Sculptor of Gangavati in Ayodhya Ram Mandir temple carving Tranquil sonar
ಗಂಗಾವತಿ: ಅಯೋಧ್ಯೆ ರಾಮಮಂದಿರವು ಮುಂದಿನ ಜನೇವರಿ-೨೦೨೪ ರಲ್ಲಿ ಉದ್ಘಾಟನೆಗೊಳ್ಳಲಿದ್ದು, ದೇವಸ್ಥಾನದ ನಿರ್ಮಾಣ ಹಾಗೂ ಕಂಬಗಳ ಕಸೂತಿ ಕಲೆ ಭರದಿಂದ ಸಾಗುತ್ತಿದೆ. ಅದರ ಪ್ರಯುಕ್ತ ನಮ್ಮ ಗಂಗಾವತಿಯ ಸ್ಥಳೀಯ ಶಿಲ್ಪ ಕಲಾವಿದ ಪ್ರಶಾಂತ ಸೋನರ್ ಅವರು ಅಯೋಧ್ಯೆ ರಾಮಮಂದಿರ ದೇವಸ್ಥಾನದ ನಿರ್ಮಾಣದಲ್ಲಿ ಶಿಲ್ಪಿಕಲಾವಿದರಾಗಿ ಆಯ್ಕೆಯಾಗುವ ಮೂಲಕ ಅಯೋಧ್ಯೆಗೆ ತೆರಳಿರುವುದು ಗಂಗಾವತಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಉಪನ್ಯಾಸಕರಾದ ಪವನಕುಮಾರ ಗುಂಡೂರು ಹರ್ಷ ವ್ಯಕ್ತಪಡಿಸಿದರು.
ಶಿಲ್ಪಿ ಪ್ರಶಾಂತ ಸೋನಾರ್ ಅವರು ಬಾಲ್ಯದಿಂದಲೇ ಶಿಲ್ಪ ಕೆತ್ತನೆಯಲ್ಲಿ ಆಸಕ್ತಿ ಹೊಂದಿ, ತಮ್ಮ ಎಸ್.ಎಸ್.ಎಲ್.ಸಿ ಶಿಕ್ಷಣದ ನಂತರ ಚನ್ನಪಟ್ಟಣದ ಗಂಗರಸ ಶಿಲ್ಪಕಲಾ ಕೇಂದ್ರದಲ್ಲಿ ಬಿ.ಎಫ್.ಎ ಪದವಿ ಪಡೆಯುವ ಮೂಲಕ ಶಿಲ್ಪಕೆತ್ತನೆ ಕ್ಷೇತ್ರದಲ್ಲಿ ಪ್ರಾವಿಣ್ಯತೆಯನ್ನು ಪಡೆದವರಾಗಿರುತ್ತಾರೆ. ಅವರು ತಮ್ಮ ಕಲೆಯ ಮೂಲಕ ನಮ್ಮ ಕರ್ನಾಟಕ ರಾಜ್ಯದಿಂದ ರಾಮಮಂದಿರದ ಕೆತ್ತನೆಯಲ್ಲಿ ಪಾಲ್ಗೊಂಡಿರುವುದು ಸಂತಸದಾಯಕ ವಿಷಯವಾಗಿದೆ.
ಆದರೆ ಪ್ರಶಾಂತ್ ಸೋನಾರ್ ಅವರು ಒಬ್ಬ ಬಡಕಲಾವಿದರಾಗಿದ್ದು, ತಮ್ಮ ಕಲೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರದರ್ಶಿಸಲು ಸ್ಥಳಾವಕಾಶದ ಹಾಗೂ ಆಧುನಿಕ ಸಲಕರಣೆಗಳ ಕೊರತೆ ಇರುತ್ತದೆ. ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡಿ ಬೆಳೆಸುವುದು ಗಂಗಾವತಿಯ ನಾಗರಿಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.