Central Vigilance Commission organizes Vigilance Week across the country from October 30 to November 5
ಗಂಗಾವತಿ,ಕೇಂದ್ರ ಜಾಗೃತ ಆಯೋಗದ ಸೂಚನೆಯಂತೆ ಪ್ರತಿ ವರ್ಷ ಅಕ್ಟೋಬರ್ ನವೆಂಬರಲ್ಲಿ ಜಾಗೃತಿ ಸಪ್ತಾಹ ಆಚರಣೆ ಮಾಡಲಾಗುತ್ತದೆ. ಆದರೆ ಅಂಗವಾಗಿ ಇಂದು ಭಾರತೀಯ ಸ್ಟೇಟ್ ಬ್ಯಾಂಕ್ ಗಂಗಾವತಿ ಮುಖ್ಯ ಶಾಖೆ ಆವರಣದಲ್ಲಿ ಗ್ರಾಹಕರಿಗೆ ಮತ್ತು ಬ್ಯಾಂಕ್ ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು
ಈ ಕಾರ್ಯಕ್ರಮದಲ್ಲಿ ಮುಖ್ಯ ಶಾಖೆಯ ವ್ಯವಸ್ಥಾಪಕರಾದ ಬ್ರಹ್ಮದೇವ ಸಿಂಗ್ ರವರು ಶಾಖೆಯಲ್ಲಿ ಉಪಸ್ಥಿತರಿದ್ದ ಗ್ರಾಹಕರಿಗೆ ಮತ್ತು ಬ್ಯಾಂಕ್ ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮತ್ತು ಪ್ರತಿಯೊಬ್ಬರು ನಮ್ಮ ದೇಶ ಭ್ರಷ್ಟಾಚಾರ ಮುಕ್ತ ಭಾರತ ವಾಗಲು ಶ್ರಮಿಸಲು ವಿನಂತಿಸಿದರು
ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರದ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯ ರವರು ಭ್ರಷ್ಟಾಚಾರ ಮುಕ್ತ ಭಾರತ ವಾಗಲು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ. ಭ್ರಷ್ಟಾಚಾರವು ನಮ್ಮ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಅಲ್ಲದೆ ಪ್ರಮುಖ ಸಮಸ್ಯೆಯಾಗಿದೆ.
ಮತ್ತು ಸಮಾಜದಲ್ಲಿ ಅಸಮಾನತೆ ಮತ್ತು ಅನ್ಯಾಯವನ್ನು ಸೃಷ್ಟಿಸುತ್ತದೆ.
ಇದನ್ನು ಮುಕ್ತಗೊಳಿಸಲು ನಮಗೆ ಬಲವಾದ ಕಾನೂನುಗಳು, ಪಾರದರ್ಶಕ ಆಡಳಿತ, ಮತ್ತು ವಿದ್ಯಾವಂತ ನಾಗರಿಕರ ಅಗತ್ಯವಿದೆ. ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿ ವಹಿಸಿಕೊಂಡಾಗ ಭ್ರಷ್ಟಾಚಾರ ಮುಕ್ತ ಭಾರತ ಸಾಧ್ಯ. ಇದು ಸಮೃದ್ಧ ಮತ್ತು ನ್ಯಾಯಯುತ ಸಮಾಜಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು
2022ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಾಂಕದಲ್ಲಿ ಭಾರತವು 40 ಅಂಕಗಳನ್ನು ಗಳಿಸಿತು. 180 ದೇಶಗಳ ಪೈಕಿ ಭಾರತ 86ನೇ ಸ್ಥಾನದಲ್ಲಿದೆ
ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳ ಮೂಲಕ ಸಮಗ್ರತೆ ಪ್ರಾಮಾಣಿಕತೆ ಮತ್ತು ನೈತಿಕತೆ ನಡವಳಕೆಯ ಸಂಸ್ಕೃತಿಯನ್ನು ಉತ್ತೇಜಿಸುವುದನ್ನು ಒಳಗೊಂಡಿರುತ್ತದೆ
ನಾವೆಲ್ಲರೂ ಭ್ರಷ್ಟಾಚಾರ ಮುಕ್ತ ಭಾರತ ವಾಗಲು ಸತ್ಪ್ರಜೆಯಾಗೋಣ ಎಂದು ವಿನಂತಿಸಿದರು
ಕಾರ್ಯಕ್ರಮದಲ್ಲಿ 50ಕ್ಕು ಹೆಚ್ಚು ಗ್ರಾಹಕರು, ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು