸಮಸ್ಯೆಗಳ ಕಾಯ೯ಚರಣೆಗೆ ತೀಮಾ೯ನಿಸಲಾಯಿತ್ತು.
ತಮಿಳು ನಾಡಿಗೆ ಸೇರಿದ ಗುಡ್ಡೆಯೂರು ಮಡಿತರೈ ಮಾಕನಪಾಳ್ಯ ಸೇರಿದಂತೆ ಏಳು ಗ್ರಾಮಗಳು ರಾಜ್ಯದ ಜಲ್ಲಿಪಾಳ್ಯ ಹೂಗ್ಯಂ ಮತ್ತು ತಮಿಳುನಾಡಿನ ಮುಖ್ಯರಸ್ತೆಗೆ ಹತ್ತಿರವಾಗಿದೆ. ಇಲ್ಲಿನ ಗ್ರಾಮಗಳಿಗೆ ಸಮಪ೯ಕ ರಸ್ತೆಯಿಲ್ಲ, ಮೂಲಭೂತ ಸೌಲಭ್ಯಗಳಂತೂ ಇಲ್ಲದೆ ಮರಿಚಿಕೆಯಾಗಿದೆ. ಯಾವುದೇ ದಾಖಲೆ ಮಾಡಿಸಲು ನೂರಾರು ಕಿ.ಮೀ. ದೂರು ಅರಣ್ಯದಲ್ಲೆ ಸಾಗಬೇಕು.
ನೂರಾರು ವಷ೯ಗಳಿಂದ ವಾಸಿಸುವ ಇವರ ಪೂವಿ೯ಕರ ಯಾರು ಬದುಕಿಲ್ಲ. ಈಗೀನ ಯುವಕರಿಗೆ ವಿಧ್ಯಾಭ್ಯಾಸ ಇಲ್ಲ , ಮುಗ್ದತೆಯಿಂದ ಕೂಡಿದ ಜನರು ವ್ಯವಸಾಯವೆ ಮುಖ್ಯ ಕಸುಬಾಗಿದೆ. ಎರಡು ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು ಮನಸ್ಸು ಮಾಡಿದ್ದರೆ ಎಂದೋ ಸುಂದರ ಬದುಕು ಕಟ್ಟಿ ಕೊಡಬಹುದಿತ್ತು. ಒಂದು ಸೇತುವೆ ಮಾಡಿ ಕೇವಲ 3 ಕಿ.ಮಿ. ರಸ್ತೆಗೆ ಅನುಮತಿ ನೀಡಿದರೆ ತಮಿಳುನಾಡಿಗೆ 2.5 ಕಿ.ಮೀ. ಹತ್ತಿರದ ಮುಖ್ಯರಸ್ತೆ ತಲುಪಬಹುದು. ಹಾಗೆಯೆ ಕನಾ೯ಟಕ ಹನೂರು ಕ್ಷೇತ್ರದ ಹೂಗ್ಯಂ ಪಂಚಾಯ್ತಿಗೆ ಹತ್ತಿರ ಆಗುತ್ತದೆ. ಜನರ ಅನುಕೂಲಕ್ಕಾಗಿ ಈ ಒಂದು ಕೆಲಸಕ್ಕೆ ಇಬ್ಬರ ಶಾಸಕರದ್ವಯರು ಕೈಗೊಂಡಿರುವ ಕೆಲಸ ಒಂದು ಇತಿಹಾಸ ನಿಮಾ೯ಣ ಮಾಡಿದಂತೆ ಆಗುತ್ತದೆ ಎಂದು ಶಾಸಕರಾದ ಮಂಜುನಾಥ್ ತಿಳಿಸಿದರು .
ಕಾಡೆ ಇವರಿಗೆ ಜಗತ್ತು : ಅರಣ್ಯದ ಮಧ್ಯ ವಾಸಿಸುವ ಈ ಜನರ ಗೋಳು ಹೇಳತೀರಾದು. ಹುಷಾರು ತಪ್ಪಿದರೆ ಸೂಕ್ತ ಚಿಕಿತ್ಸೆ ಇಲ್ಲ. ಹೋದರೆ ಹೂಗ್ಯಂ ಪಂಚಾಯ್ತಿ ಕೂಡ್ಲೂರಿಗೆ ಬರಬೇಕು. ಇಲ್ಲ ತಮಿಳುನಾಡಿ ಹೋಗಬೇಕು. ಈ ನಡುವೆ ಯಾವಾಗಲೂ ಹರಿಯುತ್ತಿರುವ ಹಳ್ಳ. ಪಡಿತರ ಇಲ್ಲ ಮತದಾರರ ಚೀಟಿ ಇಲ್ಲ ಸಕಾ೯ರಿ ಸೌಲಭ್ಯ ಪಡೆಯಲು ಅವಶ್ಯಕ ದಾಖಲೆ ಇಲ್ಲ. ಸಕಾ೯ರಿ ಅಧಿಕಾರಿಗಳು ಈ ಕಡೆ ಬರುವುದಿಲ್ಲ. ಕಾಡಿನ ನಡುವೆ ಇರುವ ನಾವು ಕಾಡು ಪ್ರಾಣಿಗಳಂತೆ ಬದುಕುತಿದ್ದೇವೆ. ಎಂದು ಆಳಲು ತೋಡಿ ಕೊಂಡಿದ್ದಾರೆ.
