Breaking News

ಹನೂರು ಪಟ್ಟಣದಲ್ಲಿ ಕನ್ನಡರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಸಂತೋಷದ ವಿಷಯ ,ಶಾಸಕ ಎಮ್ ಆರ್ ಮಂಜುನಾಥ್

The celebration of Kannada Rajyotsava in the town of Hanur is a matter of joy, statesman M R Manjunath.

ಜಾಹೀರಾತು


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಎಲ್ಲೇಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಹಾಗೆಯೆ ನಮ್ಮ ತಾಲ್ಲೂಕಿನಲ್ಲಿಯು ಸಹ ಬಹಳ
ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೆವೆ ,ನಾವು ಅನ್ಯ ಭಾಷೆ ಜನರಿಗೆ ಕನ್ನಡವನ್ನು ಕಲಿಸಿ, ಕನ್ನಡವನ್ನು ಉಳಿಸಿ . ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹನೂರು ಶಾಸಕ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಬಾಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ನಮ್ಮ ಮುಂದಿನ ಪೀಳಿಗೆಗೆ ಕನ್ನಡತನವನ್ನು ಉಳಿಸಿ ಹೋಗೋಣ ನಾವು ಕನ್ನಡಿಗರಾಗಿ ಕನ್ನಡವನ್ನು ಬೆಳೆಸುವ ಕೆಲಸಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದರು. ಇದೇ ಸಮಯದಲ್ಲಿ
ಮಕ್ಕಳ ನೃತ್ಯಕ್ಕೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದರು .
ಕಾರ್ಯಕ್ರಮದಲ್ಲಿ
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 125 ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದ 5 ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ನನ್ಮಾನಿಸಿ ಗೌರವಿಸಲಾಯಿತು.
ಟಿಬೆಟಿಯನ್ ಮಹಿಳೆಯೊಬ್ಬರು ಜನಪ್ರಿಯ ಕನ್ನಡ ಗೀತೆಯನ್ನು ಹಾಡುವ ಮೂಲಕ ಸಭಿಕರನ್ನು ಮನರಂಜಿಸಿದರು.
ಆರ್.ಎಂ.ಸಿ. ಆವರಣದಲ್ಲಿ ವಿವಿಧ ಕಲಾ ತಂಡಗಳ ಸಮಾಗಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಉತ್ತಮ ಕಲಾ ಪ್ರದರ್ಶನ ನೀಡಿದವು.

ಹನೂರು ಪಟ್ಟಣದಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಸಂಭ್ರಮ ಮೆರುಗು ತಂದು ಕೊಟ್ಟ ಟಿಬೇಟಿಯನ್ನರ ತಂಡ

ಇನ್ನು ವೇದಿಕೆ ಕುರಿತು ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಯುವ ಸಾಹಿತಿ ಪೊನ್ನಚಿ ಸ್ವಾಮಿ ರವರು ಕನ್ನಡ ಭಾಷೆಗೆ ಕನ್ನಡಿಗರು ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕನ್ನಡ ಉಳಿಸಿ ಬೆಳೆಸಬೇಕು ಒಂದು ದಿನ ಆಚರಣೆ ಮಾಡಿ ಬಿಡುವುದಲ್ಲ ಕನ್ನಡಕ್ಕೆ ಕೊಡುವ ಗೌರವ.ತಮಿಳು ಇಂಗ್ಲಿಷ್ ವಿವಿಧ ಭಾಷೆ ಮಾತಾಡುವವ ಜನರೇ ಅತ್ಯಂತ ಜನಪ್ರಿಯ ಭಾಷೆ ಕನ್ನಡ ಅಂತ ಒಪ್ಪಿಕೊಂಡಿದ್ದಾರೆ. ಎಂಟು ಜ್ನ್ಯಾನ ಪೀಠ ಪ್ರಶಸ್ತಿ ಪಡೆದುಕೊಂಡಿರುವ ಭಾಷೆ ನಮ್ಮ ಕನ್ನಡ ಭಾಷೆ ಕರ್ನಾಟಕ ರಾಜ್ಯವನ್ನು ಡೆಚ್ಚರು. ಪ್ರೆಂಚರು. ಟಿಪ್ಪು ಸುಲ್ತಾನ್ ಇನ್ನು ಹಲವಾರು ಬೇರೆ ಭಾಷೆಯ ಜನರು ದಾಳಿ ಮಾಡಿ ಹಲವಾರು ವರ್ಷಗಳು ಆಳ್ವಿಕೆ ಮಾಡಿದರು ರಾಜ್ಯದಲ್ಲಿ ಕನ್ನಡವೇ ಶ್ರೇಷ್ಠ ಭಾಷೆಯಾಗಿ ಉಳಿದಿದೆ ಆಗಾಗಿ ಕನ್ನಡಿಗರಾಗಿ ಹೆಮ್ಮೆ ಪಡಬೇಕು ಭಾರತೀಯ ಭಾಷೆಗಳಲ್ಲಿ ಮಾತಾಡುವದನ್ನು ಬರೆಯಲು ಬರೆದದನ್ನು ಮಾತನಾಡಲು ಬರುವ ಹಾಗೆ ಇರುವ ಏಕೈಕ ಭಾಷೆ ಕನ್ನಡ ತುಂಬಾ ಚಂದದ ಭಾಷೆ ಕನ್ನಡ. ಹಿಂದಿ ಭಾಷೆ ಶ್ರೇಷ್ಠ ಅಂತ ಹೇಳ್ತಾರೆ ಕೆಲವರು ಆದರೆ ಕನ್ನಡ ಭಾಷೆ ಶೂಟ್ ಬೂಟು ಅಕೊಂಡು ಮಿಂಚುತ್ತಿದ್ದ ವೇಳೆಯಲ್ಲಿ ಬೇರೆ ಭಾಷೆಗಳು ಚಡ್ಡಿ ಅಕೋದು ಗೊತ್ತಿರಲಿಲ್ಲ. ಕನ್ನಡ ಭಾಷೆಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆಯುತ್ತಾರೆ ಅಂತಹ ಪ್ರಸಿದ್ದಿ ಇರುವ ಭಾಷೆ ನಮ್ಮ ಕನ್ನಡ. ಎಂದು ಸವಿವರವಾಗಿ ಕನ್ನಡ ಭಾಷೆಯ ಬಗ್ಗೆ ವಿವರಿಸಿದರು.ಇನ್ನು ಈ ವೇಳೆಯಲ್ಲಿ ಮಾತನಾಡಿದ ಶಾಸಕ ಮಂಜುನಾಥ್ ರವರು. ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕಾರ ನೀಡಿದ ಕ್ಷೆತ್ರದ ಪ್ರತಿಯೊಬ್ಬರಿಗೂ ಶುಭಾಶಯ ಕೋರುತ್ತಾ ಗಡಿ ಜಿಲ್ಲೆ ಗಡಿ ತಾಲೂಕಿನಲ್ಲಿ ಕನ್ನಡವನ್ನು ಎಲ್ಲ ರೀತಿಯಲ್ಲಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅದು ಮುಂದಿನ ದಿನಗಳಲ್ಲೂ ಕೂಡ ಮುಂದುವರೆಯುತ್ತದೆ ಎಂದರು. ಇದೇ ಸಮಯದಲ್ಲಿ ತಹಸೀಲ್ದಾರ್ ವೈ ಕೆ ಗುರುಪ್ರಸಾದ್. ಬಿಗ್ ಬಾಸ್ ಕ್ಯಾತಿಯ ಪ್ರಥಮ್. ಇ ಓ ಆರ್ ಉಮೇಶ್. ಕ್ಷೆತ್ರ ಶಿಕ್ಷಣಧಿಕಾರಿ ಶಿವರಾಜು ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಮೂರ್ತಿ ಸಿಡಿಪಿಒ ನಂಜಮಣಿ. ಮತ್ತು ಪಟ್ಟಣ ಪಂಚಾಯತ್ ಸದಸ್ಯರುಗಳು ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.