State Drug Dealers’ Association: Ashokaswamy Heroor elected as President of Legal Unit.
ಬೆಂಗಳೂರು: ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ,ಸದ್ರಿ ಸಂಘದ ಕಾನೂನು ಘಟಕದ ಅಧ್ಯಕ್ಷರಾಗಿ ರಾಜ್ಯ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಬೆಂಗಳೂರು ನಗರದ ರಾಜಾಜಿನಗರದ ಕಚೇರಿಯಲ್ಲಿ ಈ ಘೋಷಣೆಯನ್ನು ಮಾಡಲಾಯಿತು. ಔಷಧ ವ್ಯಾಪಾರಿಗಳ ಮತ್ತು ಔಷಧ ತಜ್ಞರ ಸಮಸ್ಯೆ ಮತ್ತು ಅನುಮಾನಗಳನ್ನು ಪರಿಹರಿಸುವುದು ಕಾನೂನು ಘಟಕದ ಕೆಲಸವಾಗಿದ್ದು , ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ದೊರಕಿಸಿಕೊಡುವಲ್ಲಿ ಘಟಕದ ವತಿಯಿಂದ ಶ್ರಮಿಸಲಾಗುವುದು ಎಂದು ಅಶೋಕಸ್ವಾಮಿ ಹೇರೂರ ಈ ಸಂಧರ್ಭದಲ್ಲಿ ಭರವಸೆ ನೀಡಿದರು.
ಔಷಧ ಮತ್ತು ಕಾಂತಿವರ್ಧಕ ಕಾಯ್ದೆ-1940 ಮತ್ತು ನಿಯಮ-1945,ಫ಼ಾರ್ಮಸಿ ಕಾಯ್ದೆ-1948, ನಿಯಮ-1968 ಹಾಗೂ ನಿಭಂದನೆಗಳು-2015,ಬೆಲೆ ನಿಯಂತ್ರಣ ಆದೇಶ ಇವು ಬೇರೆ ಬೇರೆಯಾಗಿದ್ದು , ಅವುಗಳನ್ನು ಆಯಾ ರೀತಿಯಲ್ಲಿಯೇ ಪಾಲೀಸಬೇಕಾಗುತ್ತದೆ ಎಂದು ವಿವರಿಸಿದ ಹೇರೂರ, ಕೇಂದ್ರ-ರಾಜ್ಯ ಸರಕಾರಗಳು ಸಮಸ್ಯೆಗಳ ಬಗ್ಗೆ ಗಮನ ಹರಿಸದಿದ್ದಲ್ಲಿ ,ನ್ಯಾಯಾಲಯದಲ್ಲಿ ಅವುಗಳನ್ನು ಪ್ರಶ್ನಿಸಿ, ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಈ ಸಂಧರ್ಭದಲ್ಲಿ ಹೇಳಿದರು.
ಎರಡು ದಶಕಗಳಿಂದಲೂ ರಾಜ್ಯ ಫ಼ಾರ್ಮಸಿ ಕೌನ್ಸಿಲ್ ಚುನಾವಣಾ ನಡೆದಿರಲಿಲ್ಲ.ಈಗ ಚುನಾವಣಾ ಪ್ರಕ್ರೀಯೆ ನಡೆದಿದೆ.ಒಟ್ಟು ಆರು ಅಭ್ಯರ್ಥಿಗಳಿಗಾಗಿ ಚುನಾವಣೆ ನಡೆಯಲಿದ್ದು ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಕಲಬುರ್ಗಿ,ರಾಯಚೂರು ವಿಭಾಗಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.ನಾಮಿನೇಷನ್ ಕೂಡ ಸಲ್ಲಿಸಲಾಗಿದೆ.
ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳ ಆಯ್ಕೆಗೆ ಶ್ರಮಿಸಬೇಕಾದ ಹೊಣೆಗಾರಿಕೆ ಇರುವುದರಿಂದ ತಾವು ಸ್ಪರ್ದೆಯಿಂದ ದೂರ ಉಳಿಯುತ್ತಿರುವುದಾಗಿ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.
ಇತ್ತೀಚೆಗೆ ಫ಼ೆಡರೇಶನ್ ಆಫ಼್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಈ ಸಂಸ್ಥೆಯ ನಿರ್ದೇಶಕರಾಗಿ ಅವಿರೋಧವಾಗಿ ಅಯ್ಕೆಯಾಗಿರುವ ಹೇರೂರ ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಮೈಸೂರು, ಆಡಳಿತ ಕಾರ್ಯದರ್ಶಿ ಮಂಜುನಾಥ ಬಿಡದಿ,ಹಿರಿಯ ಜಂಟಿ ಕಾರ್ಯದರ್ಶಿ ಮೇದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಯಚೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಮುರುಘೇಂದ್ರ ,ಧಾರವಾಡ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್, ಗಂಗಾವತಿ ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜ್ ಪ್ರಿನ್ಸಿಪಾಲ್ ಮಂಜುನಾಥ ಹಿರೇಮಠ, ಔಷಧ ವ್ಯಾಪಾರಿಗಳಾದ ಲೋಹಿತ್ ಐಲಿ, ಪಶುಪತಿ ಪಾಟೀಲ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.