ಮತ್ತೊಬ್ಬ ಮಹಿಳೆ ಮಾತನಾಡಿ ನನ್ನ ಪತಿಗೆ ಕಳೆದೊಂದು ವಾರದ ಹಿಂದೆ ಹೃದಯ ಘಾತ ಆಯಿತ್ತು. ಹಾಸ್ಪತ್ರೆಗೆ ಹೋಗಲು ಹಳ್ಳದಲ್ಲಿ ಹೆಚ್ಚು ನೀರು ತುಂಬಿ ಹರಿಯುತ್ತಿತ್ತು. ಹಳ್ಳ ದಾಟಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ನನ್ನ ಪತಿಯ ಪ್ರಾಣ ಪಕ್ಷಿ ಹಾರಿ ಹೋಯ್ತು ಎಂದು ದುಕ್ಕಿಸಿದ ಸಂಗತಿ ನಡೆಯಿತ್ತು. ಇದಲ್ಲದೆ ಇನ್ನೂ ಹತ್ತಾರು ಸಮಸ್ಯೆ ತೊಂದರೆಗಳ ಸರಮಾಲೆಯನ್ನು ಅಲ್ಲಿನ ಜನರು ಬಿಚ್ಚಿಟ್ಟು ಕಣ್ಣೀರು ಹಾಕಿದರು.
ಎರಡು ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಇಬ್ಬರು ಶಾಸಕರ ಸಭೆ ನಡೆಸಿ ಚೆಚಿ೯ಸಿ ಜಂಟಿ ಸವೆ೯ಗೆ ಒಪ್ಪಿಸಿದ್ದಾರೆ. ಬಳಿಕ ಅವರದೆ ನಾಡಿನ ಭಾಷೆಗಳಲ್ಲಿ ಶಾಸಕರದ್ವಯರು ಮಾತನಾಡಿ ಜನರು ಅನುಕೂಲಕ್ಕಾಗಿ ನಮ್ಮ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇಂದು ನಾವು ಅಧಿಕಾರದಲ್ಲಿದ್ದೇವೆ. ಮುಂದೆ ಇಲ್ಲದಿರಬಹುದು. ಆದರೆ ನಾವು ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿರಬೇಕು. ರಸ್ತೆ ಮಾಡುವುದರಿಂದ ಎರಡು ರಾಜ್ಯದ ಜನರಿಗೆ ಅನುಕೂಲ ಆಗುತ್ತದೆ. ಸಕಾ೯ರದ ಸೌಲಭ್ಯ ತಲುಪಿಸಬಹುದು. ಇದರಿಂದ ಎರಡು ರಾಜ್ಯದ ಜನರಿಗೂ ಅನುಕೂಲವಾಗಲಿದೆ. ಎಂದು ತಮಿಳುನಾಡು ಶಾಸಕರು ತಿಳಿಸಿದರು .
ಇದೇ ಸಮಯದಲ್ಲಿ ಡಿಎಫ್ಓ ಗಳಾದ ಸಂತೋಷ್ . ಸುಧಾಕರನ್. ಪ್ರಕಾಶ್. ಸೆಂಧಿಲ್ ಕುಮಾರ್. ಚೆಸ್ಕ್ಂ ಎಇಇ ಶಂಕರ್. ಲೋಕೋಪಯೋಗಿ ಇಲಾಖೆ ಚಿನ್ನಣ್ಣ. ಮಹೇಶ್. ತಾ.ಪಂ. ಎಡಿ ರವೀಂದ್ರ. ಹಾಗೂ ಎರಡು ರಾಜ್ಯಗಳ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮುಖಂಡರು ಇನ್ನಿತರರು ಹಾಜರಿದ್ದರು.